ಏಪ್ರಿಲ್ 22 ರಂದು ಬ್ರಹ್ಮಾಕುಮಾರಿ ಸಂಸ್ಥೆಯ ವತಿಯಿಂದ ವಿಶ್ವ ಭೂಮಿ ದಿನ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ವಿಶ್ವ ಭೂಮಿ ದಿನವನ್ನು ಏಪ್ರಿಲ್ 22 ರಂದು ಪ್ರತಿ ವರ್ಷ ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1970ರ ಎಪ್ರಿಲ್ 22 ಮೊದಲ ಭೂಮಿ ದಿನದಂದು 150 ವರ್ಷಗಳ ಕೈಗಾರಿಕಾ ಆಭಿವೃದ್ಧಿಯ ಪರಿಣಾಮಗಳ ವಿರುದ್ಧ ಸಾಕಷ್ಟು ಕಡೆಗಳಲ್ಲಿ 20 ಮಿಲಿಯನ್ ಜನರು ಪ್ರತಿಭಟಿಸಿದ್ದರು. ಮಾನವನ ಬೇಕು ಬೇಡಗಳಿಗೆ ಅವಶ್ಯಕವಾಗಿರುವ ಈ ಭೂಮಿಯ ಕೊಡುಗೆಯನ್ನು ಸ್ಮರಿಸಲು ಸೃಷ್ಟಿಸಿಕೊಂಡ ದಿನವೇ ವಿಶ್ವ ಭೂಮಿ ದಿನ. ಪರಿಸರ ರಕ್ಷಣೆಗಾಗಿ ಅನೇಕ ಪರಿಹಾರ ಕ್ರಮಗಳ ಬಗ್ಗೆ ಚಿಂತಿಸುವ ಸಲುವಾಗಿ ಈ ದಿನದ ಆಚರಣೆ ಬಹು ಅಮೂಲ್ಯವಾಗಿದೆ. 1970 ರಲ್ಲಿ ಮೊಟ್ಟಮೊದಲು ಪ್ರಾರಂಭವಾದ ಭೂಮಿ ದಿನದ ಆಚರಿಣೆಯು ಈಗ 193 ರಾಷ್ಟ್ರಗಳಲ್ಲಿ ವಿಸ್ತಾರವಾಗಿದೆ. ಇದು ನಮ್ಮ ಪರಿಸಿರ ಜವಾಬ್ದಾರಿಗಳನ್ನು ಪ್ರತಿಬಿಂಬಿಸಲು ಮತ್ತು ಸುಸ್ಥಿರ ಭವಿಷ್ಯದತ್ತ ಅರ್ಥಪೂಣ ಕ್ರಮ ಕೈಗೊಳ್ಳಲು ಒಂದು ಜಾಗತಿಕ ಕ್ಷಣವಾಗಿದೆ. ವಿಶ್ವ ಭೂ ದಿನದ 55 ನೇವಾರ್ಷಿಕೋತ್ಸವವಾಗಿ 190 + ದೇಶಗಳಲ್ಲಿ 1 ಬಿಲಿಯನಗೂ ಹೆಚ್ಚು ಜನ ಭಾಗವಹಿಸಿವವರು.

ನಮ್ಮ ಶಕ್ತಿ ನಮ್ಮ ಗ್ರಹ ಎಂಬ ಧ್ಯೇಯ ವಾಕ್ಯದೊಂದಿಗೆ ಭೂದಿನವನ್ನು ಆಚರಿಸಲಾಗುತ್ತೀದೆ. ಈ ಸಾರಿ ವಿಶೇಷವಾಗಿ ಭೂಮಿ
ದಿನ ಆಯೋಜನೆಯಲ್ಲಿ ಬ್ರಹ್ಮಾಕುಮಾರಿ ಸಂಸ್ಥೇಯ ಅನೇಕ ಕಾರ್ಯಕ್ರಮ ಗಳನ್ನು ರುಪಿಸಿದೆ. ಈ ಬಾರಿ 17 ಭಾಷೆಗಳಲ್ಲಿ ಧ್ಯಾನ
ವಿವರಣೆ ನೀಡಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಕಳುಹಿಸಲಾಗಿದೆ.

ಧ್ಯೇಯ ವಾಕ್ಯಗಳು :
2003: ಜೀವನಕ್ಕಾಗಿ ನೀರು.
2005: ಮಕ್ಕಳಿಗಾಗಿ ಉತ್ತಮ ಪರಿಸರ.
2007: ಭುಮಿಯ ಮೇಲೆ ದಯೆ ಪಾಲಿಸಿ.
2008: ದಯವಿಟ್ಟು ಮರಗಳು.
2009: ಹೇಗೆ ಸುತ್ತುವುದು.
2010 : ಕಡಿಮೆ ಮಾಡಿ.
2011 : ಗಾಳಿಯನ್ನು ಸ್ವಚ್ಷಗೊಳಿಸಿ.
2012: ಭುಮಿಯ ಸಜ್ಜು.
2013: ಹವಾಮಾನ ಬದಲಾವಣೆ.
2014: ಹಸಿರು ನಗರಗಳು.
2015: ಸ್ವಚ್ಛ ಮತ್ತು ಹಸಿರು ಭುಮಿ.
2016: ಭುಮಿಗಾಗಿ ಮರಗಳು.

2017: ಪರಿಸರ ಮತ್ತು ಹವಾಮಾನ ಸಾಕ್ಷರತೆ.
2018 ಪ್ಲಾಸ್ಟಿಕ ಮಾಲಿನ್ಯಕ್ಕೆ ಕಡಿವಾಣ.
2019: ನಮ್ಮ ಮಸಾಲೆಗಳನ್ನು ರಕ್ಷಿಸಿ.
2020: ಹವಾಮಾನ ಕ್ರಮ.
2021: ನಮ್ಮ ಭುಮಿಯನ್ನು ಮರುಸ್ಥಾಪಿಸಿ.
2022: ನಮ್ಮ ಗ್ರಹದಲ್ಲಿ ಹೂಡಿಕೆ.
2023: ನಮ್ಮ ಗ್ರಹದಲ್ಲಿ ಹೂಡಿಕೆ.
2024: ಗ್ರಹ ಮತ್ತು ಪ್ಲಾಸ್ಟಿಕ್ಸ

ಭೂಮಿಯು ಯಾವಾಗಲೂ ನಮಗೆ ಜೀವನದ ಎಲ್ಲಾ ಸೌಕರ್ಯ ಮತ್ತು ಅವಶ್ಯಕತೆಗಳನ್ನು ನೀಡಿದೆ. ಅದು ಎಲ್ಲರನ್ನೂ ತಾಯಿಯಂತೆ
ನೋಡಿಕೊಳ್ಳುತ್ತದೆ. ಭೂಮಿಗೆ ಭೂದೇವಿ, ಭೂತಾಯಿ, ಭೂಮಾತೆ ಎಂದು ಕರೆಯುತ್ತಾರೆ. ಗ್ರಹಗಳಲ್ಲಿ ಅತಿ ಸುಂದರ ಮತ್ತು ನಯನ
ಮನೋಹರವಾದ ಗ್ರಹವೇ ನಮ್ಮ ಭೂಮಿ. ಇದು ಸೌರಮಂಡಲದಲ್ಲಿ 5ನೇ ಅತಿ ದೊಡ್ಡ ಗ್ರಹವಾಗಿದ್ದು, ಸೂರ್ಯನಿಂದ ಆರೋಹಣ
ಕ್ರಮದಲ್ಲಿ 3ನೇ ಗ್ರಹವಾಗಿದೆ. ರಾಶಿ ಮತ್ತು ಗಾತ್ರದಿಂದ ಅತಿ ದೊಡ್ಡ ಗ್ರಹವಾಗಿದ್ದು, ಬ್ರಹ್ಮಾಂಡದಲ್ಲೇ ಜೀವ ಸಂಕುಲವನ್ನು
ಹೊಂದಿರುವ ಏಕೈಕ ಕಾಯ ಭೂಮಿ ಹೆಚ್ಚಿನ ಸಾಂದ್ರತೆಯನ್ನು ಹೊಂದಿದೆ. ಬಹುತೇಕ ಎಲ್ಲ ಲೋಹಗಳ ಭಂಡಾರವಿದು. ಭೂಗರ್ಭವು
ಕಬ್ಬೀಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ. ಜಿವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲ
ಗಮನಾರ್ಹವಾಗಿ ಬದಲಾಗಿದೆ. ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಹಾಳುಮಾಡಿದೆ. ಸುಮಾರು 71%
ಭಾಗವು ಉಪ್ಪುನಿರಿನ ಸಾಗರಗಳಿಂದ ಆವೃತ್ತವಾಗಿದ್ದರೇ, ಉಳಿದ ಭಾಗವು ಭುಖಂಡ ಹಾಗೂ ದ್ವೀಪಗಳಿಂದ ಕೂಡಿದೆ. ಭೂಮಿಯ
ನೈಸರ್ಗಿಕ ಉಪಗ್ರಹ ಚಂದ್ರನಿಂದ ಸಾಗರದಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ.

ವರ್ತಮಾನ ಸಮಯದಲ್ಲಿ ಭೂಮಿಯ ಸ್ಥಿತಿ-ಗತಿ
ಇಲ್ಲಿ ಒಂದು ಕಥೆ ನೆನಪಿಗೆ ಬರುತ್ತದೆ. ಮಳೆಗಾಲದಲ್ಲಿ ಒಂದು ಮಂಗ ತನ್ನ ಮರಿಯನ್ನು ಹೊತ್ತು ನದಿಯನ್ನು ದಾಟಲು
ಪ್ರಾರಂಭಿಸುತ್ತದೆ. ನದಿಯ ಪ್ರವಾಹದಲ್ಲಿ ಹೋದಾಗ ತನ್ನ ಮರಿಯನ್ನು ತಲೆ ಮೇಲೆ ಇರಿಸಿ ದಾಟಲು ಪ್ರಾರಂಭಿಸುತ್ತದೆ. ಇನ್ನಷ್ಟು
ಆಳಕ್ಕೆ ಹೋದಾಗ ನದಿಯ ನೀರು ಮೂಗು ಮತ್ತು ಬಾಯಲ್ಲಿ ಬಂದಾಗ, ತನ್ನ ಪ್ರಾಣವನ್ನು ಉಳಿಸಲು ಮರಿಯನ್ನು ಕೆಳಗಡೆ ಹಾಕಿ
ಅದರ ಮೇಲೆ ನಿಂತು ದಾಟಲು ಪ್ರಾರಂಭಿಸುತ್ತದೆ. ಇದೇ ರೀತಿ ನಮ್ಮ ಮಾತೃ ಸ್ವರೂಪವಾದ ಭೂಮಿಯು ತನ್ನ ಮಕ್ಕಳಾದ ನಮ್ಮ ಮೇಲೆ ಅತಿಯಾದ ನಂತರ ಅವಶ್ಯವಾಗಿ ತಿರುಗಿ ಬೀಳುತ್ತದೆ. ಮಾನವನ ಕುತಂತ್ರ, ಆತಿಯಾಸೆ, ಆಹಂಭಾವ, ಅತಿ ಬುದ್ಧಿವಂತಿಕೆಯಿಂದ ಸೃಷ್ಟಿಯು ಬೆಂದು ಹೋಗಿದೆ. ಅವನು ಕಟ್ಟಿರುವ ವಿಶಾಲ ಅಣೆಕಟ್ಟು, ಮಾಡುತ್ತಿರುವ ಗಣಿಗಾರಿಕೆ, ಅರಣ್ಯನಾಶ, ವಾಯುಮಾಲಿನ್ಯ, ಶಬ್ದ ಮಾಲಿನ್ಯದಿಂದ ಪ್ರಕೃತಿ ಕುಪಿತವಾಗಿದೆ.

ಕೈಗಾರಿಕೆಗಳ ವಿಷಾನಿಲ ಮತ್ತು ವಿಷಪದಾರ್ಥಗಳಿಂದ ಜಲಮಾಲಿನ್ಯವಾಗಿದೆ. ಪೆಟ್ರೋಲ್ ಮತ್ತು ಡಿಸೇಲ್‍ನಿಂದ ಚಲಿಸುವ ವಾಹನಗಳಿಂದ ವಿಷಾನಿಲಗಳು ಹೆಚ್ಚುತಿವೆ. ಅತಿಯಾದ ಪ್ಲಾಸ್ಟಿಕ್ ಬಳಕೆ, ರಾಸಾಯನಿಕ ಗೊಬ್ಬರ, ಅನೇಕ ರೀತಿಯ ಪರಿಸರ
ಮಾಲಿನ್ಯದಿಂದ ಜಾಗತಿಕ ತಾಪಮಾನದಲ್ಲಿ ಏರಿಕೆ ಕಂಡುಬರುತ್ತಿದೆ. ಮತ್ತು ಇನ್ನು ಅನೇಕ ಕಠಿಣ ಕಾಯಿಲೆಗಳ ಕಠಿಣ ಸಮಯದಲ್ಲಿ ಭವರೋಗವೈದ್ಯನಾದ ಹಾಗೂ ಸ್ವರ್ಗದ ರಚಯಿತನಾದ ಶಿವ ಪರಮಾತ್ಮನ ರಕ್ಷಣೆ ಬಹಳ ಅವಶ್ಯಕವಾಗಿದೆ.

ವರ್ತಮಾನ ಸಮಯದಲ್ಲಿ ಎಲ್ಲೆಡೆ ಅತ್ಯಾಚಾರ, ಭ್ರಷ್ಟಾಚಾರ, ಅಸತ್ಯತೆ, ಹಿಂಸೆ ಇತ್ಯಾದಿ ದುರ್ಗುಣಗಳು ಹೆಚ್ಚಾಗಿ
ಅಶ್ಲೀಲತೆಯು ತುಂಬಿ ತುಳುಕುತ್ತಿದೆ. ಅಧರ್ಮವು ತನ್ನ ತುಟ್ಟತುದಿಯನ್ನು ತಲುಪಿದ್ದು, ಪಾಪದ ಬಿಂದಿಗೆಯು ತುಂಬಿ ಹೋಗಿದೆ.
ಪ್ರತಿಯೊಬ್ಬ ಮನುಷ್ಯನು ದು:ಖಿ ಮತ್ತು ಅಶಾಂತನಾಗಿದ್ದಾನೆ. ಕಾಮ, ಕ್ರೋಧ, ಲೋಭ, ಮೋಹ ಮತ್ತು ಅಹಂಕಾರಗಳಿಗೆ
ವಶೀಭೂತನಾದ ಮಾನವನ ಪಾಪ ಕರ್ಮಗಳಿಂದ ಇಂದು ಇಡೀ ಭೂಮಿಯು ಹೊತ್ತಿ ಉರಿಯುತ್ತಿದೆ. ಈ ಸಮಯದಲ್ಲಿಯೇ
ಪರಮಾತ್ಮನು ಕೆಡುಕು ಮತ್ತು ಅಧರ್ಮದ ವಿನಾಶ ಮಾಡಿ ಒಳಿತು ಮತ್ತು ಸದ್ಧರ್ಮದ ಸ್ಥಾಪನೆಯನ್ನು ಮತ್ತೊಮ್ಮೆ ಮಾಡಲು ಈ
ಭೂಮಿಯ ಮೇಲೆ ಬರಬೇಕಾಗುತ್ತದೆ.

ಪರಮಾತ್ಮನು ಈ ಭೂಮಿಯ ಮೇಲೆ ಬಂದಿದ್ದಾನೆ!!!
ಈ ಪತಿತ ಪ್ರಪಂಚವನ್ನು ಮತ್ತೊಮ್ಮೆ ಪಾವನ ಮಾಡಲು ಸ್ವಯಂ ಪರಮಾತ್ಮನು ಈ ಭೂಮಿಯ ಮೇಲೆ ಅವತರಿಸಿ
ಪ್ರಜಾಪಿತ ಬ್ರಹ್ಮಾರವರ ತನುವಿನ ಮೂಲಕ ಗುಪ್ತ ರೀತಿಯಿಂದ ತನ್ನ ಅಲೌಕಿಕ ಕಾರ್ಯವನ್ನು ಮಾಡುತ್ತಿದ್ದಾನೆ. ಪರಮಾತ್ಮನನ್ನು ನಾವು ಈಶ್ವರ, ಭಗವಂತ, ಅಲ್ಲಾಹ, ಗಾಡ್ ಇತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ಅವನು ನಿರಾಕಾರ ಜ್ಯೋತಿರ್ಬಿಂದು ಸ್ವರೂಪದಲ್ಲಿದ್ದಾನೆ. ಅವನು ವಿಶ್ವದ ಸರ್ವಆತ್ಮರ ಪರಮಪಿತನಾಗಿದ್ದಾನೆ. ಅವನು ಜ್ಞಾನ, ಪವಿತ್ರತೆ, ಪ್ರೇಮ, ಆನಂದ ಮತ್ತು ಶಕ್ತಿಗಳ ಸಾಗರವಾಗಿದ್ದಾನೆ; ಜನ್ಮ-ಮರಣಗಳ ಚಕ್ರದಿಂದ ದೂರವಿದ್ದಾನೆ.

ವಿಶ್ವದ ಸರ್ವ ದು:ಖಿ ಆತ್ಮರುಗಳನ್ನು ದು:ಖಗಳಿಂದ ಮುಕ್ತರನ್ನಾಗಿ ಮಾಡಲು ಮತ್ತು ಈ ಹಳೆಯ ಪತಿತ ಕಲಿಯುಗಿ
ಸೃಷ್ಠಿಯನ್ನು ಮತ್ತೊಮ್ಮೆ ಹೊಸ ಪಾವನ ಸತ್ಯಯುಗಿ ಸೃಷ್ಠಿಯನ್ನಾಗಿ ಮಾಡಲು ಮತ್ತು ವಿಕಾರಿ ಮನುಷ್ಯರನ್ನು ಮತ್ತೊಮ್ಮೆ
ಶ್ರೇಷ್ಠಾಚಾರಿ ದೇವತೆಗಳನ್ನಾಗಿ ಮಾಡಲು ಸುಖಕಾರಿ ಪರಮಾತ್ಮನು ಬಂದಿದ್ದಾನೆ. ಪರಮಪಿತ ಪರಮಾತ್ಮನು ಈ ಸಮಯದಲ್ಲಿ
ವಿಶ್ವದ ಸರ್ವ ಆತ್ಮರುಗಳನ್ನು ಪಾವನರನ್ನಾಗಿ ಮಾಡಿ ಮತ್ತೊಮ್ಮೆ ತಮ್ಮ ಮನೆಯಾದ ಬ್ರಹ್ಮಲೋಕ(ಪರಮಧಾಮ)ಕ್ಕೆ
ಕರೆದೊಯ್ಯಲು ಬಂದಿದ್ದಾನೆ. ಪರಮಾತ್ಮನು ಜ್ಞಾನ-ಸಾಗರನಾಗಿದ್ದು ವರ್ತಮಾನ ಸಮಯದಲ್ಲಿ ನಾವು ಆತ್ಮರುಗಳಿಗೆ ಆಧ್ಯಾತ್ಮಿಕ ಜ್ಞಾನ ಮತ್ತು ಸಹಜ ರಾಜಯೋಗದ ಶಿಕ್ಷಣವನ್ನು ನೀಡುತ್ತಿದ್ದಾನೆ. ಸಹಜ ರಾಜಯೋಗದಿಂದ ಆತ್ಮದ ಎಲ್ಲಾ ಪಾಪ ಕರ್ಮಗಳು ಭಸ್ಮವಾಗಿ ಆತ್ಮವು ಮತ್ತೊಮ್ಮೆ ಪಾವನವಾಗಿ ಸತೋಪ್ರಧಾನವಾಗುತ್ತದೆ. ರಾಜಯೋಗದಿಂದ ಮನುಷ್ಯಾತ್ಮರು ಮತ್ತೊಮ್ಮೆ ದೇವಾತ್ಮರಾಗುತ್ತಾರೆ. ಈ ಯೋಗದ ಅಭ್ಯಾಸವನ್ನು ಯಾರಾದರೂ ಸಹ ಬಹಳ ಸುಲಭವಾಗಿ ಮಾಡಬಹುದು.

ಕಲಿಯುಗದ ಸಮಾಪ್ತಿಯ ನಂತರ ಮತ್ತೊಮ್ಮೆ ಸತ್ಯಯುಗವು ಆರಂಭವಾಗುವುದು ಎಂದು ಪರಮಾತ್ಮನು ಹೇಳುತ್ತಿದ್ದಾನೆ.
ಅಂದರೆ ಮುಂದೆ ಆಗುವ ಮಹಾವಿನಾಶದ ನಂತರ ಮತ್ತೊಮ್ಮೆ ಹೊಸ ಸ್ವರ್ಣಿಮ ಸೃಷ್ಠಿಯ ಸ್ಥಾಪನೆಯಾಗುವುದು. ಅಲ್ಲಿ ಒಂದೇ
ಧರ್ಮ, ಒಂದೇ ರಾಜ್ಯ ಮತ್ತು ಒಂದೇ ಭಾಷೆ ಇರುವುದು. ಮನುಷ್ಯಾತ್ಮರು ಪವಿತ್ರ ಮತ್ತು ಶ್ರೇಷ್ಠಾಚಾರಿ ದೇವಿ-ದೇವತೆಗಳಾಗುವರು.
ನೂರಕ್ಕೆ ನೂರರಷ್ಟು ಸುಖ-ಶಾಂತಿ ಇರುವುದು. ಭೂಮಿಯು ಸಹ ಸತೋಪ್ರಧಾನ ಮತ್ತು ಸುಖಕರವಾಗಿರುವುದು. ಸಿಂಹ ಮತ್ತು
ಹಸುಗಳು ಒಂದೇ ಕೊಳದಲ್ಲಿ ನೀರನ್ನು ಕುಡಿಯುವವು. ಅದನ್ನು ನಾವು ಸ್ವರ್ಗ, ಹೆವಿನ್, ವೈಕುಂಠ, ಭಗವಂತನ ಹೂದೋಟ,
ಪ್ಯಾರಾಡೈಸ್ ಇತ್ಯಾದಿ ಹೆಸರುಗಳಿಂದ ಕರೆಯುತ್ತೇವೆ. ಆಗ ವಿಶ್ವದಲ್ಲಿ ಭಾರತಭುಮಿ ಮಾತ್ರ ಇರುತ್ತದೆ.

ಅದ್ದರಿಂದ ನಾವು ಮಾನವರು ಈ ದಿನ ಕೆಲವು ಪ್ರತಿಜ್ಞೆಗಳನ್ನು ಮಾಡುವುದು ಅತ್ಯವಶ್ಯಕವಾಗಿದೆ. ಜೊತೆಗೆ ಶಾಂತಿ ಮತ್ತು ಶಕ್ತಿಯ
ಪ್ರಕಂಪನಗಳು, ತರಂಗಗಳ ಮುಖಾಂತರ ಭೂಮಿಯನ್ನು ಸಬಲಗೊಳಿಸಬೇಕಾಗಿದೆ.

  1. ಸಾವಯವ ಕೃಷಿ ಪಧ್ಧತಿಯ ಬಳಕೆ. ಮಾಲಿನ್ಯವನ್ನು ನಿಯಂತ್ರಿಸಲು ಮರಗಳನ್ನು ನೆಡುವ ಮೂಲಕ ನಮ್ಮ ಭುಮಿಯನ್ನು
    ನೋಡಿಕೊಳ್ಳುವೆವು.
  2. ಸೌರ ಶಕ್ತಿ, ಗಾಳಿ ಶಕ್ತಿ ಮತ್ತು ಜೈವಿಕ ಶಕ್ತ್ತಿಯ ಉಪಯೋಗ,
  3. ವಿದ್ಯುತ್ ಚಾಲಿತ ಮತ್ತು ಹೈಡ್ರೊಲಿಕ್ ವಾಹನಗಳ ಪ್ರಯೋಗ,
  4. ಹಸಿರೀಕರಣ ಅಥವಾ ಹಸಿರು ಕ್ರಾಂತಿ.
  5. ಭೂಮಿಗೆ ಕಡಿಮೆ ಅಪಾಯ ಮಾಡುವುದು ಒಳ್ಳೆಯ ಉಪಾಯ,
  6. ಭೂತಕಾಲವನ್ನು ಬದಲಾಯಿಸಲು ಸಾಧ್ಯವಿಲ್ಲ, ಆದರೆ ಭೂಮಿಯನ್ನು ಹಸಿರು ಮತ್ತು ಸ್ವಚ್ಛವಾಗಿ ಇಟ್ಟಾಗ ಭವಿಷ್ಯವನ್ನು
    ಉಜ್ವಲಗೊಳಿಸಬಹುದು.
  7. ನಾನು ಸರ್ವರ ರಕ್ಷಕ ನಿರಾಕಾರ ಪರಮಾತ್ಮನ ಅತಿ ಪ್ರಿಯ ಸಂತಾನನಾಗಿದ್ದೇನೆ. ನನ್ನ ಮೂಲಕ ಪರಮಾತ್ಮನ ಶಕ್ತಿಯಿಂದ
    ಭೂಮಿ ಸಬಲ, ಸುಂದರ, ಪ್ರಖರ, ಪವಿತ್ರ ಮತ್ತು ಶೀತಲವಾಗುತ್ತಿದೆ.
    8.ನಮಗೆ ಬೇಕಾಗಿರುವುದು ಹಸಿರು ಭೂಮಿ, ಸ್ವಚ್ಛ ಜಲ, ಶುದ್ಧ ಗಾಳಿ, ಸುಂದರ ಆರಣ್ಯ, ಸಮತೋಲನ ಹವಾಮಾನ, ಜಾಗತಿಕ
    ಶಾಂತಿ ನೆಮ್ಮದಿ.

Leave a Reply

Your email address will not be published. Required fields are marked *