Viral News: 11ನೇ ವರ್ಷದಲ್ಲಿ ಕಂಪನಿಯ ಸಿಇಒ ಆದ ಈ ಪೋರಿ; ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಥೆ ..

Pixie Curtis: 10- 15 ರವರೆಗೂ ಚೆಷ್ಟೆ ಮಾಡಿ ಬೆಳೆದವರೇ ಹೆಚ್ಚು.ಆದರೆ ಇಲ್ಲೊಬ್ಬ ಪುಟ್ಟ ಹುಡುಗಿ ತನ್ನ 11ನೇ ವರ್ಷಕ್ಕೆ ಕಂಪೆನಿಯ ಸಿಇಒ ಆಗಿದ್ದಾಳೆ. 

ನವದೆಹಲಿ: ನಮ್ಮ ಬಾಲ್ಯವನ್ನು ಒಂದು ಬಾರಿ ನೆನೆಸಿಕೊಂಡರೆ ಪೆಟ್ಟು ತಿಂದ ದಿನಗಳೇ ಹೆಚ್ಚು. ಅದರಲ್ಲೂ 10- 15 ರವರೆಗೂ ಚೆಷ್ಟೆ ಮಾಡಿ ಬೆಳೆದವರೇ ಹೆಚ್ಚು.ಆದರೆ ಇಲ್ಲೊಬ್ಬ ಪುಟ್ಟ ಹುಡುಗಿ ತನ್ನ 11ನೇ ವರ್ಷಕ್ಕೆ ಕಂಪೆನಿಯ ಸಿಇಒ ಆಗಿದ್ದಾಳೆ.

 ಆಸ್ಟ್ರೇಲಿಯಾದ 11 ವರ್ಷದ ಬಾಲಕಿ ಪಿಕ್ಸೀ, ಕರ್ಟಿಸ್ ಎಳೆ ವಯಸ್ಸಿನಲ್ಲಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಪುಟ್ಟ ಪೋರಿ ಕರ್ಟಿಸ್ ಎಂಬ ಬ್ಯುಸಿನೆಸ್​ ಮಾಡುತ್ತಿದ್ದಾಳೆ. ಆದರೆ ಬೇಸರದ ಸಂಗತಿ ಎಂದರೆ 12 ವರ್ಷದ ಹುಟ್ಟು ಹಬ್ಬದ ವೇಳೆ ತನ್ನ ಉದ್ಯಮವನ್ನು ತ್ಯಜಿಸಲಿದ್ದಾರೆ. 

ಪಿಕ್ಸೀ,  ಕೋರೊನ ಸಂದರ್ಭದಲ್ಲಿ ಮಕ್ಕಳ ಆಟಿಕೆಗಳ ತಯಾರಿಕೆ ಮಾರಾಟವನ್ನು ಸಣ್ಣ ಮಟ್ಟದಲ್ಲಿ ಆರಂಭಿಸಿದರು. ಫಿಢ್ಜಟ್  ಸ್ಫಿನ್ನರ್ ಆಟಿಕೆ ಗೆ ಬಹಳ ಬೇಡಿಕೆ ಇತ್ತು. ಕೋರೊನ ಇದ್ದಿದ್ದರಿಂದ ಆನ್​ಲೈನ್​ನಲ್ಲಿ  ವ್ಯವಹಾರ ಮಾಡಬೇಕಾಯಿತು. ಆದರೂ ವ್ಯಾವಹಾರದಲ್ಲಿ ತಿಂಗಳಿಗೆ 1,33,000 ಡಾಲರ್ ಹಣ ಸಂಪಾದಿಸುತ್ತಾಳೆ.

ಅಂದರೆ ತಿಂಗಳಿಗೆ 1 ಕೋಟಿ ರೂನಷ್ಟು ಆದಾಯ ಗಳಿಸುತ್ತಾಳೆ. ಆದರೆ ಈಗ ಪಿಕ್ಸೀ, 12ನೇ ಹುಟ್ಟುಹಬ್ಬ  ವೇಳೆ ತನ್ನ ಉದ್ಯಮವನ್ನು ಬಿಟ್ಟು ಓದಿನ ಕಡೆ ಮುಖ ಮಾಡಲಿದ್ದಾಳೆ. ಇನ್ನು 11 ವರ್ಷದ ಪೋರಿಗೆ  140K ಫಾಲೋವರ್ಸ್‌ ಹೊಂದಿದ್ದಾಳೆ. ಆದರೆ ಅದೇನೆ ಇರಲಿ ಇಷ್ಟು ಚಿಕ್ಕ ವಯಸ್ಸಿಗೆ ಉದ್ಯಮಿ ಆಗಿರುವುದೇ ರೋಚಕದ ವಿಷಯ. 

Source : https://zeenews.india.com/kannada/viral/a-girl-who-became-the-ceo-of-a-company-in-11th-year-149101

Leave a Reply

Your email address will not be published. Required fields are marked *