Japanese man dog: ಜಪಾನ್ ಮೂಲದ ವ್ಯಕ್ತಿ 16 ಲಕ್ಷ ರೂ. ಖರ್ಚು ಮಾಡಿ ಶ್ವಾನವಾಗಿ ಬದಲಾಗಿದ್ದಾನೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇವನದ್ದೇ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ.
ನವದೆಹಲಿ: ಜಪಾನ್ ಮೂಲದ ವ್ಯಕ್ತಿಯೊಬ್ಬ ಶ್ವಾನವಾಗಿ ಬದಲಾಗಿದ್ದಾನೆ! ಇದು ಅಚ್ಚರಿಯಾದರೂ ನಿಜ. ಶ್ವಾನವಾಗಿ ಬದಲಾಗಲು ಆತ ಬರೋಬ್ಬರಿ 16 ಲಕ್ಷ ರೂ. ಖರ್ಚು ಮಾಡಿದ್ದಾನೆ. ಹೌದು, ಇದನ್ನು ನೀನು ನಂಬಲೇಬೇಕು.
ಜಪಾನ್ ಮೂಲದ ವ್ಯಕ್ತಿ 16 ಲಕ್ಷ ರೂ. ಖರ್ಚು ಮಾಡಿ ಶ್ವಾನವಾಗಿ ಬದಲಾಗಿದ್ದಾನೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಇವನದ್ದೇ ಸುದ್ದಿ ಸಖತ್ ಸೌಂಡ್ ಮಾಡುತ್ತಿದೆ. ಈತ ಶ್ವಾನನಾಗಿ ಬದಲಾಗಿರುವ ವಿಡಿಯೋ ವೈರಲ್ ಆಗುತ್ತಿದೆ.
ಟೋಕೋ ಎಂಬಾತನೇ ಶ್ವಾನನಾಗಿ ಬದಲಾಗಿರುವ ವ್ಯಕ್ತಿಯಾಗಿದ್ದಾನೆ. ಈತನಿಗೆ ಮೊದಲಿಂದಲೂ ಶ್ವಾನ ಜೀವನದ ಅನುಭವ ಪಡೆಯಬೇಕೆಂಬ ಆಸೆ ಇತ್ತಂತೆ. ಹೀಗಾಗಿ ಈತ ಥೇಟ್ ನಿಜವಾದ ಶ್ವಾನದಂತೆಯೇ ಕಾಣುವ ಹೈಪರ್ ರಿಯಲಾಸ್ಟಿಕ್ ಎನ್ನುವ ಡಾಗ್ ಕಾಸ್ಟೂಮ್ ಧರಿಸಿದ್ದಾನೆ.
ಈ ಕಾಸ್ಟೂಮ್ ತಯಾರಿಸಲು 40 ದಿನ ಹಿಡಿದಿದೆ. ಇದನ್ನು ಧರಿಸಿ ಆತ ಪಾರ್ಕ್‌ಗೆ ವಾಕಿಂಗ್ ಹೋಗಿದ್ದಾರೆ. ಇದೀಗ ಆತ ನಿಜವಾದ ಶ್ವಾನವೇ ಎನ್ನುವಷ್ಟು ನೈಜವಾಗಿ ಕಾಣುತ್ತಿದ್ದಾನೆ. ಶ್ವಾನವಾಗಿ ಬದಲಾಗಿರುವ ಟೋಕೋ ಜೊತೆಗೆ ಇತರೆ ಶ್ವಾನಗಳೂ ಸಹ ಬೆರೆಯುತ್ತಿವೆ. ಆತನ ವಿಡಿಯೋ ಇದೀಗ ವೈರಲ್ ಆಗಿದೆ.