ದೈವಕ್ಕೆ ಪೂಜೆ ಸಲ್ಲಿಸಿ ‘ಬೆಂಗಳೂರು ಕಂಬಳ ನಮ್ಮ ಕಂಬಳ’ಕ್ಕೆ ಸಾಂಕೇತಿಕ ಚಾಲನೆ.

Bengaluru Kambala Nama Kambala: ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಅಶ್ವಿನ್​ ಪುನೀತ್ ​ರಾಜ್​ಕುಮಾರ್ ಅವರು ಬೆಂಗಳೂರು​ ಕಂಬಳದ ಸಾಂಕೇತಿಕ ಚಾಲನೆಗೆ ಸಾಕ್ಷಿಯಾದರು.

ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕರಾವಳಿಯ ಸಂಸ್ಕೃತಿಯನ್ನು ಪ್ರತಿಬಿಂಬಿಸಲು ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ಜಾನಪದ ಕ್ರೀಡೆ ಕಂಬಳ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದೆ.

ಗಂಗಾರತಿ ಸೇರಿದಂತೆ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ದೈವಕ್ಕೆ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಕಂಬಳಕ್ಕೆ ಚಾಲನೆ ನೀಡಲಾಯಿತು.‌ ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ‌ ಕರಂದಾಜ್ಞೆ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಾಕ್ಷಿಯಾದರು.

‘ಬೆಂಗಳೂರು ಕಂಬಳ‌ ನಮ್ಮ‌ ಕಂಬಳ‌’ ಹೆಸರಿನಲ್ಲಿ‌ ನಡೆಯುತ್ತಿರುವ ಉತ್ಸವಕ್ಕೆ 150ಕ್ಕೂ ಹೆಚ್ಚು ಚಾಂಪಿಯನ್ ಕೋಣಗಳ ಜೋಡಿ ಹಾಗೂ ನುರಿತ‌ ಓಟಗಾರರು ಭಾಗಿಯಾಗಿದ್ದಾರೆ. ಮುಸ್ಲಿಂ ಸಮುದಾಯದ 6 ಜೋಡಿ, ಕ್ರಿಶ್ವಿಯನ್ ಸಮುದಾಯದ 4 ಜೋಡಿ ಕೋಣಗಳು ಭಾಗಿಯಾಗಿವೆ. ನಿರೀಕ್ಷೆಗೂ ಮೀರಿ ಕಂಬಳ ಕೋಣಗಳ ನೋಂದಣಿಯಾಗಿದೆ. ಇತಿಹಾಸದಲ್ಲಿ ಮೊದಲ ಬಾರಿ ಕರಾವಳಿ ಕಂಬಳ ಊರು ಬಿಟ್ಟು ಬೇರೆಯೂರಿಗೆ ಬಂದಿವೆ.

ಊರಿನಿಂದಲೇ ಬಂದಿರುವ ನಾಟಿ ವೈದ್ಯರು ಸೇರಿದಂತೆ ಬೆಂಗಳೂರಿನ ಪಶುವೈದ್ಯರು ಕೋಣಗಳ ಆರೋಗ್ಯದ ಮೇಲ್ವಿಚಾರಣೆ ನಡೆಸಿದ್ದಾರೆ. ಸದ್ಯ ಕಂಬಳಕ್ಕೆ ಸಾಂಕೇತಿಕ ಉದ್ಘಾಟನೆ ಸಿಕ್ಕಿದ್ದು, ಮಧ್ಯಾಹ್ನ 3ರ ವರೆಗೆ ಕಂಬಳದ ಕೆರೆಯಲ್ಲಿ ಕೋಣಗಳ ಟ್ರಯಲ್ ನಡೆಯಲಿದೆ. 3 ಗಂಟೆಯ ಬಳಿಕವಷ್ಟೇ ಸ್ಪರ್ಧಾಕೂಟ ಪ್ರಾರಂಭವಾಗಲಿದೆ. ಇಲ್ಲಿ ಸಾರ್ವಜನಿಕರ ವೀಕ್ಷಣೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ನೀರಿಗಿಳಿಯುವ ಮುನ್ನ ಕೋಣಗಳನ್ನು ಹೇಗೆ ಸಿದ್ಧ ಮಾಡೋದು ಗೊತ್ತಾ?: ಸ್ಪರ್ಧೆಗೂ ಮುನ್ನ ಕೋಣಗಳನ್ನು ಓಟಗಾರರು ಅಣಿಗೊಳಿಸುವುದೇ ಆಸಕ್ತಿಕರವಾಗಿರುತ್ತದೆ. ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ಕರಾವಳಿ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಕೋಣಗಳು ಸ್ಪರ್ಧೆಯ ಹುರಿಯಾಳಾಗಿವೆ. ಮಾಲೀಕರು, ಮೇಲ್ವಿಚಾರಕರು ಕುಡಿಯುವ ನೀರು ಸೇರಿದಂತೆ ತಮ್ಮ‌ ಕೋಣಗಳಿಗೆ ಬೇಕಾದ ಸಕಲ ಸೌಲಭ್ಯಗಳ ಬಗ್ಗೆ ಬಹಳ ಮುತುವರ್ಜಿ ವಹಿಸಿದ್ದಾರೆ.

ಸ್ಪರ್ಧೆಗೂ ಬಿಸಿ ನೀರಿನ‌ ಮಜ್ಜನ: ಸ್ಪರ್ಧೆಗೂ ಮುನ್ನ ಕೋಣಗಳನ್ನು ಬಿಸಿ ನೀರಿನಲ್ಲಿ ಮಜ್ಜನ ಮಾಡಿಸುತ್ತಾರೆ.‌ ಇಲ್ಲಿನ ವಾತಾವರಣ ಹೊಂದಿಕೊಳ್ಳಲು ಅಗತ್ಯ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಅಖಾಡಕ್ಕೆ‌ ಇಳಿಯಲು ಸಿದ್ಧವಾಗಿರುವ ಕಾಟಿ ಹಾಗೂ ರಾಜ ಕೋಣಗಳಿಗೆ ಪ್ರತಿ ತಿಂಗಳು ಒಂದು ಲಕ್ಷ ವೆಚ್ಚ ತಗಲುತ್ತದೆ. ಕಂಬಳ ಸ್ಪರ್ಧೆಯಲ್ಲಿ ಗೆದ್ದು ಬಂಗಾರ ಪಡೆಯುವುದಕ್ಕಿಂತ ಕೆಲ ಕೋಣ ಮಾಲೀಕರಿಗೆ ಮನೆತನದ ಪ್ರತಿಷ್ಠೆಯಾಗಿದೆ. ನೀರಿಗಿಳಿಯುವ ಮುನ್ನ ಬಿಸಿ ನೀರಿನ ಮಜ್ಜನ‌ ಮಾಡಿಸಿ ನಂತರ ಸೇವಿಸಲು ಕೋಣಗಳಿಗೆ ಅಗತ್ಯವಾದ ಹುಲ್ಲು ನೀಡುತ್ತಾರೆ. ರೇಸ್ ವೇಳೆ ಕೋಣಗಳ ಮೇಲೆ‌ ಚಿಟ್ಟೆ, ಇನ್ನಿತರ ಕ್ರಿಮಿಕೀಟ ಕೂರದಿರಲು ಕೊಬ್ಬರಿ ಎಣ್ಣೆಯಿಂದ‌ ಮಸಾಜ್ ಮಾಡಲಾಗುತ್ತದೆ. ನಂತರ ವಾಕಿಂಗ್ ಮಾಡಿಸಲಾಗುತ್ತದೆ. ಕಟುಮಸ್ತಾಗಿ ಕೋಣಗಳನ್ನು ತಯಾರು ಮಾಡಿ, ದೃಷ್ಟಿ ತೆಗೆದು‌ ಪೂಜೆ ಮಾಡಿದರಷ್ಟೇ ಸ್ಪರ್ಧೆಯ ಹುರಿಯಾಳು ಆಗಲಿವೆ.

ಕ್ರೀಡೆ ಜೊತೆ ಸಾಂಸ್ಕೃತಿಕ ಹಬ್ಬ: ಬೆಂಗಳೂರು ಕಂಬಳದಲ್ಲಿ ಕ್ರೀಡಾಕೂಟದ ಜತೆ ಜತೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಕರಂಗೋಲು ನೃತ್ಯ, ಯಕ್ಷಗಾನ, ಆಟಿಕಳಂಜ, ಹುಲಿವೇಷ, ಕಂಗೀಲು, ಮಂಕಾಳಿ ನಲಿಕೆ, ಬಾಲಿವುಡ್ ಸಮಕಾಲೀನ ನೃತ್ಯ ಸೇರಿದಂತೆ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.

ಬೆಂಗಳೂರು ಕೆರೆ ಅತ್ಯಂತ ಉದ್ದದ ಕೆರೆಯಾಗಿದೆ. ಹಗ್ಗದ ಓಟದಲ್ಲಿ ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸಲಾಗುತ್ತದೆ. ನೇಗಿಲು ಓಟದಲ್ಲಿ ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡವನ್ನು ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸಲಾಗುತ್ತದೆ. ಇನ್ನೂ ಅಡ್ಡ ಹಲಗೆಯಲ್ಲಿ ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸಲಾಗುತ್ತದೆ.

ಕೆನೆ ಹಲಗೆಯಲ್ಲಿ ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸಲಾಗುತ್ತದೆ. ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯವಾಗಿರುತ್ತದೆ. ಕಂಬಳದ ಪ್ರಾರಂಭ ಹಾಗೂ ಅತ್ಯಂತದಲ್ಲಿ ಲೇಸರ್ ಬೀಮ್ ಎಲೆಕ್ಟ್ರಿಕ್ ಸೆಸ್ಸಾರ್ ಆಳವಡಿಸಲಾಗಿದೆ. ಇದರಿಂದ ಕೋಣದ ಓಟ ನಿಖರವಾದ ಸಮಯವನ್ನು ಕಂಡು ಹಿಡಿಯಬಹುದಾಗಿದೆ.

Source : https://m.dailyhunt.in/news/india/kannada/etvbhar9348944527258-epaper-etvbhkn/daivakke+puje+sallisi+bengaluru+kambala+namma+kambala+kke+saanketika+chaalane-newsid-n559593740?listname=newspaperLanding&topic=homenews&index=8&topicIndex=0&mode=pwa&action=click

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *