
ಇಸ್ಲಾಮಾಬಾದ್: ಸದ್ಯ ಪಾಕಿಸ್ತಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನವಾಗುತ್ತಿದ್ದಂತೆ, ಪಾಕಿಸ್ತಾನದ ಹಲವು ನಗರಗಳು ಹೊತ್ತಿ ಉರಿದಿದೆ. ಇಸ್ಲಾಮಾಬಾದ್, ಲಾಹೋರ್, ಕರಾಚಿಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸುತ್ತಿದ್ದರು.
President PTI Sindh abducted from Karachi. Democracy is suspended in this country, people must save Pakistan now. #ReleaseImranKhan pic.twitter.com/lBAHizTaiM
— PTI (@PTIofficial) May 9, 2023
ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಆಲ್ ಖಾದಿರ್ ಟ್ರಸ್ಟ್ ನ ಭ್ರಷ್ಟಾಚಾರದ ಆರೋಪದಲ್ಲಿ ಇಮ್ರಾನ್ ಖಾನ್ ಇಂದು ಇಸ್ಲಾಮಾಬಾದ್ ಹೈಕೋರ್ಟ್ ಗೆ ಹಾಜರಾಗಿದ್ದರು. ಈ ವೇಳೆ ಪಾಕ್ ರೇಂಜರ್ಸ್ ರೂಮಿಗೆ ನುಗ್ಗಿ ಇಮ್ರಾನ್ ಖಾನ್ ರನ್ನು ಅರೆಸ್ಟ್ ಮಾಡಲಾಗಿದೆ.
ಪಾಕಿಸ್ತಾನದ ಅರೆಸೇನೆ, ಇಮ್ರಾನ್ ಖಾನ್ ರನ್ನು ಎಳೆದೊಯ್ಯುತ್ತಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೇಳೆ ಇಮ್ರಾನ್ ಖಾನ್ ಹಾಗೂ ವರ ವಕೀಲರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದೆ. ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಇಮ್ರಾನ್ ಖಾನ್ ಬೆಂಬಲಿಗರು ಆಕ್ರೋಶಗೊಂಡಿದ್ದಾರೆ.
The post ಇಮ್ರಾನ್ ಖಾನ್ ಬಂಧನವಾಗುತ್ತಿದ್ದಂತೆ ಹೊತ್ತಿ ಉರಿದೇ ಬಿಡ್ತು ಪಾಕಿಸ್ತಾನ : ವಿಡಿಯೋ ನೋಡಿ…! first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/oa51L0W
via IFTTT