ಕೆನಡಾ ನಾಗರಿಕರಿಗೆ ಭಾರತಕ್ಕೆ ಪ್ರವೇಶವಿಲ್ಲ ! ವಿಸಾ ಸರ್ವಿಸ್ ಸಸ್ಪೆಂಡ್

Visa Service Canadian Citizens:ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ BLS ಇಂಟರ್ನ್ಯಾಷನಲ್ ತನ್ನ ಕೆನಡಾದ ವೆಬ್‌ಸೈಟ್‌ನಲ್ಲಿ ಈ ಕುರಿತು ಸಂದೇಶವನ್ನು ಪೋಸ್ಟ್ ಮಾಡಿದೆ.

Visa Service Canadian Citizens : ಭಾರತ ಕೆಂಡಾ ನಡುವಿನ ಸಂಬಂಧ ದಿನೇ ದಿನೇ ಹದಗೆಡುತ್ತಿದೆ. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಭಾರತ ಕೆನಡಾದ ನಾಗರಿಕರಿಗೆ ವೀಸಾ ಸೇವೆಗಳನ್ನು ಅನಿರ್ದಿಷ್ಟವಾಗಿ ಸ್ಥಗಿತಗೊಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಭಾರತ ವೀಸಾಗಳನ್ನು ಅಮಾನತುಗೊಳಿಸಿರುವುದು ಇದೇ ಮೊದಲು. 

ಮಾಧ್ಯಮ ವರದಿಗಳ ಪ್ರಕಾರ, ವೀಸಾ ಸೇವೆಗಳ ಅಮಾನತು ಕುರಿತು ಯಾವುದೇ ಔಪಚಾರಿಕ ಪ್ರಕಟಣೆಯನ್ನು ಮಾಡಲಾಗಿಲ್ಲ. ಆದರೆ ಕೆನಡಾದಲ್ಲಿ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ BLS ಇಂಟರ್ನ್ಯಾಷನಲ್ ತನ್ನ ಕೆನಡಾದ ವೆಬ್‌ಸೈಟ್‌ನಲ್ಲಿ ಈ ಕುರಿತು ಸಂದೇಶವನ್ನು ಪೋಸ್ಟ್ ಮಾಡಿದೆ. ‘ಭಾರತೀಯ ಮಿಷನ್ ನ  ಪ್ರಮುಖ ಮಾಹಿತಿ.. 21ನೇ ಸೆಪ್ಟೆಂಬರ್ 2023 ರಿಂದ [ಗುರುವಾರ] ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೂ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎನ್ನುವ ಸಂದೇಶವನ್ನು ನೀಡಲಾಗಿದೆ. ಆದರೂ  ಸುದ್ದಿ ಸಂಸ್ಥೆ ANI ಪ್ರಕಾರ, ಈ ಸೂಚನೆಯನ್ನು ಸ್ವಲ್ಪ ಸಮಯದ ನಂತರ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. 

ಜೂನ್‌ನಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜಾರ್ ಅವರ ಹತ್ಯೆಯಲ್ಲಿ ಭಾರತೀಯ ಏಜೆಂಟ್‌ಗಳ ‘ಸಂಭವನೀಯ’ ಭಾಗಿತ್ವದ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪದ ನಂತರ ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿದೆ. ಕೆನಡಾ ಈ ಘಟನೆಯ ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಯನ್ನು ಹೊರಹಾಕಿದ್ದಕ್ಕೆ ಪ್ರತೀಕಾರವಾಗಿ, ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಲಾಯಿತು.

ಕೆನಡಾದಲ್ಲಿ ಖಾಲಿಸ್ತಾನಿ ಪರ ಹೆಚ್ಚುತ್ತಿರುವ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಭಾರತ-ಕೆನಡಾ ಸಂಬಂಧಗಳಲ್ಲಿ ಉದ್ವಿಗ್ನತೆ ಉಂಟಾಗಿದೆ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/world/canadian-citizens-will-not-be-able-to-enter-india-visa-service-suspended-159924

Leave a Reply

Your email address will not be published. Required fields are marked *