ಜ್ವರ ಇದ್ದಾಗ ಮೋಸಂಬಿ ಜ್ಯೂಸ್ ಕುಡಿಯಬೇಕೆ? ತಜ್ಞರು ಏನು ಹೇಳ್ತಾರೆ?

Mosambi Juice In Fever: ತುಂಬಾ ದಣಿದಿದ್ದಾಗ, ಹುಷಾರಿಲ್ಲದಿದ್ದಾಗ ಮೋಸಂಬಿ ಜ್ಯೂಸ್ ಸೇವಿಸುವುದರಿಂದ ಸ್ವಲ್ಪ ಚೇತರಿಕೆ ಕಾಣಬಹುದು. ಆದರೆ, ಜ್ವರ ಬಂದಾಗ ಮೋಸಂಬಿ ಜ್ಯೂಸ್ ಸೇವಿಸುವುದು ಒಳ್ಳೆಯದೇ ಎಂದು ಎಂದಾದರೂ ಯೋಚಿಸಿದ್ದೀರಾ? 

Mosambi Juice In Fever: ಜ್ವರ ಬಂದಾನ ಕುಡಿಯಲು, ತಿನ್ನಲು ಏನೂ ಬೇಕೆನಿಸುವುದಿಲ್ಲ. ಬಾಯಿಗೆ ರುಚಿಯೂ ಹತ್ತುವುದಿಲ್ಲ. ಜ್ವರದ ಸಮಯದಲ್ಲಿ, ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತದೆ. ಅಲ್ಲದೆ, ದೇಹವು ನಿರ್ಜಲೀಕರಣಗೊಳ್ಳುತ್ತದೆ. ಹಾಗಾಗಿ, ಇಂತಹ ಸಂದರ್ಭದಲ್ಲಿ ಪೌಷ್ಟಿಕ ಆಹಾರ ಸೇವಿಸಲು, ಸಾಧ್ಯವಾದಷ್ಟು ಮೃದು ಆಹಾರಗಳನ್ನು, ದ್ರವ್ಯಗಳನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. 

ಸಾಮಾನ್ಯವಾಗಿ, ತುಂಬಾ ದಣಿದಿದ್ದಾಗ, ಹುಷಾರಿಲ್ಲದಿದ್ದಾಗ  ಮೋಸಂಬಿ ಜ್ಯೂಸ್ ಸೇವಿಸುವುದರಿಂದ ಸ್ವಲ್ಪ ಚೇತರಿಕೆ ಕಾಣಬಹುದು. ಆದರೆ, ಜ್ವರ ಬಂದಾಗ ಮೋಸಂಬಿ ಜ್ಯೂಸ್ ಸೇವಿಸುವುದು ಒಳ್ಳೆಯದೇ ಎಂದು ಎಂದಾದರೂ ಯೋಚಿಸಿದ್ದೀರಾ? ಜ್ವರದ ಸಮಯದಲ್ಲಿ ಮೋಸಂಬಿ ಜ್ಯೂಸ್ ಕುಡಿಯಬಾರದು ಎಂದು ಹಲವರು ನಂಬುತ್ತಾರೆ.  ಆದರಿದು ಸತ್ಯವೇ? ಇದಕ್ಕೆ ವೈದ್ಯರು ಏನು ಹೇಳುತ್ತಾರೆ ಎಂದು ತಿಳಿಯೋಣ… 

ಜ್ವರವಿದ್ದಾಗ ಜ್ಯೂಸ್ ಸೇವನೆ ಆರೋಗ್ಯಕ್ಕೆ ಒಳ್ಳೆಯದೇ?
ಜ್ವರ ಇದ್ದಾಗ ರವೆ ಗಂಜಿ, ಹಣ್ಣಿನ ರಸದಂತಹ ಲಿಕ್ವಿಡ್ ಆಹಾರಗಳನ್ನು ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಕೆಲವರು ಮೋಸಂಬಿ ರಸವನ್ನು ಸಹ ಸೇವಿಸುತ್ತಾರೆ. ಇನ್ನೂ ಕೆಲವರು ಈ ಸಮಯದಲ್ಲಿ  ಮೋಸಂಬಿ ಜ್ಯೂಸ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ. ಆದರೆ, ಜ್ವರ ವಾಸಿಯಾಗಲು ದೇಹದ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಬಳಪಡಿಸುವುದು ಅಗತ್ಯವಾಗಿದ್ದು, ಈ ಸಂದರ್ಭದಲ್ಲಿ ಕಾಲೋಚಿತ ಹಣ್ಣುಗಳ ರಸವನ್ನು ಸೇವಿಸಲು ಸಲಹೆ ನೀಡುತ್ತಾರೆ. 

ಜ್ವರ ಇದ್ದಾಗ ಮೋಸಂಬಿ ಜ್ಯೂಸ್ ಕುಡಿಯಬಹುದೇ? ಬೇಡವೇ? 
ಮೋಸಂಬಿ ಹಣ್ಣಿನಲ್ಲಿ ಆ್ಯಂಟಿಬ್ಯಾಕ್ಟೀರಿಯಲ್, ಆ್ಯಂಟಿ ಡಯಾಬಿಟಿಕ್ ಮತ್ತು ಆ್ಯಂಟಿಆಕ್ಸಿಡೆಂಟ್ ಗುಣಗಳು ಕಂಡುಬರುತ್ತವೆ. ಇದು ದೇಹವನ್ನು ವೈರಲ್ ರೋಗಗಳ ವಿರುದ್ಧ ಹೋರಾಡಲು ಸಧೃಢಗೊಳಿಸುತ್ತದೆ. ಇದಲ್ಲದೆ, ಮೋಸಂಬಿಯಲ್ಲಿ ಕಾರ್ಬೋಹೈಡ್ರೇಟ್‌ಗಳು, ಕ್ಯಾಲ್ಸಿಯಂ, ವಿಟಮಿನ್ ಬಿ 6, ಥಯಾಮಿನ್, ಕಬ್ಬಿಣ, ಫೈಬರ್, ಸತು, ಪೊಟ್ಯಾಸಿಯಮ್, ತಾಮ್ರ, ಫೋಲೇಟ್‌ನಂತಹ ಪೋಷಕಾಂಶಗಳು ಹೇರಳವಾಗಿರುವುದರಿಂದ ಜ್ವರ ಇದ್ದಾಗ ಮೋಸಂಬಿ ಜ್ಯೂಸ್ ಸೇವನೆಯಿಂದ ಬೇಗ ಚೇತರಿಸಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/health/is-consuming-mosambi-juice-good-for-health-during-fever-know-what-experts-says-158388

Leave a Reply

Your email address will not be published. Required fields are marked *