Virat Kohli: ಭಾರತ 90 ರನ್​ಗೆ 6 ವಿಕೆಟ್ ಕಳೆದುಕೊಂಡಿದ್ದರೂ ಡ್ರೆಸ್ಸಿಂಗ್ ರೂಮ್​ನಲ್ಲಿ ಮಜಾ ಮಾಡುತ್ತಿದ್ದ ಕೊಹ್ಲಿ-ರೋಹಿತ್

Suryakumar Rohit Sharma and Virat Kohli

ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ (India vs Australia) ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ನೀಡಿದ ಪ್ರದರ್ಶನವನ್ನು ಸದ್ಯಕ್ಕಂತು ಮರೆಯಲು ಸಾಧ್ಯವಿಲ್ಲ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಹತ್ತಿರವಾಗುತ್ತಿದ್ದಂತೆ ಟೀಮ್ ಇಂಡಿಯಾ ಆಡಿದ ಈ ಕಳಪೆ ಆಟ ಕೋಚ್ ರಾಹುಲ್ ದ್ರಾವಿಡ್​ಗೆ (Rahul Dravid) ಹಾಗೂ ಮ್ಯಾನೇಜ್ಮೆಂಟ್​ಗೆ ತಲೆನೋವಾಗಿ ಪರಿಣಮಿಸಿದೆ. ಮೊದಲ ಏಕದಿನದಲ್ಲೂ ಬ್ಯಾಟಿಂಗ್​ನಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮ ಎಂಬಂತಿರಲಿಲ್ಲ. ಕೆಎಲ್ ರಾಹುಲ್ ಹಾಗೂ ಜಡೇಜಾ ಹೋರಾಡಿದ ಪರಿಣಾಮ ಗೆಲುವು ಸಾಧಿಸಿತು. ಟಾಪ್ ಆರ್ಡರ್​​ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದರು. ದ್ವಿತೀಯ ಏಕದಿನದಲ್ಲೂ ಇದೇ ಮುಂದುವರೆಯಿತು. ಈ ಬಾರಿ ಯಾವೊಬ್ಬ ಬ್ಯಾಟರ್ ಕ್ರೀಸ್ ಕಚ್ಚಿ ಆಡಲಿಲ್ಲ. ತಂಡದ ಪರ ವಿರಾಟ್ ಕೊಹ್ಲಿ (Virat Kohli) 31 ರನ್ ಗಳಿಸಿದ್ದೇ ಹೆಚ್ಚು. ಹೀಗಿದ್ದರೂ ಭಾರತದ ಡ್ರೆಸ್ಸಿಂಗ್ ರೂಮ್​ನಲ್ಲಿ ಮಾತ್ರ ಯಾವುದೇ ಟೆನ್ಶನ್ ಕಾಣಲಿಲ್ಲ.

ಮಿಚೆಲ್ ಸ್ಟಾರ್ಕ್ ಬೌಲಿಂಗ್ ಬಿರುಗಾಳಿಗೆ ಮೊದಲ ಓವರ್​ನಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಟೀಮ್ ಇಂಡಿಯಾ 50 ರನ್ ಆಗುವ ಮುನ್ನ ಅರ್ಧ ಬ್ಯಾಟರ್​ಗಳು ಪೆವಿಲಿಯನ್ ಸೇರಿಕೊಂಡರು. ತಂಡದ ಮೊತ್ತ 91 ರನ್ ಆಗುವಾಗ 7 ವಿಕೆಟ್ ಕಳೆದುಕೊಂಡಿತು. ಆದರೆ, ಈ ಸಂದರ್ಭ ಭಾರತದ ಡ್ರೆಸ್ಸಿಂಗ್ ರೂಮ್ ಮಾತ್ರ ಜಾಲಿ ಮೂಡ್​ನಲ್ಲಿತ್ತು.

19ನೇ ಓವರ್​ನ 6ನೇ ಎಸೆತಕ್ಕೂ ಮುನ್ನ ಭಾರತ 90 ರನ್​ಗೆ 6 ವಿಕೆಟ್ ಕಳೆದುಕೊಂಡಿತ್ತು. ಆಗ ಕ್ಯಾಮೆರಾ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಕಡೆ ಕಣ್ಣು ಹಾಯಿಸಿದೆ. ಇಲ್ಲಿ ವಿರಾಟ್ ಕೊಹ್ಲಿ ಅವರು ತಮಾಷೆಯಾಗಿ ಬೌಲಿಂಗ್ ಕೋಚ್ ಪರಸ್ ಮಂಬ್ರೆ ಅವರ ತಲೆಮೇಲೆ ಕೈಯಾಡಿಸಿದ್ದಾರೆ. ಇದನ್ನು ಕಂಡು ಅಲ್ಲೆ ಇದ್ದ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಜೋರಾಗಿ ನಗುತ್ತಿರುವುದು ಕಂಡುಬಂದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

 

WPL 2023: 41 ರನ್​ಗಳ ಜಯ: ಪ್ಲೇಆಫ್ ಪ್ರವೇಶಿಸಲು RCB ತಂಡದ ಲೆಕ್ಕಾಚಾರ ಹೀಗಿದೆ

ಇದು 117 ರನ್​ಗೆ ಆಲೌಟ್ ಆಗುವ ವಿಕೆಟ್ ಅಲ್ಲ: ರೋಹಿತ್ ಶರ್ಮಾ

ಪಂದ್ಯ ಮುಗಿದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ ವೇಳೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ”ಒಂದು ಪಂದ್ಯವನ್ನು ಸೋತರೆ ಖಂಡಿತವಾಗಿಯೂ ಬೇಸರವಾಗುತ್ತದೆ. ಬ್ಯಾಟಿಂಗ್​ನಲ್ಲಿ ನಾವು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಬೋರ್ಡ್​ನಲ್ಲಿ ಇನ್ನಷ್ಟು ರನ್​ಗಳು ಬೇಕಾಗಿದ್ದವು. ಇದು 117 ರನ್​ಗೆ ಆಲೌಟ್ ಆಗುವ ವಿಕೆಟ್ ಅಲ್ಲವೇ ಅಲ್ಲ. ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಂಡು ಸಾಗಿದೆವು. ಇದು ನಮ್ಮನ್ನು ಇನ್ನಷ್ಟು ಹಿಂದಕ್ಕೆ ಕೊಂಡೊಯ್ಯಿತು. ಇಂಥಹ ಪರಿಸ್ಥಿತಿಯಿಂದ ಕಮ್​ಬ್ಯಾಕ್ ಮಾಡುವುದು ಕಷ್ಟ. ಇವತ್ತು ನಮ್ಮ ದಿನ ಆಗಿರಲಿಲ್ಲ,” ಎಂದು ರೋಹಿತ್ ಸೋಲಿಗೆ ಕಾರಣವನ್ನು ವಿವರಿಸಿದ್ದಾರೆ.

ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಂದುಕೊಂಡ ಯೋಜನೆಯಂತೆ ಯಾವುದೂ ನಡೆಯಲಿಲ್ಲ. ಮಿಚೆಲ್ ಸ್ಟಾರ್ಕ್ (5 ವಿಕೆಟ್) ಬೌಲಿಂಗ್ ದಾಳಿಗೆ ಮೊದಲ ಓವರ್​ನ ಮೂರನೇ ಎಸೆತದಲ್ಲೇ ಭಾರತ ಶುಭ್​ಮನ್ ಗಿಲ್ ಅವರ ವಿಕೆಟ್ ಕಳೆದುಕೊಂಡಿತು. ರೋಹಿತ್ ಶರ್ಮಾ (13,) ಸೂರ್ಯ ಕುಮಾರ್​ ಯಾದವ್​ (0), ಕೆಎಲ್​ ರಾಹುಲ್​ (9), ಹಾರ್ದಿಕ್​ ಪಾಂಡ್ಯ (1), ಕೊಹ್ಲಿ (31), ಜಡೇಜಾ (16), ಅಕ್ಷರ್ ಪಟೇಲ್ (29) ಸೇರಿದಂತೆ ಯಾರುಕೂಡ ಹೆಚ್ಚುಹೊತ್ತು ಕ್ರಿಸ್​ನಲ್ಲಿ ನಿಲ್ಲಿಲ್ಲ. ಭಾರತ 26 ಓವರ್​ಗಳಲ್ಲಿ 117 ರನ್​ಗೆ ಸರ್ವಪತನ ಕಂಡಿತು. ಸುಲಭ ಟಾರ್ಗೆಟ್ ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಆರಂಭಿಕರಾದ ಟ್ರಾವಿಸ್ ಹೆಡ್ 51 ರನ್​ ಮತ್ತು ಮಿಚೆಲ್ ಮಾರ್ಷ್ 66 ರನ್​ ಗಳಸಿ 10 ವಿಕೆಟ್​ಗಳ ಅಮೋಘ ಗೆಲುವಿಗೆ ಕಾರಣರಾದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/virat-kohli-rohit-sharma-suryakumar-yadav-sharing-a-laugh-in-dressing-room-when-india-90-6-viral-video-vb-au48-539439.html

Leave a Reply

Your email address will not be published. Required fields are marked *