ಮಧುಮೇಹ ಕಾಣಿಸಿಕೊಂಡಾಗ ದೇಹ ನೀಡುತ್ತದೆ ಈ ಸೂಚನೆ : ಎಚ್ಚೆತ್ತರೆ ಆರೋಗ್ಯ, ನಿರ್ಲಕ್ಷಿಸಿದರೆ ಅಪಾಯ!

ಮಧುಮೇಹ ತನ್ನೊಂದಿಗೆ ಇನ್ನಷ್ಟು ಅಪಾಯಗಳನ್ನು ಹೊತ್ತು ತರುತ್ತದೆ. ಇಡೀ ಕಾರಣಕ್ಕೆ ಮಧುಮೇಹ ರೋಗಿಗಳು ತಮ್ಮ ಆಹಾರ ಸೇವನೆ ಮತ್ತು ರೋಗಲಕ್ಷಣಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಮಧುಮೇಹವು ಅನೇಕ ಜನರನ್ನು ಬಾಧಿಸುತ್ತದೆ. ಇದರಿಂದ ಲಕ್ಷಾಂತರ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಭಾರತದ ಅಂಕಿಅಂಶಗಳನ್ನು ನೋಡಿದರೆ, 10 ಕೋಟಿಗೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ಅಂದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿ ತೊಂದರೆಗೆ ಸಿಲುಕಿದ್ದಾರೆ. ಮಧುಮೇಹ ತನ್ನೊಂದಿಗೆ ಇನ್ನಷ್ಟು ಅಪಾಯಗಳನ್ನು ಹೊತ್ತು ತರುತ್ತದೆ. ಇದೇ ಕಾರಣಕ್ಕೆ ಮಧುಮೇಹ ರೋಗಿಗಳು ತಮ್ಮ ಆಹಾರ ಸೇವನೆ ಮತ್ತು ರೋಗಲಕ್ಷಣಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕಾಗುತ್ತದೆ.

 ರಕ್ತದಲ್ಲಿನ ಸಕ್ಕರೆ ಹೆಚ್ಚಾದಾಗ ಅದು ನಮ್ಮ ಗಮನಕ್ಕೆ ಹಾಗೆಯೇ ಬರುವುದಿಲ್ಲ. ಇದಕ್ಕಾಗಿ ರಕ್ತ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಆರಂಭದಲ್ಲಿಯೇ ಇದನ್ನು ಕಂಡು ಹಿಡಿದರೆ ನಿಯಂತ್ರಣ ಸುಲಭ, ಇಲ್ಲವಾದರೆ ಅನ್ನ ಆಹಾರದಲ್ಲಿ ಎಲ್ಲಾ ರೀತಿಯ ಪಥ್ಯ ಮಾಡಬೇಕಾಗುತ್ತದೆ. ದೇಹದಲ್ಲಿ ಮಧುಮೇಹ ಕಾಣಿಸಿಕೊಂಡಾಗ ಅಥವಾ ರಕ್ತದಲ್ಲಿನ ಸಕ್ಕರೆ ಪ್ರಮಾಣ ಜಾಸ್ತಿಯಾದಾಗ ದೇಹ ನಮಗೆ ಕೆಲವು ಸೂಚನೆಗಳನ್ನು ನೀಡುತ್ತದೆ. ಇದನ್ನು ನಾವು ಗುರುತಿಸಿಕೊಳ್ಳಬೇಕು ಅಷ್ಟೇ. 

ಚರ್ಮದ ಕಪ್ಪಾಗುವಿಕೆ :
ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ, ಇನ್ಸುಲಿನ್ ಪ್ರತಿರೋಧದಿಂದಾಗಿ ದೇಹದ ಅನೇಕ ಭಾಗಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ವಿಶೇಷವಾಗಿ ಕುತ್ತಿಗೆಯ ಸುತ್ತ, ಕಣ್ಣುಗಳ ಕೆಳಗೆ ಮತ್ತು ತೋಳುಗಳ ಕೆಳಗೆ ಕಡು ಕಂದು ಅಥವಾ ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.

ಕಣ್ಣಿನ ದೃಷ್ಟಿ ಮಂದವಾಗುತ್ತದೆ : 
ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಅದರ ಪರಿಣಾಮ  ಕಣ್ಣುಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ದೃಷ್ಟಿ ಮಂದವಾಗುವುದು. ಮಬ್ಬು ಮಬ್ಬಾಗಿ ಕಾಣಿಸುವುದು ಈಗೆ ಕಣ್ಣಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. 

ಕೈ ಕಾಲುಗಳು ಜುಮ್ಮೆನ್ನುವುದು : 
ಕೈ ಕಾಲುಗಳ ಮರಗಟ್ಟುವಿಕೆ ಮಧುಮೇಹದ ಆರಂಭಿಕ ಲಕ್ಷಣವಾಗಿದೆ. ಏಕೆಂದರೆ ಈ ಕಾಯಿಲೆಯಲ್ಲಿ ದೇಹದ ನರಗಳು ದುರ್ಬಲಗೊಳ್ಳುತ್ತವೆ. ಮತ್ತು ರಕ್ತವು ರಕ್ತನಾಳಗಳ ಮೂಲಕ ದೇಹದ ಭಾಗಗಳಿಗೆ ಸರಿಯಾಗಿ ಹರಿಯದಿದ್ದಾಗ, ದೇಹದ ಭಾಗಗಳಲ್ಲಿ ಜುಮ್ಮೆನ್ನುವ ಅನುಭವವಾಗುತ್ತದೆ. 

ಮೂತ್ರಪಿಂಡದ ತೊಂದರೆಗಳು: 
ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಮಧುಮೇಹವೂ ಪ್ರಮುಖ ಕಾರಣವಾಗಿದೆ . ವಾಸ್ತವವಾಗಿ, ಹೆಚ್ಚಿನ ಸಕ್ಕರೆಯಿಂದಾಗಿ, ಮೂತ್ರಪಿಂಡದ ಕಾರ್ಯವು ಹದಗೆಡುತ್ತದೆ. ಇದರ ಪರಿಣಾಮ ಪದೇ ಪದೇ ಮೂತ್ರವಿಸರ್ಜನೆ, ಪಾದದಲ್ಲಿ ಊತ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಉಂಟಾಗಬಹುದು. 

ಒಸಡುಗಳಲ್ಲಿ ರಕ್ತಸ್ರಾವ : 
ಮಧುಮೇಹದ ಆರಂಭಿಕ ರೋಗಲಕ್ಷಣಗಳಲ್ಲಿ ಒಸಡುಗಳಲ್ಲಿ ರಕ್ತಸ್ರಾವ, ಬಾಯಿಯ ದುರ್ವಾಸನೆ, ಸಡಿಲವಾದ ಹಲ್ಲುಗಳು ಹೀಗೆ ಒರಲ್  ಸಮಸ್ಯೆಗಳು ಕಾಣಿಸಿ ಕೊಳ್ಳಬಹುದು.

 ಗಾಯ ತಡವಾಗಿ ಗುಣವಾಗುವುದು : 
ನಿಮ್ಮ ದೇಹದಲ್ಲಿ ಸಕ್ಕರೆಯ ಮಟ್ಟವು ಅಧಿಕವಾಗಿದ್ದರೆ, ಗಾಯಗಳು ವಾಸಿಯಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಸೂಚನೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು. ಏಕೆಂದರೆ ಇದು ಗಾಯವನ್ನು ಇನ್ನಷ್ಟು ಹದಗೆಡಿಸಬಹುದು.

ಕಾಲುಗಳಲ್ಲಿ ಕಾಣಿಸಿಕೊಳ್ಳುವ ರೋಗಲಕ್ಷಣಗಳು : 
– ನೀವು ಮಧುಮೇಹ ಹೊಂದಿದ್ದರೆ, ಅದು ನರರೋಗದ ಅಪಾಯವನ್ನು ಕೂಡಾ ತಂದೊಡ್ಡಬಹುದು. ಇದು ನರಗಳಿಗೆ ಹಾನಿ ಉಂಟು ಮಾಡುತ್ತದೆ. ಪಾದಗಳಲ್ಲಿ ತೀಕ್ಷ್ಣವಾದ ನೋವು ಮತ್ತು ಊತವನ್ನು ಉಂಟುಮಾಡುತ್ತದೆ. 

– ಮಧುಮೇಹ ಬಂದರೆ ಕಾಲ್ಬೆರಳ ಉಗುರುಗಳ ಬಣ್ಣ ಬದಲಾಗುತ್ತದೆ. ಸಾಮಾನ್ಯವಾಗಿ ಗುಲಾಬಿ ಬಣ್ಣದಲ್ಲಿರುವ ಉಗುರುಗಳು ಇದ್ದಕ್ಕಿದ್ದಂತೆ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅದನ್ನು ಹಗುರವಾಗಿ ತೆಗೆದುಕೊಳ್ಳಬೇಡಿ ಮತ್ತು ತಕ್ಷಣ ರಕ್ತ ಪರೀಕ್ಷೆಯನ್ನು ಮಾಡಿ.

– ಮಧುಮೇಹದಿಂದ ಬಳಲುತ್ತಿದ್ದರೆ, ಪಾದಗಳು ಮತ್ತು ಅಡಿಭಾಗದ ಚರ್ಮವು ಗಟ್ಟಿಯಾಗಲು ಪ್ರಾರಂಭಿಸುತ್ತದೆ. ಆದರೆ ನೆನಪಿರಲಿ ತಪ್ಪಾದ  ಸೈಜ್ ನ ಬೂಟುಗಳನ್ನು ಧರಿಸುವುದರಿಂದಲೂ ಒಮ್ಮೊಮ್ಮೆ ಹೀಗಾಗುತ್ತದೆ.  ಆದರೂ ರಕ್ತದಲ್ಲಿನ ಸಕ್ಕರೆಯನ್ನು ಪರೀಕ್ಷಿಸುವುದು ಉತ್ತಮ. 

ಸಮಗ್ರ ಸುದ್ದಿಗಳಿಗಾಗಿ WhatsApp Group ಸೇರಿ: https://chat.whatsapp.com/KnDIfiBURQ9G5sLEJLqshk

ನಮ್ಮ Facebook page: https://www.facebook.com/samagrasudii

Source : https://zeenews.india.com/kannada/health/warning-diabetes-symptoms-in-body-one-should-not-ignore-156565

Leave a Reply

Your email address will not be published. Required fields are marked *