ಲಂಡನ್‌ನಲ್ಲಿ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಪಡೆದ ಬೆಂಗಳೂರಿನ 10 ವರ್ಷದ ಬಾಲಕ ವಿಹಾನ್!

ಲಂಡನ್‌ನಲ್ಲಿ ನಡೆದ ವರ್ಷದ ಪ್ರತಿಷ್ಠಿತ ವನ್ಯಜೀವಿ ಛಾಯಾಗ್ರಾಹಕ (ಡಬ್ಲ್ಯುಪಿವೈ) ವಿಭಾಗದ ಸ್ಪರ್ಧೆಯಲ್ಲಿ ಬೆಂಗಳೂರಿನ 10 ವರ್ಷದ ವಿಹಾನ್ ತಾಳ್ಯ ವಿಕಾಸ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಬೆಂಗಳೂರು: ಲಂಡನ್‌ನಲ್ಲಿ ನಡೆದ ವರ್ಷದ ಪ್ರತಿಷ್ಠಿತ ವನ್ಯಜೀವಿ ಛಾಯಾಗ್ರಾಹಕ (ಡಬ್ಲ್ಯುಪಿವೈ) ವಿಭಾಗದ ಸ್ಪರ್ಧೆಯಲ್ಲಿ ಬೆಂಗಳೂರಿನ 10 ವರ್ಷದ ವಿಹಾನ್ ತಾಳ್ಯ ವಿಕಾಸ್ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದಿದ್ದಾರೆ.

ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಆಯೋಜಿಸಿದ್ದ ಸ್ಪರ್ಧೆಯು ಪ್ರಪಂಚದಾದ್ಯಂತದ ಅತ್ಯುತ್ತಮ ವನ್ಯಜೀವಿ ಛಾಯಾಗ್ರಹಣವನ್ನು ಪ್ರದರ್ಶಿಸುತ್ತದೆ. ಈ ಕಾರ್ಯಕ್ರಮವನ್ನು ‘ಆಸ್ಕರ್ ಆಫ್ ಛಾಯಾಗ್ರಹಣ’ ಎಂದೂ ಪರಿಗಣಿಸಲಾಗಿದೆ. ವಿಹಾನ್ ಅವರ ನಗರದ ಹೊರವಲಯದಲ್ಲಿ ಕ್ಲಿಕ್ ಮಾಡಿದ ಜೇಡದ ಜೊತೆಗೆ ಕೃಷ್ಣನ ಕೆತ್ತನೆಯಿರುವ ಕಲ್ಲಿನ ಫೋಟೊವು ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿದೆ.

ವನ್ಯಜೀವಿ ಛಾಯಾಗ್ರಹಣದಲ್ಲಿ ತಮ್ಮ ತಂದೆಯಿಂದ ಸ್ಫೂರ್ತಿ ಪಡೆದ ವಿಹಾನ್, ‘ಈ ಪ್ರಶಸ್ತಿಯನ್ನು ಸ್ವೀಕರಿಸಲು ನಾನು ತುಂಬಾ ಸಂತೋಷ ಮತ್ತು ಉತ್ಸುಕನಾಗಿದ್ದೇನೆ. ನಾನು ಛಾಯಾಗ್ರಹಣ ಮಾಡಲು ಇಷ್ಟಪಡುತ್ತೇನೆ. ಏಕೆಂದರೆ, ಇದು ನಮಗೆ ಸೃಜನಾತ್ಮಕವಾಗಿ ಯೋಚಿಸಲು ಮತ್ತು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ’ ಎನ್ನುತ್ತಾರೆ.555500:03/02:00

ವಿಹಾನ್ ತಾಳ್ಯ ವಿಕಾಸ್

ಈ ವರ್ಷದ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ 95 ದೇಶಗಳಿಂದ ಭಾಗವಹಿಸಲಿದ್ದರು. ಒಟ್ಟು 50,000 ಚಿತ್ರಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಟಾಪ್ 100 ಅನ್ನು ಸ್ಪರ್ಧೆಗೆ ಪರಿಗಣಿಸಲಾಯಿತು ಮತ್ತು 11 ಅನ್ನು ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಲಾಯಿತು. ವಿಹಾನ್ 10 ವರ್ಷದೊಳಗಿನವರ ವಿಭಾಗದ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ವಿಹಾನ್ ಅವರ ಚಿತ್ರವು WPY59 ಸಂಗ್ರಹದ ಭಾಗವಾಗಲಿದೆ ಮತ್ತು ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನಲ್ಲಿ ವರ್ಷದ ವನ್ಯಜೀವಿ ಛಾಯಾಗ್ರಾಹಕ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಇದು ವನ್ಯಜೀವಿಗಳ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು 4 ಖಂಡಗಳಲ್ಲಿ ಸುಮಾರು 25 ಸ್ಥಳಗಳಲ್ಲಿ ಪ್ರವಾಸ ಮಾಡುತ್ತದೆ.

ಕುಮಾರನ್ಸ್ ಶಾಲೆಯ ವಿದ್ಯಾರ್ಥಿಯಾಗಿರುವ ವಿಹಾನ್ ಅವರ ಫೋಟೊ ಪ್ರಯಾಣವು 7ನೇ ವಯಸ್ಸಿನಲ್ಲಿ ಅವರ ತಂದೆಯ ಮಾರ್ಗದರ್ಶನದಲ್ಲಿ ಪ್ರಾರಂಭವಾಯಿತು.

ವನ್ಯಜೀವಿ ಮತ್ತು ಸಂರಕ್ಷಣಾ ಛಾಯಾಗ್ರಾಹಕ ಮತ್ತು ಸ್ಪರ್ಧೆಯ ಜಡ್ಜ್ ಆಗಿದ್ದ ಧೃತಿಮಾನ್ ಮುಖರ್ಜಿ ಮಾತನಾಡಿ, ‘ವಿಹಾನ್ ಅವರ ಚಿತ್ರವು ಕಲೆ, ಪರಿಕಲ್ಪನೆ, ಸಂರಕ್ಷಣೆ ಮತ್ತು ವಿಜ್ಞಾನದ ಉದ್ದೇಶವನ್ನು ಬಹಳ ಚೆನ್ನಾಗಿ ಪೂರೈಸಿದೆ’ ಎಂದು ಹೇಳಿದರು. ಚಿತ್ರದ ಹಿಂದಿನ ಚಿಕ್ಕ ಹುಡುಗನ ಆಲೋಚನಾ ಕ್ರಮ ಮತ್ತು ಚಿತ್ರದ ಸಂಯೋಜನೆಯನ್ನು ಅವರು ಶ್ಲಾಘಿಸಿದರು.

Source : https://www.kannadaprabha.com/karnataka/2023/oct/23/10-year-old-bengaluru-boy-bags-best-photographer-award-in-london-504850.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Views: 0

Leave a Reply

Your email address will not be published. Required fields are marked *