Virat Kohli: ಒಂದು ಸಣ್ಣ ಬ್ರೇಕ್​ನ ನಂತರ…”ವಿರಾಟ” ದರ್ಶನ

Virat Kohli since returning from his break from cricket

2019ರ ಬಳಿಕ ಒಂದೇ ಒಂದು ಶತಕವಿಲ್ಲ…ಕಳಪೆ ಫಾರ್ಮ್​…2021 ರಲ್ಲಿ ನಾಯಕತ್ವಕ್ಕೆ ರಾಜೀನಾಮೆ…ಹೀಗೆ ಕ್ರಿಕೆಟ್ ಅಂಗಳದಲ್ಲಿ ನಾನಾ ಕಾರಣಗಳಿಂದ ಸುದ್ದಿಯಾಗಿದ್ದ ವಿರಾಟ್ ಕೊಹ್ಲಿ (Virat Kohli) ಕಳೆದ ವರ್ಷ ಒಂದು ಸಣ್ಣ ಬ್ರೇಕ್ ತೆಗೆದುಕೊಂಡಿದ್ದರು. ಈ ಬ್ರೇಕ್ ಬೆನ್ನಲ್ಲೇ ನಾನಾ ಟೀಕೆ-ಟಿಪ್ಪಣಿಗಳಿಗೆ ಕೊಹ್ಲಿ ಗುರಿಯಾಗಿದ್ದರು. ಅಷ್ಟೇ ಅಲ್ಲದೆ ಕೊಹ್ಲಿಯ ಖೇಲ್ ಖತಂ, ಕಿಂಗ್ ಕೊಹ್ಲಿಯ ಯುಗಾಂತ್ಯ, ವಿದಾಯ ಹೇಳುವುದು ಉತ್ತಮ ಎಂಬಿತ್ಯಾದಿ ಸುದ್ದಿಗಳು ಕೂಡ ಹರಿದಾಡಿದ್ದವು. ಇವೆಲ್ಲದರ ನಡುವೆ ನೀರವ ಮೌನವಹಿಸಿದ್ದ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದರು. ಈ ಒಂದು ಸಣ್ಣ ಬ್ರೇಕ್​ ನಂತರ ಕಿಂಗ್ ಕೊಹ್ಲಿ ಮತ್ತೆ ಕಾಣಿಸಿಕೊಂಡಿದ್ದು ಏಷ್ಯಾಕಪ್​​ನಲ್ಲಿ…ಆ ಬಳಿಕ ವಿರಾಟ್ ಕೊಹ್ಲಿ ತಮ್ಮ ಹಳೆಯ ವಿರಾಟ ರೂಪ ತೋರಿಸಲಾರಂಭಿಸಿದ್ದಾರೆ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.

ಹೌದು, ಒಂದು ಸಣ್ಣ ವಿಶ್ರಾಂತಿಯ ಬಳಿಕ ಮರಳಿದ್ದ ವಿರಾಟ್ ಕೊಹ್ಲಿ ಇದುವರೆಗೆ ಒಟ್ಟು 26 ಇನಿಂಗ್ಸ್ ಆಡಿದ್ದಾರೆ. ಈ ವೇಳೆ ಕಿಂಗ್ ಕೊಹ್ಲಿಯ ಬ್ಯಾಟ್​ನಿಂದ ಸಿಡಿದಿರುವುದು ಬರೋಬ್ಬರಿ 4 ಶತಕಗಳು. ಅಂದರೆ 2019 ರಿಂದ 2021ರವರೆಗೆ ಒಂದೇ ಒಂದು ಸೆಂಚುರಿ ಸಿಡಿಸದ ಕೊಹ್ಲಿ ಇದೀಗ ಬ್ಯಾಕ್ ಟು ಬ್ಯಾಕ್ ಶತಕಗಳ ಮೂಲಕ ಅಬ್ಬರಿಸಿದ್ದಾರೆ. ಅಷ್ಟೇ ಯಾಕೆ ಇದೇ ಅವಧಿಯಲ್ಲಿ ಕಿಂಗ್ ಕೊಹ್ಲಿ ಬ್ಯಾಟ್​ನಿಂದ 7 ಅರ್ಧಶತಕಗಳು ಕೂಡ ಮೂಡಿಬಂದಿವೆ.

ಅಂದರೆ ಎಲ್ಲರ ಟೀಕೆಗಳನ್ನು ಬದಿಗಿಟ್ಟು, ಒಂದು ತಿಂಗಳುಗಳ ಕಾಲ ಬ್ಯಾಟ್ ಮುಟ್ಟದೇ ಮೈದಾನದಿಂದ ಹೊರಗುಳಿದಿದ್ದ ಕೊಹ್ಲಿ ಆ ಬಳಿಕ ಆಡಿದ 26 ಇನಿಂಗ್ಸ್​ಗಳಲ್ಲಿ 11 ಬಾರಿ 50+ ರನ್​ ಕಲೆಹಾಕಿದ್ದಾರೆ. ಈ ವೇಳೆ ಬರೋಬ್ಬರಿ 99 ಫೋರ್ ಹಾಗೂ 35 ಸಿಕ್ಸ್​ಗಳನ್ನೂ ಕೂಡ ಸಿಡಿಸಿದ್ದಾರೆ.

ಇನ್ನು ಈ  ಬ್ರೇಕ್ ಬಳಿಕ ಆಡಿದ 26 ಇನಿಂಗ್ಸ್​ ಮೂಲಕ ಕಲೆಹಾಕಿರುವುದು ಬರೋಬ್ಬರಿ 1155 ರನ್​ಗಳು. ಅಂದರೆ ಕಿಂಗ್ ಕೊಹ್ಲಿ ತಮ್ಮ ಹಳೆಯ ಚಾರ್ಮ್​ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಏಕೆಂದರೆ ವಿರಾಟ್ ಕೊಹ್ಲಿ ಕಂಬ್ಯಾಕ್ ಮಾಡಿದ ಬಳಿಕ ಆಡಿದ ಟಿ20 ಇನಿಂಗ್ಸ್​ಗಳಲ್ಲಿ 70ರ ಸರಾಸರಿಯಲ್ಲಿ ರನ್​ಗಳಿಸಿದ್ದಾರೆ. ಇನ್ನು ಏಕದಿನ ಹಾಗೂ ಟೆಸ್ಟ್​ನಲ್ಲಿ 82 ರ ಸರಾಸರಿಯಲ್ಲಿ ರನ್ ಪೇರಿಸಿದ್ದಾರೆ. ಇದರ ನಡುವೆ ಟಿ20 ಯಲ್ಲಿ ಚೊಚ್ಚಲ ಶತಕ, 4 ಏಕದಿನ ಪಂದ್ಯಗಳಲ್ಲಿ 3 ಶತಕಗಳನ್ನೂ ಕೂಡ ಬಾರಿಸಿದ್ದಾರೆ.

ಇದನ್ನೂ ಓದಿ: Virat Kohli: ಕಿಂಗ್ ಕೊಹ್ಲಿಯ ಅಬ್ಬರಕ್ಕೆ ಸಚಿನ್ ದಾಖಲೆ ಉಡೀಸ್

ಇದೀಗ ಶತಕಗಳ ಮೇಲೆ ಶತಕ ಸಿಡಿಸುತ್ತಾ…ದಾಖಲೆಗಳನ್ನು ಮುರಿಯುತ್ತಾ…ಹೊಸ ದಾಖಲೆಗಳನ್ನು ನಿರ್ಮಿಸುತ್ತಾ ಸಾಗಿರುವ ಕಿಂಗ್ ಕೊಹ್ಲಿಯ ಬಗ್ಗೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಅದು ಕೂಡ ಈ ಹಿಂದೆ ಟೀಕೆಗಳನ್ನು ಮಾಡಿದ ಕೆಲ ಮಾಜಿ ಆಟಗಾರರ ಬಾಯಿಂದಲೇ ಎಂಬುದು ವಿಶೇಷ.

ಒಟ್ಟಿನಲ್ಲಿ ಒಂದು ಸಣ್ಣ ಬ್ರೇಕ್ ನಂತರ… ವಿರಾಟ್ ಕೊಹ್ಲಿ ಮರಳಿದ್ದಾರೆ. ಆದರೆ ಈ ಬಾರಿ ಹಳೆಯ ಕಿಂಗ್ ಕೊಹ್ಲಿಯಾಗಿ ಎಂಬುದಷ್ಟೇ ಇಲ್ಲಿ ವ್ಯತ್ಯಾಸ.

 

 

 

 

source https://tv9kannada.com/sports/cricket-news/virat-kohli-since-returning-from-his-break-from-cricket-kannada-news-zp-au50-502472.html

Leave a Reply

Your email address will not be published. Required fields are marked *