ಅಮೇರಿಕಾದಲ್ಲಿ ಗೆಲ್ಲೋರು ಯಾರು? ಟ್ರಂಪ್ ಅಥವಾ ಕಮಲಾ ಹ್ಯಾರಿಸ್? ಜ್ಯೋತಿಷಿಗಳಿಂದ ಸ್ಫೋಟಕ ಭವಿಷ್ಯ.

ವಾಷಿಂಗ್ಟನ್: ನವೆಂಬರ್ 5 ರಂದು ಅಮೇರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ (President Election) ನಡೆಯಲಿದೆ. ಡೆಮಾಕ್ರಾಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ (Kamala Harris vs Donald Trump) ನಡುವೆ ತೀವ್ರ ಪೈಪೋಟಿ ನಡೆಯಲಿದೆ.

ಚುನಾವಣೆಗೂ ಮುನ್ನ ನಡೆದ ಹಲವು ಸಮೀಕ್ಷೆಗಳಲ್ಲೂ ಇಬ್ಬರು ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ವರದಿಯಾಗಿದೆ. ಅಧ್ಯಕ್ಷೀಯ ಚುನಾವಣೆಗೆ ಇನ್ನೇನು ಒಂದು ದಿನ ಮಾತ್ರ ಬಾಕಿ ಇದೆ. ಹಲವು ಸಮೀಕ್ಷೆಗಳು ಚುನಾವಣೆ ಬಗೆಗಿನ ಅಂದಾಜು ಫಲಿತಾಂಶಗಳನ್ನು ಪ್ರಕಟಿಸಿದೆ. ಅಷ್ಟೇ ಅಲ್ಲದೇ ಈ ಜ್ಯೋತಿಷಿಗಳು (Astrologers) ಕೂಡ ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಗೆಲ್ಲಬಹುದು ಎಂದು ಭವಿಷ್ಯ ನುಡಿದಿದ್ದಾರೆ.

ಚುನಾವಣಾ ಪ್ರಚಾರ ಈಗಾಗಲೇ ಅಂತಿಮ ಹಂತಕ್ಕೆ ತಲುಪಿದೆ. ಇಬ್ಬರೂ ಅಭ್ಯರ್ಥಿಗಳು ಗೆಲುವಿನ ನಿರೀಕ್ಷೆಯಲ್ಲಿದ್ದು, ಸಮೀಕ್ಷೆಗಳು ಮಾತ್ರ ಇಬ್ಬರ ನಡುವೆ ಭಾರೀ ಪೈಪೋಟಿ ಇರಲಿದೆ ಎನ್ನಲಾಗಿದೆ. ಇದೀಗ ಅಮೆರಿಕರ ಅಧ್ಯಕ್ಷೀಯ ಚುನಾವಣಾ ಬಗ್ಗೆ ಜ್ಯೋತಿಷ್ಯರು ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಜಾತಕ ನೋಡಿ ಭವಿಷ್ಯ ನುಡಿಯುತ್ತಿರುವ ಜ್ಯೋತಿಷಿಗಳು!

ಕೆಲವು ಜ್ಯೋತಿಷಿಗಳು ಅಮೇರಿಕಾ ಅಧ್ಯಕ್ಷೀಯ ಚುನಾವಣೆ ಬಗ್ಗೆ ಭವಿಷ್ಯ ಹೇಳಲು ಶುರು ಮಾಡಿದ್ದಾರೆ. ಇದಕ್ಕಾಗಿ ಕೆಲವರು ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರ ಜನ್ಮ ಕುಂಡಲಿಯನ್ನು ನೋಡುತ್ತಿದ್ದಾರೆ ಮತ್ತು ಫಲಿತಾಂಶಗಳು ಏನಾಗಬಹುದು ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಹಾಗಿದ್ರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಮೆರಿಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳ ಜಾತಕ ಹೇಗಿರುತ್ತದೆ? ಜ್ಯೋತಿಷಿಗಳು ಯಾರು ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ? ಈ ಎಲ್ಲದರ ಮಾಹಿತಿ ಇಲ್ಲಿದೆ ನೋಡಿ.

ಗೇಮ್ ಚೇಂಜರ್ ಯಾರು?

ಡೊನಾಲ್ಡ್ ಟ್ರಂಪ್ ಚಂದ್ರ ಗ್ರಹಣದ ಸಮಯದಲ್ಲಿ ಜನಿಸಿದವರು ಎಂದು ಹೇಳಲಾಗಿದೆ. ಆದ್ದರಿಂದ ಕೆಲವು ಜ್ಯೋತಿಷಿಗಳು ಈ ಪ್ರಭಾವದಿಂದ ಟ್ರಂಪ್‌ ತನ್ನ ಆಟವನ್ನೇ ಬದಲಾಯಿಸಬಹುದು ಎಂದು ಹೇಳುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಜೂನ್ 14, 1946 ರಂದು ಜೆಮಿನಿಯಲ್ಲಿ ಜನಿಸಿದರು. ರಾಶಿ ಧನು ರಾಶಿ. ಇನ್ನು ಕಮಲಾ ಹ್ಯಾರಿಸ್ ಅವರು ಅಕ್ಟೋಬರ್ 20, 1964 ರಂದು ಜನಿಸಿದರು. ಇವರದ್ದು ತುಲಾ ರಾಶಿ. ಇದು ರಾಜಕೀಯದಲ್ಲಿ ಅವರ ಸಾಧನೆಗೆ ಮುಖ್ಯ ಕಾರಣವಾಗಿದೆ. ಈ ಮೂಲಕ ಕಮಲಾ ಹ್ಯಾರಿಸ್‌ ಅವರು ಬಲವಾದ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಿದ್ದಾರೆ.

ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್‌ ಟ್ರಂಪ್‌

ಗುರುವಿನ ಪ್ರಭಾವದಲ್ಲಿ ಅಭ್ಯರ್ಥಿಗಳು

ಎರಡೂ ಅಭ್ಯರ್ಥಿಗಳ ಮೇಲೆ ಗುರುವಿನ ಪ್ರಭಾವ ಹೇಗಿದೆ ಎಂಬುದನ್ನು ಜ್ಯೋತಿಷಿಗಳು ಲೆಕ್ಕಹಾಕುತ್ತಿದ್ದಾರೆ ಎನ್ನಲಾಗಿದೆ. ಇದು ಅದೃಷ್ಟ, ಬುದ್ಧಿವಂತಿಕೆ, ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಟ್ರಂಪ್ ಮತ್ತು ಹ್ಯಾರಿಸ್ ಇಬ್ಬರೂ ಗುರುಗ್ರಹದೊಂದಿಗೆ ಬಲವಾದ ಸಂಪರ್ಕವನ್ನು ಹೊಂದಿದ್ದಾರೆ. ಇದು ಅವರ ರಾಜಕೀಯ ಮತ್ತು ಸಾರ್ವಜನಿಕ ಮನವಿಯನ್ನು ಸುಧಾರಿಸುವ ಸಾಧ್ಯತೆಯನ್ನು ಹೊಂದಿದೆ. ಗುರುಗ್ರಹದ ಪ್ರಭಾವವು ಅನಿರೀಕ್ಷಿತವಾಗಿ ಬದಲಾವಣೆ ತರಬಹುದು ಎನ್ನಲಾಗಿದೆ. ಆದರೆ ಈ ಅಂಶಗಳ ಆಧಾರದ ಮೇಲೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಊಹಿಸುವುದು ತುಂಬಾ ಕಷ್ಟ. ಏಕೆಂದರೆ ಅನಿರೀಕ್ಷಿತವಾಗಿ ಏನು ಬೇಕಾದರೂ ಸಂಭವಿಸಬಹುದು ಎಂದು ಹೇಳಲಾಗಿದೆ.

ಜ್ಯೋತಿಷ್ಯದ ಪ್ರಕಾರ ಮಿಡ್‌ಹೆವೆನ್ ಏನು ಹೇಳುತ್ತೆ?

ಜ್ಯೋತಿಷ್ಯದಲ್ಲಿ, ಮಿಡ್ಹೆವನ್ ಅಥವಾ ಮೀಡಿಯಮ್ ಕೊಯೆಲಿ (MC) ಎಂಬುದು ವ್ಯಕ್ತಿಯ ಜನ್ಮ ಚಾರ್ಟ್‌ನಲ್ಲಿರುವ ರಾಶಿಯಾಗಿರುತ್ತದೆ. ಇದು ಅವರ ಸಾರ್ವಜನಿಕ ಚಿತ್ರಣ, ವೃತ್ತಿ, ಸಾಮಾಜಿಕ ಸ್ಥಾನಮಾನವನ್ನು ಸೂಚಿಸುತ್ತದೆ. ಟ್ರಂಪ್ ಮಿಡ್ಹೆವನ್ ಯುರೇನಸ್ ಹೊಂದಿದ್ದಾರೆ. ಇದು ಆಡಳಿತ ಮತ್ತು ಸಾಧನೆಯನ್ನು ತೋರಿಸುತ್ತದೆ. ಆದರೆ ಕಮಲಾ ಹ್ಯಾರಿಸ್‌ಗೆ ಈ ಶಾಸ್ತ್ರದಲ್ಲಿ ಶನಿಯು ಅನ್ವಯಿಸುತ್ತದೆ. ಇದು ಅಡೆತಡೆಗಳು ಮತ್ತು ವಿಳಂಬಗಳನ್ನು ಸೂಚಿಸುತ್ತದೆ. ಇದರರ್ಥ ಹ್ಯಾರಿಸ್‌ ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ಬರಬಹುದು, ಹಾಗಂತ ಚುನಾವಣೆಯಲ್ಲಿ ಸೋಲುತ್ತಾರೆ ಎಂಬುದಲ್ಲ.

ಟ್ರಂಪ್ ಮತ್ತು ಹ್ಯಾರಿಸ್ ನಡುವೆ ಭಾರೀ ಪೈಪೋಟಿ!

ಈ ಬಾರಿ ಅಮೇರಿಕಾದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಜಿದ್ದಾಜಿದ್ದಿನಲ್ಲಿದ್ದಾರೆ. ಇಬ್ಬರ ನಡುವೆ ಪ್ರಬಲ ಪೈಪೋಟಿ ಏರ್ಪಡಲಿದೆ ಎಂದು ಹೇಳಲಾಗಿದೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿಜೇತರನ್ನು ಊಹಿಸುವುದು ಅಷ್ಟು ಸುಲಭವಲ್ಲ ಅಂತಾನೂ ಹೇಳಿದ್ದಾರೆ.

Leave a Reply

Your email address will not be published. Required fields are marked *