Virat Kohli: ಹೊಸ ವರ್ಷನ್‌ನಲ್ಲಿ ಅಬ್ಬರಿಸಿದ ವಿರಾಟ್: ಇಂದೋರ್‌ನಲ್ಲಿ ಅಟ್ಯಾಕಿಂಗ್ ಕ್ರಿಕೆಟ್‌ನ ಟೀಸರ್‌ ರಿಲೀಸ್‌

ವಿರಾಟ್ ಕೊಹ್ಲಿ 400 ದಿನಗಳ ಬಳಿಕ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್ ಆಡಿದರು. ಇಂದೋರ್‌ನಲ್ಲಿ ವಿರಾಟ್ ಕೊಹ್ಲಿ ಅಟ್ಯಾಕಿಂಗ್ ಕ್ರಿಕೆಟ್ ಮೂಲಕ ಗಮನ ಸೆಳೆದರು. ವಿರಾಟ್‌ ಕೊಹ್ಲಿ ಅವರ ಬ್ಯಾಟಿಂಗ್ ನೋಡಿದ ಅಭಿಮಾನಿಗಳು ಫುಲ್ ಖುಷ್ ಆದರು.

ಹೋಳ್ಕರ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಿದರೆ, 400 ದಿನಗಳಿಗಿಂತಲೂ ಹೆಚ್ಚು ಟಿ20 ಕ್ರಿಕೆಟ್ ಆಡಿಲ್ಲ ಎಂದು ಭಾಸವೇ ಆಗಲಿಲ್ಲ.

ಆ ರೀತಿಯ ಬ್ಯಾಟಿಂಗ್ ಮಾಡಿ ಗಮನ ಸೆಳೆದರು. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಶಾಂತವಾಗಿ ಬ್ಯಾಟಿಂಗ್ ಮಾಡಿದ್ದ ಕೊಹ್ಲಿ, ಅಫ್ಘಾನಿಸ್ತಾನ ವಿರುದ್ಧ ಎರಡನೇ ಟಿ20 ಪಂದ್ಯದಲ್ಲಿ ತಮ್ಮ ಅಸಲಿ ಅಟ್ಯಾಕಿಂಗ್ ಶಾಟ್‌ಗಳ ಮೂಲಕ ಗಮನ ಸೆಳೆದರು.

ರೋಹಿತ್ ಶರ್ಮಾ ಔಟ್ ಆಗುತ್ತಿದ್ದಂತೆ ಮೈದಾನಕ್ಕೆ ಇಳಿದ ವಿರಾಟ್ ಅಬ್ಬರಿಸಿದರು. ಬರುವಾಗಲೇ ಡ್ರೆಸ್ಸಿಂಗ್ ರೂಮ್‌ನಿಂದಲೇ ಸೆಟ್‌ ಆಗಿ ಬಂದಂಗೆ ಕಂಡ ವಿರಾಟ್‌ ಹೊಸ ವರ್ಷನ್‌ನಲ್ಲಿ ಕಂಗೊಳಿಸಿದರು. ವಿರಾಟ್‌ ಆಟ ನೋಡಿದವರಿಗೆ ಇವರಿಗೆ ವಯಸ್ಸು ಆಗಿದೆ ಎಂದು ಅನಿಸಲೇ ಇಲ್ಲ. ಯುವಕರು ನಾಚಿಸುವಂತೆ ಬ್ಯಾಟಿಂಗ್ ಮಾಡಿ ಗಮನ ಸೆಳೆದರು. ಅಲ್ಲದೆ ತಮ್ಮ ಹೊಸ ಲುಕ್‌ನ ಟೀಸರ್ ಬಿಡುಗಡೆ ಮಾಡಿದರು.

ಹ್ಯಾರೀಸ್‌ಗೆ ಬಾರಿಸಿದ ಸಿಕ್ಸರ್‌

ವಿರಾಟ್‌ ಆಟದ ಟೀಸರ್‌ ನೋಡಿದ ಅಭಿಮಾನಿಗಳು ಫುಲ್ ಖುಷ್ ಆದರು. ನಿಮಗೆಲ್ಲಾ ಟಿ20 ವಿಶ್ವಕಪ್‌ 2022ರಲ್ಲಿ ಭಾರತ, ಪಾಕಿಸ್ತಾನ ನಡುವಿನ ಪಂದ್ಯ ನೆನಪಿರಬಹುದು. ಈ ಪಂದ್ಯದಲ್ಲಿ ವಿರಾಟ್‌ ಆಡಿದ ಧಾಟಿಯಲ್ಲೇ, ಎರಡನೇ ಪಂದ್ಯದಲ್ಲಿ ಬ್ಯಾಟ್ ಮಾಡಿದರು. ಇನ್ನು ಪಾಕಿಸ್ತಾನ ವಿರುದ್ಧ ಹ್ಯಾರೀಸ್ ರೌಫ್‌ಗೆ ಸ್ಟ್ರೇಟ್ ಸಿಕ್ಸರ್ ಬಾರಿಸಿದರಲ್ಲ ಅದೇ ರೀತಿ ಶಾಟ್‌ ಅಫ್ಘಾನಿಸ್ತಾನ ವಿರುದ್ಧವೂ ಬಾರಿಸಿದರು.

ವಿರಾಟ್‌ ಕೊಹ್ಲಿ ಪಾಕಿಸ್ತಾನ ವಿರುದ್ಧ ಹ್ಯಾರೀಸ್ ರೌಫ್‌ಗೆ ಬಾರಿಸಿದ ಸಿಕ್ಸರ್‌ ಎಲ್ಲರ ಗಮನ ಸೆಳೆದಿತ್ತು. ಅದೇ ಶಾಟ್‌ಗೆ ಹೋಲುವಂತ ಮತ್ತೊಂದು ಹೊಡೆತವನ್ನು ಇಂದೋರನಲ್ಲಿ ಪ್ರಯೋಗಿಸಿದರು.

ನವೀನ್‌ ಎಸೆತದಲ್ಲೂ ಬೌಂಡರಿ

ನವೀನ್‌ ಉಲ್‌ ಹಕ್ ಅವರ ಎಸೆತದಲ್ಲಿ ವಿರಾಟ್ ಈ ಶಾಟ್ ಪ್ರಯೋಗಿಸಿದರು. ನವೀನ್‌ ಉಲ್‌ ಹಕ್‌ ಐದನೇ ಸ್ಟಂಪ್‌ ಮೇಲೆ ಚೆಂಡನ್ನು ಎಸೆದರು. ವಿರಾಟ್‌ ಕೊಂಚ ಹಿಂದೆ ಹೋಗಿ ಸ್ಟ್ರೇಟ್‌ ಬೌಂಡರಿಯತ್ತ ಚೆಂಡನ್ನು ಬಾರಿಸಿದರು. ಈ ಶಾಟ್‌ ನೋಡಿದ ಅಭಿಮಾನಿಗಳು ಫುಲ್ ಖುಷ್. ಹ್ಯಾರೀಸ್ ರೌಫ್‌ಗೆ ಬಾರಿಸಿದ ರೀತಿ ಈ ಶಾಟ್ ಬಾರಿಸಿದರು. ಆದರೆ ನವೀನ್‌ ಉಲ್‌ ಹಕ್‌ ಅವರಿಗೆ ಬಾರಿಸಿದ ಶಾಟ್‌ನಲ್ಲಿ ವಿರಾಟ್‌ಗೆ ಬೌಂಡರಿ ಸಿಕ್ಕಿತು.

ಈ ಶಾಟ್‌ ನೋಡಿದ ಅಭಿಮಾನಿಗಳು ಫುಲ್ ಖುಷ್‌.. ಇದರಿಂದ ವಿರಾಟ್‌ ತಮ್ಮ ವಿರುದ್ಧ ಟೀಕೆಗೆ ಮೈದಾನದಲ್ಲಿ ಉತ್ತರ ನೀಡಿದರು. ಅಸಲಿಗೆ ವಿರಾಟ್ ಕೊಹ್ಲಿ ಅವರು ಟಿ20 ಪಂದ್ಯಗಳನ್ನು ಆಡುವಾಗ ಅವರ ಇಂಟೆಂಟ್ ಸರಿಯಿರುವುದಿಲ್ಲ ಎಂದೇ ಹೇಳುತ್ತಿದ್ದರು. ಅಫ್ಘಾನಿಸ್ತಾನ ವಿರುದ್ಧ ಅಟ್ಯಾಕ್ಕಿಂಗ್ ಶಾಟ್ ಆಡುವ ಮೂಲಕ ವಿರಾಟ್‌ ತಮ್ಮಲ್ಲಿರುವ ಕ್ಷಮತೆಯನ್ನು ಸಾಬೀತು ಮಾಡಿದರು. ಈ ಮೂಲಕ ಈಗ ಬಿಡುಗಡೆ ಆಗಿದ್ದು ಟೀಸರ್‌ ಅಷ್ಟೇ ಪಿಶ್ಚರ್ ಆನಾ ಬಾಕಿ ಹೈ ಎಂಬ ಸಂದೇಶ ಸಾರಿದರು.

ವಿರಾಟ್ ಕೊಹ್ಲಿ ಅವರ ಹೊಸ ವರ್ಷನ್‌ನಲ್ಲಿ ಬ್ಯಾಟಿಂಗ್ ಮಾಡುವುದನ್ನು ನೋಡಿದರೆ, ಐಪಿಎಲ್‌ನಲ್ಲಿ ರನ್‌ ಗಳ ಮಹಲ್ ಕಟ್ಟುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದು ತೋರುತ್ತದೆ. ಇನ್ನು ಜೂನ್‌ ಜುಲೈನಲ್ಲಿ ಟಿ20 ವಿಶ್ವಕಪ್‌ ನಡೆಯಲಿದ್ದು, ಇದೇ ವೇಳೆ ರಿಯಲ್ ಪಿಶ್ಚರ್ ರಿಲೀಸ್ ಆಗುವ ಸಾಧ್ಯತೆ ಇದೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *