IND vs WI: ಟಾಸ್ ಗೆದ್ದ ವೆಸ್ಟ್ ಇಂಡೀಸ್: ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೀಗಿದೆ.

Sports: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿ ಶುರುವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ. ಅದರಂತೆ ಟೀಮ್ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಲಿದೆ.

ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…

ಭಾರತ ಪ್ಲೇಯಿಂಗ್ ಇಲೆವೆನ್:ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ಗಿಲ್ (ನಾಯಕ),  ಧ್ರುವ್ಜುರೆಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ರವೀಂದ್ರಜಡೇಜಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ಯಾದವ್, ಜಸ್​ಪ್ರೀತ್ಬುಮ್ರಾ, ಮೊಹಮ್ಮದ್ಸಿರಾಜ್.

ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್: ತೇಜ್​ನರೈನ್ ಚಂದ್ರಪಾಲ್ಜಾನ್​ ಕ್ಯಾಂಪ್​ಬೆಲ್, ಅಲಿಕ್ ಅಥನಾಝ್, ಬ್ರಾಂಡನ್ ಕಿಂಗ್, ಶೈಹೋಪ್ (ವಿಕೆಟ್ ಕೀಪರ್), ರೋಸ್ಟನ್ಚೇಸ್ (ನಾಯಕ), ಜಸ್ಟಿನ್ಗ್ರೀವ್ಸ್, ಜೋಮೆಲ್ವಾರಿಕನ್, ಖಾರಿ ಪಿಯರೆ, ಜೋಹಾನ್ಲೇನ್, ಜೇಡನ್ಸೀಲ್ಸ್.

ಟೆಸ್ಟ್ ಮುಖಾಮುಖಿ:

ಭಾರತ ಮತ್ತು ವೆಸ್ಟ್ ಇಂಡೀಸ್​ ಟೆಸ್ಟ್ ಕ್ರಿಕೆಟ್​ನಲ್ಲಿ ಈವರೆಗೆ 100 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 23 ಪಂದ್ಯಗಳಲ್ಲಿ. ಇನ್ನು ವೆಸ್ಟ್ ಇಂಡೀಸ್ ತಂಡ 30 ಮ್ಯಾಚ್​ಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 47 ಪಂದ್ಯಗಳು ಡ್ರಾನಲ್ಲಿ ಕೊನೆಗೊಂಡಿದೆ.

ಇತ್ತ ಒಟ್ಟಾರೆ ಅಂಕಿ ಅಂಶಗಳ ಪ್ರಕಾರ, ಟೀಮ್ ಇಂಡಿಯಾ ವಿರುದ್ಧ ವೆಸ್ಟ್ ಇಂಡೀಸ್ ವಿರುದ್ಧ ಮೇಲುಗೈ ಹೊಂದಿದೆ. ಆದರೆ 2002 ರಿಂದ ವಿಂಡೀಸ್ ಪಡೆ ಭಾರತದ ವಿರುದ್ಧ ಒಂದೇ ಒಂದು ಟೆಸ್ಟ್ ಸರಣಿ ಗೆದ್ದಿಲ್ಲ ಎಂಬುದು ವಿಶೇಷ. ಹೀಗಾಗಿ ಈ ಬಾರಿ ಕೂಡ ಟೀಮ್ ಇಂಡಿಯಾವೇ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.

ವೆಸ್ಟ್ಇಂಡೀಸ್ ಟೆಸ್ಟ್ ತಂಡ: ರೋಸ್ಟನ್ಚೇಸ್ (ನಾಯಕ), ಜೋಮೆಲ್ವಾರಿಕನ್, ಕೆವ್ಲಾನ್ಆಂಡರ್ಸನ್, ಅಲಿಕ್ಅಥನಾಝ್, ಜಾನ್ಕ್ಯಾಂಪ್ಬೆಲ್, ತೇಜ್​ನರೈನ್ಚಂದ್ರಪಾಲ್, ಜಸ್ಟಿನ್ಗ್ರೀವ್ಸ್, ಶೈಹೋಪ್, ಟೆವಿನ್ಇಮ್ಲಾಚ್, ಅಲ್ಝಾರಿ ಜೋಸೆಫ್, ಬ್ರಾಂಡನ್ ಕಿಂಗ್, ಆಂಡರ್ಸನ್ಫಿಲಿಪ್, ಖಾರಿ ಪಿಯರೆ, ಜೇಡನ್ಸೀಲ್ಸ್, ಜೋಹಾನ್ಲೇನ್.

ಭಾರತ ಟೆಸ್ಟ್ ತಂಡ: ಶುಭ್​​ಮನ್ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ದೇವದತ್ಪಡಿಕ್ಕಲ್, ಧ್ರುವ್ಜುರೆಲ್ (ವಿಕೆಟ್ ಕೀಪರ್), ರವೀಂದ್ರಜಡೇಜಾ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಜಸ್​ಪ್ರೀತ್ಬುಮ್ರಾ, ಕುಲ್ದೀಪ್ಯಾದವ್, ಮೊಹಮ್ಮದ್ಸಿರಾಜ್, ಪ್ರಸಿದ್ಧ್ ಕೃಷ್ಣ, ನಿತೀಶ್ ಕುಮಾರ್ ರೆಡ್ಡಿ, ಎನ್ ಜಗದೀಸನ್ (ವಿಕೆಟ್ ಕೀಪರ್).

Views: 2

Leave a Reply

Your email address will not be published. Required fields are marked *