ನನ್ನ ವಿರುದ್ಧ ಸ್ಪರ್ಧಿಸುತ್ತೀರಾ..? : ರಾಹುಲ್ ಗಾಂಧಿಗೆ ಓಪನ್ ಚಾಲೆಂಜ್ ಹಾಕಿದ ಸ್ಮೃತಿ ಇರಾನಿ

ನವದೆಹಲಿ: 2024ಕ್ಕೆ ಅಮೇತಿ ಕ್ಷೇತ್ರದಲ್ಲೂ ಚುನಾವಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈ ಮಧ್ಯೆ ಸ್ಮೃತಿ ಇರಾನಿ ಚಾಲೆಂಜ್ ಒಂದನ್ನು ಹಾಕಿದ್ದಾರೆ. ರಾಹುಲ್ ಗಾಂಧಿಗೆ ಅಮೇತಿಯಲ್ಲಿ ನನ್ನ ಎದುರು ಸ್ಪರ್ಧಿಸುವಂತೆ ಚಾಲೆಂಜ್ ಹಾಕಿದ್ದಾರೆ.

ಈ ಬಗ್ಗೆ ವ್ಯಂಗ್ಯವಾಗಿ ಮಾತನಾಡಿರುವ ಇರಾನಿ, 2024ರ ಚುನಾವಣೆಯಲ್ಲಿ ನಿಮ್ಮ ನಾಯಕರೊಬ್ಬರು ಸ್ಪರ್ಧಿಸುತ್ತಾರೆ ಅಂತ ಹೇಳಿದ್ರಿ. ಹೇಳಿದಂತೆ ಸ್ಪರ್ಧಿಸುತ್ತಾರಾ..? ಸ್ಪರ್ಧೆ ಮಾಡುವುದಕ್ಕೆ ಯಾವುದೇ ಭಯವಿಲ್ಲ ತಾನೇ..? ಈ ಬಾರಿಯೂ ಎರಡನೇ ಕ್ಷೇತ್ರಕ್ಕೆ ಓಡಿ ಹೋಗುವುದಿಲ್ಲ ತಾನೇ..? ನೀವೂ ಮತ್ತು ನಿಮ್ಮ ಮಮ್ಮಿ ಸ್ತ್ರೀ ವಿರೋಧಿಯ ಹೊಸ ಭಾಷಣಕಾರರನ್ನಾಗಿ ತರಬೇಕು ಎಂದಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ನಾಯಕ ಅಜಯ್ ರೈಯವರಿಗೆ ತಿರುಗೇಟು ನೀಡಿದ್ದಾರೆ. ಅಜಯ್ ರೈ ಅವರು ಸ್ಮೃತಿ ಇರಾನಿಗೆ, ಎಲೆಕ್ಷನ್ ಪ್ರಚಾರದಲ್ಲಿ ವೈಯ್ಯಾರ ತೋರಿಸಿ, ಪ್ರಚಾರ ಮಾಡಿ ಗೆಲುವು ಪಡೆದಿದ್ದೀರಿ ಎಂದಿದ್ದರು. ಅವರ ಮಾತಿಗೆ ಇಂದು ಟ್ವೀಟ್ ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.

The post ನನ್ನ ವಿರುದ್ಧ ಸ್ಪರ್ಧಿಸುತ್ತೀರಾ..? : ರಾಹುಲ್ ಗಾಂಧಿಗೆ ಓಪನ್ ಚಾಲೆಂಜ್ ಹಾಕಿದ ಸ್ಮೃತಿ ಇರಾನಿ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/7GTFsKa
via IFTTT

Leave a Reply

Your email address will not be published. Required fields are marked *