ಅಬ್ಬರಿಸಿದ ಕೃತಿಕಾ ಮಳೆಯಿಂದ ವಿವಿ ಸಾಗರ ಜಲಾಶಯಕ್ಕೆ ಜೀವಕಳೆ: ನೀರಿನ ಮಟ್ಟ ಎಷ್ಟಿದೆ?

ಉತ್ತಮ ಮಳೆಯಾಗಿದ್ದರಿಂದ ಹೊಸದುರ್ಗ ತಾಲ್ಲೂಕಿನ ಕೆಲ್ಲೋಡ್ ಚೆಕ್ ಡ್ಯಾಂ ಭರ್ತಿಯಾಗಿ ಮೈದುಂಬಿ ಹರಿದು, ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಲಾಶಯದ ಕಡೆ ನೀರು ಹರಿದು ಬರುತ್ತಿದೆ. ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕೆಲ್ಲೋಡ್ ಚೆಕ್ ಡ್ಯಾಂ ಇದೀಗ ಒಂದೇ ದಿನದಲ್ಲಿ ಮೈದುಂಬಿ ಹರಿಯುತ್ತಿದ್ದು, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಪ್ರಸಕ್ತ ಸಾಲಿನಲ್ಲಿ ಆರಂಭದಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದು, ರೈತರು ಉತ್ತಮ ಬೆಳೆ ಬೆಳೆಯುವ ನಿರೀಕ್ಷೆಯಲ್ಲಿದ್ದಾರೆ. 2022ರಲ್ಲಿ ಎರಡನೇ ಬಾರಿಗೆ ಭರ್ತಿಯಾಗಿ ಕೋಡಿ ಬಿದ್ದಿದ್ದ ವಿವಿ ಸಾಗರ ಡ್ಯಾಂಗೆ ಕಳೆದ ವರ್ಷ ಮಳೆ ಇಲ್ಲದ ಕಾರಣ ನೀರು ಹರಿದು ಬಂದಿರಲಿಲ್ಲ. ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆಯಿದ್ದು, ಪ್ರಸಕ್ತ ಸಾಲಿನಲ್ಲಿ ಸುಮಾರು 300 ರಿಂದ 500 ಕ್ಯೂಸೆಕ್ ನೀರು ಹರಿದು ಬರುತ್ತಿದೆ ಎನ್ನಬಹುದು.

ಇನ್ನು ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಇನ್ನು ಒಂದು ವಾರ ಹೀಗೆ ಮಳೆ ಮುಂದುವರೆದರೆ ವಿವಿ ಸಾಗರಕ್ಕೆ ಅರ್ಧದಷ್ಟು ನೀರು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ತಾಲೂಕುವಾರು ಮಳೆ ವಿವರ

* ಚಿತ್ರದುರ್ಗ -1ರಲ್ಲಿ 24.0, ಚಿತ್ರದುರ್ಗ -2ರಲ್ಲಿ 33.7, ಭರಮಸಾಗರ -9.3, ಹೀರೆಗುಂಟನೂರು -4.5, ತುರುವನೂರು -13.4, ಸಿರಿಗೆರೆ -12.0, ಐನಹಳ್ಳಿಯಲ್ಲಿ 35.4 ಮಿಲಿ ಮೀಟರ್ ಮಳೆಯಾಗಿದೆ.

* ಹಿರಿಯೂರು-18.2,ಇಕ್ಕನೂರು-35.2, ಈಶ್ವರಗೆರೆ-16.0, ಬಬ್ಬೂರು-24.8 ಮಿಲಿ ಮೀಟರ್ ಮಳೆಯಾಗಿದ್ದು, ಸೂಗೂರಿನಲ್ಲಿ ಮಳೆಯಾದ ಬಗ್ಗೆ ವರದಿಯಾಗಿಲ್ಲ.

* ಹೊಸದುರ್ಗ -120.6, ಬಾಗೂರು -40.3, ಮಡದಕೆರೆ-51.2, ಮತ್ತೊಡ್-14.4, ಶ್ರೀರಾಂಪುರ -15.0 ಮಿಮೀ ಮಳೆಯಾಗಿದೆ.

* ಚಳ್ಳಕೆರೆ ತಾಲೂಕಿನಲ್ಲೂ ಮಳೆಯಾಗಿದ್ದು, ಚಳ್ಳಕೆರೆ -5.2, ನಾಯಕನಹಟ್ಟಿ -6.4, ತಳುಕು -4.2 ಹಾಗೂ ಡಿ.ಮರಿಕುಂಟೆಯಲ್ಲಿ 2.4 ಮಿಲಿ ಮೀಟರ್ ಮಳೆಯಾಗಿದೆ.

* ಇನ್ನು ಅರೆ ಮಲೆನಾಡು ಹೊಳಲ್ಕೆರೆ ಭಾಗದಲ್ಲೂ ಸಹ ಕೃತಿಕಾ ಮಳೆಯಾಗಿದೆ. ಹೊಳಲ್ಕೆರೆ -16.8, ರಾಮಗಿರಿ -25.4, ಚಿಕ್ಕಜಜೂರು -29.7, ಬಿ.ದುರ್ಗ -26.0, ಹೆಚ್.ಡಿ.ಪುರ -24.4 ಹಾಗೂ ತಾಳ್ಯದಲ್ಲಿ 3.2 ಮಿಲಿ ಮೀಟರ್ ಮಳೆಯಾಗಿದೆ.

* ಮೊಳಕಾಲ್ಮುರಿನ ರಾಯಾಪುರ- 2.2, ಬೀಜಿಕೆರೆ-2.5, ರಾಂಪುರ-3.2 ಮಿಲಿ ಮೀಟರ್ ಮಳೆಯಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

Source : https://m.dailyhunt.in/news/india/kannada/oneindiakannada-epaper-thatskannada/vani+vilasa+sagara+dam+abbarisidha+krutika+maleyindha+vivi+saagara+jalaashayakke+jivakale+nirina+matta+eshtide+-newsid-n609910368?listname=topicsList&topic=news&index=14&topicIndex=1&mode=pwa&action=click

 

Leave a Reply

Your email address will not be published. Required fields are marked *