Women Hair Care: ಬಿಳಿಕೂದಲು ನಿವಾರಣೆ ಹಾಗೂ ಉದುರುವಿಕೆ ಸಮಸ್ಯೆಗೆ ಇಲ್ಲಿವೆ ಕೆಲ ಉಪಾಯಗಳು!

Hair Treatment: ದಿನನಿತ್ಯದ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲುಗಳು ದುರ್ಬಲಗೊಳ್ಳುತ್ತವೆ ಮತ್ತು ಬಿಳಿಯಾಗಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ನಿಮ್ಮ ಕೂದಲನ್ನು ಕಪ್ಪಾಗಿ, ಮತ್ತು ದಟ್ಟವಾಗಿ ಬೆಳೆಸಬಹುದು, ಅದು ಹೇಗೆ ಎಂದು ತಿಳಿಯೋಣ ಬನ್ನಿ,  

Hair Treatment: ಬದಲಾಗುತ್ತಿರುವ ಹವಾಮಾನಕ್ಕೆ ತಕ್ಕಂತೆ, ಮಾನವ ಜೀವನದಲ್ಲಿ ಅನೇಕ ನೈಸರ್ಗಿಕ ಬದಲಾವಣೆಗಳು ಉಂಟಾಗುತ್ತವೆ. ಇದರ ಜೊತೆಗೆ ನಮ್ಮ ದೇಹದಲ್ಲಿಯೂ ಕೂಡ ಹಲವು ಬದಲಾವಣೆಗಳೂ ಆಗತೊಡಗುತ್ತವೆ. ಈ ಎಲ್ಲಾ ವಿಷಯಗಳ ಹಿಂದೆ ಆಹಾರ ಮತ್ತು ಹಾರ್ಮೋನುಗಳು ಪ್ರಮುಖ ಕಾರಣವಾಗಿವೆ. ಬಾಲ್ಯದಲ್ಲಿ ಮಾಡಲಾಗುವ ಎಣ್ಣೆ ಮಸಾಜ್ ಚರ್ಮದ ಕೋಶಗಳನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ, ಇದು ನಮ್ಮ ದೇಹದ ಸೌಂದರ್ಯವನ್ನು ಬದಲಾಯಿಸುತ್ತದೆ, ಇದೇ ರೀತ್ ಕೂದಲಿನ ಬಗ್ಗೆಯೂ ಕಾಳಜಿ ವಹಿಸುವ ಅವಶ್ಯಕತೆಯಿದೆ. ಕಾಳಜಿ ವಹಿಸದ ಕಾರಣ, ನಾವು ಬಿಳಿ ಕೂದಲು, ಕೂದಲು ಉದುರುವಿಕೆಯಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಹೀಗಾಗಿ ಹುಣಸೆ ಎಲೆಗಳ ಸಹಾಯದಿಂದ ಈ ಎಲ್ಲಾ ಸಮಸ್ಯೆಗಳನ್ನು ನಾವು ನಿವಾರಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ.

ಆಮ್ಲಾ ಮತ್ತು ಹುಣಸೆ ಎಲೆಗಳ ಬಳಕೆ
ಆಮ್ಲಾ ಮತ್ತು ಹುಣಸೆ ಎಲೆ ಕೂದಲಿಗೆ ಹಲವು ಪ್ರಯೋಜನಗಳನ್ನು ನೀಡುತ್ತವೆ. ಇದಕ್ಕಾಗಿ ನೀವು ತಾಜಾ ಆಮ್ಲಾವನ್ನು ತೆಗೆದುಕೊಳ್ಳಬೇಕು ಮತ್ತು ಕೆಲವು ಹುಣಸೆ ಎಲೆಗಳನ್ನು ತೆಗೆದುಕೊಳ್ಳಬೇಕು.ನಂತರ ನೆಲ್ಲಿಕಾಯಿಯನ್ನು ಕತ್ತರಿಸಿ ಮತ್ತು ಅವುಗಳನ್ನು ಹುಣಸೆ ಎಲೆಗಳೊಂದಿಗೆ ರುಬ್ಬಿ ಅದರ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಸ್ನಾನ ಮಾಡುವ ಮೊದಲು ಕೂದಲಿಗೆ ಈ ಪೇಸ್ಟ್ ಅನ್ನು ಅನ್ವಯಿಸಿ. ಇದರಿಂದ ಶೀಘ್ರದಲ್ಲಿಯೇ ನಿಮ್ಮ ಬಿಳಿ ಸಮಸ್ಯೆ ನಿವಾರಣೆಯಾಗುತ್ತವೆ.

ಹುಣಸೆ ಎಲೆಗಳು ಮತ್ತು ಮೊಸರಿನ ಬಳಕೆ
ಮೊಸರು ಮತ್ತು ಹುಣಸೆ ಎಲೆಗಳಿಂದ ನಿಮ್ಮ ಕೂದಲಿಗೆ ಹೇರ್ ಪ್ಯಾಕ್ ಅನ್ನು ನೀವು ತಯಾರಿಸಬಹುದು, ಇದು ನಿಮ್ಮ ಬೂದು ಬಣ್ಣದ ಕೂದಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಕ್ಕಾಗಿ, ನೀವು ಸ್ವಲ್ಪ ಹುಣಸೆ ಎಲೆಗಳನ್ನು ಮೊಸರಿನೊಂದಿಗೆ ಬೆರೆಸಿ ಮತ್ತು ನಿಮ್ಮ ಕೂದಲಿಗೆ 1 ಗಂಟೆ ಕಾಲದವರೆಗೆ ಅನ್ವಯಿಸಿ. ಕೆಲವೇ ದಿನಗಳಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಕಾಣಲು ಪ್ರಾರಂಭಿಸುವಿರಿ.

ಹುಣಸೆ ಎಲೆಗಳು ಮತ್ತು ಮೆಂತ್ಯ ಬೀಜಗಳ ಬಳಕೆ
ಮೆಂತ್ಯ ಬೀಜಗಳು ಮತ್ತು ಹುಣಸೆ ಎಲೆಗಳನ್ನು ಕೂದಲಿಗೆ ತುಂಬಾ ಹಿತಕಾರಿ ಎಂದು ಸಾಬೀತಾಗುತ್ತವೆ. ಇವುಗಳನ್ನು ಒಟ್ಟಿಗೆ ಬಳಕೆ ಮಾಡಲು ನೀವು ರಾತ್ರಿಯಿಡೀ ಒಂದು ಸಣ್ಣ ಪಾತ್ರೆಯಲ್ಲಿ ಮೆಂತ್ಯ ಬೀಜಗಳನ್ನು ನೆನೆಹಾಕಿ. ಬೆಳಗ್ಗೆ  ಎದ್ದ ನಂತರ, ಅದರ ನೀರನ್ನು ಫಿಲ್ಟರ್ ಮಾಡಿ. ಮೆಂತ್ಯ ಬೀಜಗಳಲ್ಲಿ ಹುಣಸೆ ಎಲೆಗಳನ್ನು ಬೆರೆಸಿ ರುಬ್ಬಿಕೊಳ್ಳಿ, ಈಗ ನೀವು ಈ ಪೇಸ್ಟ್ ಅನ್ನು ತಲೆಗೂದಲಿಗೆ ಅನ್ವಯಿಸಬಹುದು.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

Source : https://zeenews.india.com/kannada/health/here-are-few-healthy-tips-for-healthy-hairs-143399

Leave a Reply

Your email address will not be published. Required fields are marked *