Weight Loss Tips: ತೂಕ ಇಳಿಸಿಕೊಳ್ಳಬೇಕೇ? ರಾತ್ರಿ ವೇಳೆ ಈ ತಪ್ಪನ್ನು ಮಾಡಲೇಬೇಡಿ

Weight Loss: ಪ್ರಸ್ತುತ, ಬಹುತೇಕ ಜನರ ಸಾಮಾನ್ಯ ಸಮಸ್ಯೆ ಎಂದರೆ ತೂಕ ಹೆಚ್ಚಳ. ನೀವೂ ಕೂಡ ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವವರಲ್ಲಿ ಒಬ್ಬರಾಗಿದ್ದರೆ ರಾತ್ರಿ ವೇಳೆ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಿ. 

Weight Loss Tips: ತೂಕ ಹೆಚ್ಚಳ, ಸ್ಥೂಲಕಾಯತೆ ಹಲವು ರೋಗಗಳ ಮೂಲ. ಹಾಗಾಗಿಯೇ ಉತ್ತಮ ಆರೋಗ್ಯಕ್ಕಾಗಿ ತೂಕ ಕಡಿಮೆ ಮಾಡುವುದು ತುಂಬಾ ಅಗತ್ಯ. ಆದರೆ, ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸಿದರೂ, ನಿತ್ಯ ಯೋಗ ವ್ಯಾಯಾಮಗಳನ್ನು ಮಾಡಿದರೂ ಕೂಡ ಅಷ್ಟು ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ದೂರುವವರೇ ಹೆಚ್ಚು. 

ತಜ್ಞರ ಪ್ರಕಾರ, ತೂಕ ಇಳಿಸಿಕೊಳ್ಳಲು  ಬಯಸುವವರು ದೈನಂದಿನ ಜೀವನದಲ್ಲಿ ತಾವು ಮಾಡುವ ಸಾಮಾನ್ಯ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ರಾತ್ರಿ ವೇಳೆ ಈ ಒಂದು ತಪ್ಪನ್ನು ಮಾಡಲೇಬಾರದು ಎಂದು ಹೇಳಲಾಗುತ್ತದೆ. ಯಾವುದೀ ತಪ್ಪುಗಳು ಎಂದು ಹೇಳುವುದಾದರೆ… 

ತೂಕ ಇಳಿಕೆಗಾಗಿ ನಿಮ್ಮ ದೈನಂದಿನ ಜೀವನದಲ್ಲಿ ಈ ತಪ್ಪುಗಳಾಗದಂತೆ ನಿಗಾವಹಿಸಿ: 
ಉಪಹಾರವನ್ನು ಬಿಡಬೇಡಿ: 

ಕೆಲವರು ತೂಕ ಇಳಿಕೆಯಲ್ಲಿ ಹೆಚ್ಚು ತಿನ್ನಬಾರದು ಎಂದು ಬೆಳಗಿನ ಉಪಹಾರವನ್ನು ತಪ್ಪಿಸುತ್ತಾರೆ. ಆದರೆ, ಬೆಳಗಿನ ಆಹಾರ ಆರೋಗ್ಯಕ್ಕೆ ಬಹಳ ಮುಖ್ಯವಾಗಿದ್ದು ಇದನ್ನು ಬಿಡುವುದರಿಂದ ಗ್ಯಾಸ್ಟ್ರೀಕ್ ಸೇರಿದಂತೆ ಕೆಲವು ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.

ರಾತ್ರಿ ಹೆಚ್ಚಾಗಿ ತಿನ್ನಬೇಡಿ: 
ತೂಕ ಇಳಿಕೆ ಪ್ರಕ್ರಿಯೆಯಲ್ಲಿ ಮೊದಲು ಗಮನವಹಿಸಬೇಕಾದ ವಿಷಯವೆಂದರೆ ರಾತ್ರಿ ವೇಳೆ ಅತಿಯಾಗಿ ತಿನ್ನುವುದನ್ನು ತಪ್ಪಿಸಬೇಕು. ಕೆಲವರು ಆಹಾರವನ್ನು ವ್ಯರ್ಥ ಮಾಡಬಾರದೆಂದು ಹೆಚ್ಚುವರಿ ಆಹಾರವನ್ನು ಸೇವಿಸುತ್ತಾರೆ. ಇನ್ನೂ ಕೆಲವರಿಗೆ ರಾತ್ರಿ ಹೊಟ್ಟೆ ಭರ್ತಿಯಾಗಿ ತಿನ್ನದಿದ್ದರೆ ನಿದ್ರೆಯೇ ಬರುವುದಿಲ್ಲ. ಆದರೆ, ರಾತ್ರಿ ವೇಳೆ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುವುದರಿಂದ ಅದು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. 

ಸಾಕಷ್ಟು ನೀರು ಕುಡಿಯಿರಿ: 
ಆರೋಗ್ಯ ತಜ್ಞರ ಪ್ರಕಾರ, ರಾತ್ರಿ ವೇಳೆ ಅತಿಯಾಗಿ ತಿನ್ನುವುದನ್ನು ತಪ್ಪಿಸುವುದರ ಜೊತೆಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಹೆಚ್ಚು ನೀರು ಕುಡಿಯುವುದರಿಂದ ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು. ಇದಲ್ಲದೆ, ಹೆಚ್ಚು ನೀರು ಸೇವನೆಯು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. 

ಆಹಾರವನ್ನು ಚೆನ್ನಾಗಿ ಜಗಿದು ಸೇವಿಸಿ: 
ನಿತ್ಯ ರಾತ್ರಿ ವೇಳೆ ಸಮತೋಲಿತ ಆಹಾರವನ್ನು ತೆಗೆದುಕೊಳ್ಳಿ. ಮಾತ್ರವಲ್ಲ, ಸಂಜೆ ಜಂಕ್ ಫುಡ್ಸ್ ಸೇವನೆಯನ್ನು ತಪ್ಪಿಸಿ. ಇದಲ್ಲದೆ, ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಹೊಟ್ಟೆ ದೀರ್ಘ ಸಮಯದವರೆಗೆ ತುಂಬಿರುತ್ತದೆ. ಮಾತ್ರವಲ್ಲ, ಚೆನ್ನಾಗಿ ಜಗಿದು ತಿನ್ನುವುದರಿಂದ ಅತಿಯಾಗಿ ತಿನ್ನುವುದನ್ನು ಕೂಡ ತಪ್ಪಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಸಮಗ್ರ ಸುದ್ದಿ ಖಚಿತಪಡಿಸುವುದಿಲ್ಲ.   

Source: https://zeenews.india.com/kannada/health/never-make-this-mistake-at-night-for-weight-loss-136612

Views: 0

Leave a Reply

Your email address will not be published. Required fields are marked *