ಇನ್ನೇನು ಟೊಮೇಟೊ ಬೆಳೆಸಾಮಾನ್ಯ ಸ್ಥಿತಿಗೆ ಮರಳಿದೆ ಎನ್ನುವಷ್ಟರಲ್ಲಿಯೇ ಈರುಳ್ಳಿಯ ಬೆಲೆ ಏರತೊಡಗಿದೆ.

ಬೆಂಗಳೂರು : ಟೋಮಾಟೋ ಬೆಲೆ ಏರಿಕೆಯಿಂದ ಜನರಿಗೆ ಇದೀಗ ಮತ್ತೊಂದು ತಲೆ ಬಿಸಿ ಎದುರಾಗಿದೆ. ಇದೀಗ ಈರುಳ್ಳಿ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಈರುಳ್ಳಿ ಬೆಲೆ ಕಣ್ಣೀರು ತರಿಸುತ್ತೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು.
ಬೆಲೆ ಏರಿಕೆಯಿಂದಾಗಿ ಜನರು ಮೊದಲೇ ರೋಸಿ ಹೋಗಿದ್ದಾರೆ. ಕೆಲ ದಿನಗಳ ಹಿಂದೆ ಟೊಮಾಟೋ ಬೆಲೆ ಏರಿಕೆಯಿಂದಾಗಿ ಜನ ಕಂಗಾಲಾಗಿದ್ದರು. ಇನ್ನೇನು ಟೊಮೇಟೊ ಬೆಲೆ ಸಾಮಾನ್ಯ ಸ್ಥಿತಿಗೆ ಮರಳಿದೆ ಎನ್ನುವಷ್ಟರಲ್ಲಿಯೇ ಈರುಳ್ಳಿಯ ಬೆಲೆ ಏರತೊಡಗಿದೆ.
ಈರುಳ್ಳಿ ಪೂರೈಕೆಯಲ್ಲಿ ಇಳಿಮುಖ :
ರಾಜ್ಯದ ವಿವಿಧ ಜಿಲ್ಲೆಗಳಿಂದ ಈರುಳ್ಳಿ ಪೂರೈಕೆಯಾಗುತ್ತದೆ. ಆದರೆ ಈಗ ಈರುಳ್ಳಿ ಪೂರೈಕೆಯಲ್ಲಿ ಇಳಿಮುಖ ಕಂಡು ಬರುತ್ತಿದೆ. ಈ ಹಿಂದೆ ನಾಸಿಕ್ ಹಾಗೂ ಪುಣೆಯಿಂದ ಈರುಳ್ಳಿ ಪೂರೈಕೆಯಾಗುತ್ತಿತ್ತು.ಆದರೆ ನಾಸಿಕ್ ಹಾಗೂ ಪುಣೆಯಲ್ಲಿ ಸ್ಟಾಕ್ ಇಲ್ಲದ ಕಾರಣ ಸದ್ಯ ನಾಸಿಕ್ ಹಾಗೂ ಪುಣೆಯಿಂದ ಈರುಳ್ಳಿ ಪೂರೈಕೆ ನಿಂತು ಹೋಗಿದೆ. ಅಲ್ಲದೇ ರಾಜ್ಯದ ಜಿಲ್ಲೆಗಳಲ್ಲಿ ಹೊಸ ಬೆಳೆ ಬೆಳೆಯುತ್ತಿದ್ದು, ಬೆಳೆ ಇನ್ನೂ ಕೈಗೆ ಬಾರದ ಕಾರಣ ಈರುಳ್ಳಿ ಪೂರೈಕೆ ಕಡಿಮೆಯಾಗಿದೆ.
ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ :
ಹೀಗಾಗಿ ಈರುಳ್ಳಿ ಬೆಲೆ ದಿನೇ ದಿನೇ ಏರಿಕೆಯಾಗುತ್ತಿದೆ. ಕಳೆದ ವಾರ 15 ರಿಂದ 20 ರೂಪಾಯಿಗೆ ಸಿಗುತ್ತಿದ್ದ ಈರುಳ್ಳಿ, ಇದೀಗ ಏಕಾಏಕಿ 30 ರಿಂದ 40 ರೂ ಗೆ ಏರಿಕೆಯಾಗುತ್ತಿದೆ. ಸದ್ಯ ನಾಫೇಡ್ ನಿಂದ ಈರುಳ್ಳಿ ಪೂರೈಕೆಯಾಗುತ್ತಿದ್ದು, ಒಂದು ವೇಳೆ ನಾಫೇಡ್ ನಿಂದ ಈರುಳ್ಳಿ ಪೂರೈಕೆಯಾಗುವುದು ಕಡಿಮೆಯಾದರೆ ಈರುಳ್ಳಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
35% ರಷ್ಟು ಪೂರೈಕೆ ಕಡಿಮೆ :
ಪ್ರತಿದಿನ ಯಶವಂತಪುರ ಮಾರುಕಟ್ಟೆಗೆ 1.20 ಲಕ್ಷ ಚೀಲ ಈರುಳ್ಳಿ ಬರಬೇಕಿತ್ತು. ಆದರೆ, ಇದೀಗ ಈರುಳ್ಳಿ ಪೂರೈಕೆಯಲ್ಲಿ 35% ರಷ್ಟು ಪೂರೈಕೆ ಕಡಿಮೆಯಾಗಿದೆ. ಅಂದರೆ 60 ರಿಂದ 70 ಸಾವಿರ ಈರುಳ್ಳಿ ಚೀಲಗಳು ಮಾತ್ರವೇ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಡು ಕೊರತೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ದುಬಾರಿಯಾಗುವ ಸಾಧ್ಯತೆ ಇದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1