“ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರಕ್ಕೆ ಸರ್ಕಾರದ ನಿರ್ಧಾರಕ್ಕೆ ಸ್ವಾಗತ: ಚಿತ್ರದುರ್ಗ ಶಿಕ್ಷಕರ ಕ್ಷೇತ್ರ”

ಚಿತ್ರದುರ್ಗ ಸೆ. 08

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಯನ್ನು ಇವಿಎಂ ಬದಲು ಮತ ಪತ್ರಗಳ ಮೂಲಕ ಮಾಡಲು ನಿರ್ಧಾರ ಮಾಡಿರುವ ರಾಜ್ಯ ಸರ್ಕಾರದ ಸಚಿವ ಸಂಪುಟದ ಕ್ರಮವನ್ನು ಚಿತ್ರದುರ್ಗ ಜಿಲ್ಲಾ ಶಿಕ್ಷಕರ ಕ್ಷೇತ್ರ ಸ್ವಾಗತಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರನ್ನು ಅಭಿನಂದನೆಯನ್ನು ಸಲ್ಲಿಸಿದ್ದಾರೆ.


ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ಪಕ್ಷದ ಶಿಕ್ಷಕರ ಕ್ಷೇತ್ರದ ಜಿಲ್ಲಾಧ್ಯಕ್ಷರಾದ ಮುದಸಿರ್, ಸ್ವಾತಂತ್ರ್ಯ ಬಂದಾಗಿನಿಂದಲೂ ಚುನಾವಣೆಗಳು ಮತ ಪತ್ರದ ಮೂಲಕ ನಡೆಯುತ್ತಿದ್ದವು ಆದರೆ ಇತ್ತೀಚೆಗೆ ತಂತ್ರಜ್ಞಾನದ ನೆಪದಲ್ಲಿ ಇವಿಎಂಗಳನ್ನು ಚುನಾವಣೆಯಲ್ಲಿ ಅಳವಡಿಸಲಾಗಿದೆ ಇದರಲ್ಲಿ ಮತದಾನ ಮಾಡಿದವರು ನಾವು ಯಾವ ಪಕ್ಷಕ್ಕೆ ಮತವನ್ನು ಹಾಕಿದ್ದೇವೂ ಅದಕ್ಕೆ ಹೋಗದೇ ಬೇರೆ ಪಕ್ಷಕ್ಕೆ ಮತಗಳು ಹೋಗುತ್ತವೆ. ಇದರಿಂದ ಒಂದು ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ, ಇದರ ವಿರುದ್ದ ರಾಹುಲ್ ಗಾಂಧಿಯವರ ಧ್ವನಿಯನ್ನು ಎತ್ತಿದ್ದಾರೆ, ಇದಕ್ಕೆ ಸ್ಪಂದಿಸುವಂತೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳು ಹಾಗು ಸಚಿವ ಸಂಪುಟ ಮುಂಬರುವ ಸ್ಥಳಿಯ
ಚುನಾವಣೆಯಿಂದ ಹಿಡಿದು ಯಾವುದೇ ಚುನಾವಣೆಯಲ್ಲಿ ಇವಿಎಂ.ಬದಲು ಮತ ಪತ್ರಗಳ ಮೂಲಕ ಚುನಾವಣೆಯನ್ನು ನಡೆಸಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದಿದ್ದಾರೆ.


ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕ್ರಮವನ್ನು ಸ್ವಾಗತಿಸಿದ್ದು ಇದನ್ನು ಬರೀ ನಮ್ಮ ರಾಜ್ಯ ಮಾತ್ರವಲ್ಲ ದೇಶದ ಎಲ್ಲಾ ರಾಜ್ಯಗಳು ಸಹಾ ಮುಂದಿನ ಚುನಾವಣೆಗಳನ್ನು ಇವಿಎಂ ಬದಲು ಮತಪತ್ರಗಳ ಮೂಲಕ ಮಾಡಲು ಮುಂದಾಗಬೇಕಿದೆ ಇದರಿಂದ ನಿಜವಾದ ಅಭ್ಯರ್ಥಿಗಳು ಗೆಲುವಿಗೆ ಸಹಕಾರಿಯಾಗಲಿದೆ ಎಂದ ಅವರು, ರಾಜ್ಯ ಸರ್ಕಾರ ಮತಪತ್ರಗಳ ಮೂಲಕ ಚುನಾವಣೆ ನಡೆಸುವುದರ ಬಗ್ಗೆ ನಾಂದಿಯನ್ನು ಹಾಡಿದ್ದಾರೆ. ಇದನ್ನು ದೇಶದ ಎಲ್ಲಾ ರಾಜ್ಯಗಳು ಸಹಾ ಅನುಸರಿಸಬೇಕಿದೆ ಎಂದಿದ್ದಾರೆ.

Views: 15

Leave a Reply

Your email address will not be published. Required fields are marked *