ಹುರಿಗಡಲೆ ಸೇವಿಸುವುದರಿಂದ ಯಾವೆಲ್ಲಾ ಲಾಭಗಳಿವೆ?

ದೇಹದ ತೂಕ ಇಳಿಸಿಕೊಳ್ಳಬೇಕಾದರೆ, ಆಗ ಮುಖ್ಯವಾಗಿ ಕ್ಯಾಲರಿ ದಹಿಸಬೇಕು ಮತ್ತು ಕ್ಯಾಲರಿ ಸೇವನೆಯನ್ನು ಕೂಡ ಕಡಿಮೆ ಮಾಡಬೇಕು. ಇದಕ್ಕಾಗಿ ಕೆಲವೊಂದು ಆಹಾರಗಳು ತುಂಬಾ ಪರಿಣಾಮಕಾರಿ ಆಗಿರುವುದು. ಮುಖ್ಯವಾಗಿ ತೂಕ ಇಳಿಸಲು ಮತ್ತು ಸ್ನಾಯುಗಳನ್ನು ಬಲಪಡಿಸಲು ಹುರಿದ ಕಡಲೆಕಾಳು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಹುರಿಗಡಲೆಕಾಳನ್ನು ಸೇವನೆ ಮಾಡಿದರೆ ಆಗ ಇದು ತುಂಬಾ ರುಚಿಕರ ಮಾತ್ರವಲ್ಲದೆ, ಆರೋಗ್ಯಕ್ಕೂ ಒಳ್ಳೆಯದು. ಇದನ್ನು ವಿಶ್ವದ ಹೆಚ್ಚಿನ ಭಾಗದ ಜನರು ತಮ್ಮ ಆಹಾರ ಕ್ರಮದಲ್ಲಿ ಬಳಕೆ ಮಾಡಿಕೊಂಡು ಬರುತ್ತಿರುವರು.

ಪ್ರೋಟೀನ್ ನಿಂದ ಸಮೃದ್ಧ​

ಹುರಿದ ಕಡಲೆಕಾಳಿನಲ್ಲಿ ಪ್ರೋಟೀನ್ಉತ್ತಮ ಪ್ರಮಾಣದಲ್ಲಿದ್ದು, ಇದು ಸಸ್ಯಾಹಾರಿಗಳಿಗೆ ಒಳ್ಳೆಯಯ ತಿಂಡಿ ಎಂದು ಪರಿಗಣಿಸಲಾಗಿದೆ. ಪ್ರೋಟೀನ್ ಸ್ನಾಯುಗಳನ್ನು ಸರಿಪಡಿಸುವುದು, ಬೆಳವಣಿಗೆ ಮತ್ತು ಸಂಪೂರ್ಣ ಆರೋಗ್ಯಕ್ಕೆ ಸಹಕಾರಿ.

ನಾರಿನಾಂಶ ಅಧಿಕ
ನಾರಿನಾಂಶವು ಜೀರ್ಣಕ್ರಿಯೆ ಆರೋಗ್ಯಕ್ಕೆ ಅತೀ ಅಗತ್ಯ ಮತ್ತು ಇದು ಕರುಳಿನ ಕ್ರಿಯೆಗಳನ್ನು ನಿಯಂತ್ರಿಸುವುದು. ಹುರಿದ ಕಡಲೆಕಾಳು ಸೇವನೆ ಮಾಡಿದರೆ ಆಗ ಇದರಲ್ಲಿ ಕರಗುವ ಮತ್ತು ಕರಗದ ನಾರಿನಾಂಶವಿದ್ದು, ಇದು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುವುದು ಮತ್ತು ಮಲಬದ್ಧತೆ ಕಡಿಮೆ ಮಾಡುವುದು.

ಗ್ಲೈಸೆಮಿಕ್ಸ್ ಇಂಡೆಕ್ಸ್ ಕಡಿಮೆ​

ಗ್ಲೈಸೆಮಿಕ್ಸ್ ಇಂಡೆಕ್ಸ್‌(ಜಿಐ) ಕಡಿಮೆ ಇರುವ ಆಹಾರಗಳು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಧಾನವಾಗಿ ಬಿಡುಗಡೆ ಮಾಡುವುದು ಮತ್ತು ಶಕ್ತಿಯನ್ನು ಕಾಪಾಡಿಕೊಂಡು, ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆಯಾಗದಂತೆ ತಡೆಯುವುದು. ಹುರಿದ ಕಡಲೆಕಾಳಿನಲ್ಲಿ ಗ್ಲೈಸೆಮಿಕ್ಸ್ ಇಂಡೆಕ್ಸ್ ತುಂಬಾ ಕಡಿಮೆ ಇದೆ ಮತ್ತು ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಲು ಸಹಕಾರಿ ಆಗಿದೆ.

ವಿಟಮಿನ್ ಮತ್ತು ಖನಿಜಾಂಶಗಳು
ಹುರಿದ ಕಡಲೆಕಾಳಿನಲ್ಲಿ ಕಬ್ಬಿಣಾಂಶ, ಮೆಗ್ನಿಶಿಯಂ, ಪೋಸ್ಪರಸ್ ಮತ್ತು ವಿಟಮಿನ್ ಬಿ ೬ ಅಂಶವು ಉತ್ತಮ ಪ್ರಮಾಣದಲ್ಲಿದೆ. ಇದು ದೇಹದ ವಿವಿಧ ಭಾಗಗಳ ಕಾರ್ಯನಿರ್ವಹಣೆಗೆ ಸಹಕಾರಿ. ಅದೇ ರೀತಿಯಾಗಿ ಇದು ಶಕ್ತಿ ಉತ್ಪಾದಿಸುವುದು ಮತ್ತು ಪ್ರತಿರೋಧಕ ವ್ಯವಸ್ಥೆಯನ್ನು ಕಾಪಾಡುವುದು.

ತೂಕ ನಿರ್ವಹಣೆ​

ಅಧಿಕ ಪ್ರೋಟೀನ್ ಮತ್ತು ನಾರಿನಾಂಶವು ಇದರಲ್ಲಿ ಇರುವ ಕಾರಣದಿಂಧಾಗಿ ಇದು ತೃಪ್ತಿ ಹೆಚ್ಚಿಸಿ, ಬಯಕೆ ಕಡಿಮೆ ಮಾಡುವುದು ಮತ್ತು ತೂಕ ನಿರ್ವಹಣೆಗೆ ಇದು ತುಂಬಾ ಪರಿಣಾಮಕಾರಿ ತಿಂಡಿ ಆಗಿದೆ. ಇದು ಎರಡು ಊಟದ ನಡುವೆ ಆಗುವ ಹಸಿವನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಆಗಿದೆ.

ಆ್ಯಂಟಿಆಕ್ಸಿಡೆಂಟ್ ಗುಣಗಳು​

ಕಡಲೆಕಾಳಿನಲ್ಲಿ ಫ್ಲಾವನಾಯ್ಡ್ ಮತ್ತು ಪಾಲಿಫೆನಾಲ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಗಳಿದ್ದು, ಇದು ಆಕ್ಸಿಡೇಟಿವ್ ಒತ್ತಡ ತಗ್ಗಿಸುವುದು ಮತ್ತು ಉರಿಯೂತ ಕಡಿಮೆ ಮಾಡಲು ಸಹಕಾರಿ ಆಗಿದೆ. ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಆಗ ಇದು ಸಂಪೂರ್ಣ ಆರೋಗ್ಯಕ್ಕೆ ಸಹಕಾರಿ ಆಗಿದೆ.

ಮೂಳೆಗಳ ಆರೋಗ್ಯಕ್ಕೆ
ಹುರಿದ ಕಡಲೆಕಾಳಿನಲ್ಲಿ ಕ್ಯಾಲ್ಸಿಯಂ, ಪೋಸ್ಪರಸ್ ಮತ್ತು ಮೆಗ್ನಿಶಿಯಂ ಅಂಶವು ಇದೆ. ಇದು ಮೂಳೆಗಳನ್ನು ಬಲಿಷ್ಠವಾಗಿಡಲು ಮತ್ತು ಆರೋಗ್ಯಕಾರಿ ಮೂಳೆಗಳಿಗೆ ಅತೀ ಅಗತ್ಯ.

ಹೃದಯದ ಆರೋಗ್ಯ​

ನಾರಿನಾಂಶ, ಪೊಟಾಶಿಯಂ ಮತ್ತು ಮೆಗ್ನಿಶಿಯಂ ಹೊಂದಿರುವ ಹುರಿಗಡಲೆಯು ಕೊಲೆಸ್ಟ್ರಾಲ್ ತಗ್ಗಿಸಿ, ರಕ್ತದೊತ್ತಡ ನಿಯಂತ್ರಿಸಿ ಹೃದಯದ ಆರೋಗ್ಯ ಕಾಪಾಡುವುದು ಮತ್ತು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಇದು ತಗ್ಗಿಸುವುದು.

Source : https://vijaykarnataka.com/lifestyle/health/roasted-chana-benefits-for-health/articleshow/111312807.cms?story=5

Leave a Reply

Your email address will not be published. Required fields are marked *