Vitamin D: ಬೇಸಿಗೆಯಲ್ಲಿ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಿರುವ ಲಕ್ಷಣಗಳಿವು.

ಸೂರ್ಯನ ಬಿಸಿಲಿನಿಂದ ನಮ್ಮ ದೇಹಕ್ಕೆ ವಿಟಮಿನ್ ಡಿ (Vitamin D) ಸಿಗುತ್ತದೆ. ಇದರ ಜೊತೆಗೆ ಕೆಲವು ಆಹಾರಗಳು ಮತ್ತು ಸಪ್ಲಿಮೆಂಟ್​ಗಳು ಸಹ ನಮ್ಮ ದೇಹಕ್ಕೆ ವಿಟಮಿನ್ ಡಿಯನ್ನು ಒದಗಿಸಲು ಸಹಕಾರಿಯಾಗಿವೆ. ವಿಟಮಿನ್ ಡಿ ಕೇವಲ ವಿಟಮಿನ್ ಮಾತ್ರವಲ್ಲ; ಹಾರ್ಮೋನ್ ಅಥವಾ ಪ್ರೋಹಾರ್ಮೋನ್ ಕೂಡ ಆಗಿದೆ. ವಿಟಮಿನ್ ಡಿ ಕೊರತೆಯಿಂದ ಮೂಳೆ ನೋವು, ಕೀಲು ನೋವು, ಸ್ನಾಯು ಸೆಳೆತ, ಮೂಳೆ ಅಥವಾ ಹಲ್ಲುಗಳ ಬೆಳವಣಿಗೆಯ ಸಮಸ್ಯೆಗಳು ಮುಂತಾದ ತೊಂದರೆಗಳು ಉಂಟಾಗುತ್ತವೆ. ವಿಟಮಿನ್ ಡಿ ಕೊರತೆಯು ಹೈಪರ್​ಥೈರಾಯ್ಡಿಸಮ್​ಗೆ ಕೂಡ ಕಾರಣವಾಗುತ್ತದೆ

ವಿಟಮಿನ್ ಡಿ ಕೊರತೆಯ ಸಾಮಾನ್ಯ ಲಕ್ಷಣಗಳು:

  • ಮೂಳೆ ನೋವು ಮತ್ತು ಕೀಲು ನೋವು
  • ಆಯಾಸ
  • ಸ್ನಾಯು ನೋವು
  • ಕೂದಲು ಉದುರುವಿಕೆ
  • ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳು
  • ಖಿನ್ನತೆಯ ಮನಸ್ಥಿತಿಯಂತಹ ಮಾನಸಿಕ ಬದಲಾವಣೆಗಳು
  • ಗಾಯಗಳು ಗುಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು

ಹೆಚ್ಚಿನ ಪ್ರಮಾಣದ ಪಾಲಿಫಿನಾಲ್‌ಗಳನ್ನು ಹೊಂದಿರುವ ಡ್ರೈಫ್ರೂಟ್​ಗಳು ಉರಿಯೂತದ ಪರಿಣಾಮಗಳನ್ನು ತೋರಿಸುವ ಮೂಲಕ ರೋಗನಿರೋಧಕ ಶಕ್ತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ವಿಟಮಿನ್ ಡಿ ಕಡಿಮೆಯಾಗಿದ್ದರೆ ವಿಟಮಿನ್ ಡಿ ಸಮೃದ್ಧವಾಗಿರುವ ಕೆಲವು ಡ್ರೈಫ್ರೂಟ್​ಗಳನ್ನು ಸೇವಿಸಬಹುದು.

. ಒಣಗಿದ ಖರ್ಜೂರದಲ್ಲಿ ಕಂಡುಬರುವ ಪ್ರಮುಖ ವಿಟಮಿನ್‌ಗಳಲ್ಲಿ ಒಂದು ವಿಟಮಿನ್ ಡಿ. ಇದು ಅನೇಕ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಣದ್ರಾಕ್ಷಿ ವಿಟಮಿನ್‌ ಎ, ಕೆ, ಫೈಬರ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಪೋಷಕಾಂಶಗಳನ್ನು ಹೊಂದಿದೆ. ವಾಲ್‌ನಟ್‌ಗಳು ಜೀವಸತ್ವಗಳು, ಖನಿಜಗಳು ಮತ್ತು ಆರೋಗ್ಯಕರ ಕೊಬ್ಬುಗಳಿಂದ ತುಂಬಿದ ಪೋಷಕಾಂಶ ದಟ್ಟವಾದ ನಟ್ಸ್ ಆಗಿದೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಇ ಮತ್ತು ಡಿಗಳಿಂದ ತುಂಬಿರುತ್ತದೆ.

ಬಾದಾಮಿಯು ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಜೀವಸತ್ವಗಳು ಮತ್ತು ಖನಿಜಗಳ ಅತ್ಯುತ್ತಮ ಮೂಲವಾಗಿದೆ. ಬಾದಾಮಿ ಇತರ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಹಾಗೇ, ವಿಟಮಿನ್ ಡಿ ಹೊಂದಿರುವ ಡ್ರೈಫ್ರೂಟ್​ಗಳಲ್ಲಿ ಒಂದಾಗಿದೆ. ಏಪ್ರಿಕಾಟ್​ ನೋಡಲು ಚಿಕ್ಕದಾಗಿರುತ್ತವೆ. ಆದರೆ, ಇದರಲ್ಲಿ ಹೇರಳವಾದ ಪೌಷ್ಟಿಕಾಂಶದ ಅಂಶಗಳಿರುತ್ತವೆ. ಈ ಡ್ರೈಫ್ರೂಟ್​ ವಿಟಮಿನ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ.

ಗೋಡಂಬಿಗಳು ರುಚಿಕರವಾದ ಡ್ರೈಫ್ರೂಟ್ ಆಗಿದ್ದು, ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಗೋಡಂಬಿಯು ವಿಟಮಿನ್ ಇ ಮತ್ತು ವಿಟಮಿನ್ ಕೆ ಸೇರಿದಂತೆ ಹಲವಾರು ಪ್ರಮುಖ ಜೀವಸತ್ವಗಳ ಸಮೃದ್ಧ ಮೂಲವಾಗಿದೆ. ಪಿಸ್ತಾಗಳು ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬಿನ ಸಮೃದ್ಧ ಮೂಲವಾಗಿರುವುದರ ಜೊತೆಗೆ, ವಿಟಮಿನ್ ಡಿ, ಬಿ 6, ಪೊಟ್ಯಾಸಿಯಮ್ ಮತ್ತು ತಾಮ್ರದಂತಹ ಪ್ರಯೋಜನಕಾರಿ ಪೋಷಕಾಂಶಗಳನ್ನು ಸಹ ಒಳಗೊಂಡಿದೆ.

Source : https://tv9kannada.com/health/vitamin-d-deficiency-signs-of-vitamin-d-problems-in-summer-sct-802592.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *