
ಚೊಚ್ಚಲ ಆವೃತ್ತಿಯ ಬಹುನಿರೀಕ್ಷಿತ ಮಹಿಳಾ ಪ್ರೀಮಿಯರ್ ಲೀಗ್ (Women’s Premier League) ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೇ ವೇಳಾಪಟ್ಟಿ (Schedule) ಪ್ರಕಟಗೊಂಡಿದ್ದು ಮಾರ್ಚ್ 4 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದೆ. ಮಾರ್ಚ್ 26ರವರೆಗೆ ನಡೆಯಲಿದೆ. ಮೊದಲ ಆವೃತ್ತಿಯ ಟೂರ್ನಿಯಲ್ಲಿ ಐದು ಫ್ರಾಂಚೈಸಿಗಳು ಕಪ್ಗಾಗಿ ಪೈಪೋಟಿ ನಡೆಸಲಿದೆ. ಟೂರ್ನಿಯಲ್ಲಿ ಒಟ್ಟು 20 ಲೀಗ್ ಪಂದ್ಯಗಳು ಮತ್ತು 2 ಪ್ಲೇ-ಆಫ್ಸ್ ಪಂದ್ಯಗಳು ಸೇರಿ 23 ದಿನ ನಡೆಯಲಿದೆ. ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜಯಂಟ್ಸ್, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಯು.ಪಿ ವಾರಿಯರ್ಸ್ ತಂಡಗಳು ಮೊದಲ ಆವೃತ್ತಿಯ ಟೂರ್ನಿಯಲ್ಲಿ ಪೈಪೋಟಿ ನಡೆಸುವ ತಂಡಗಳು.
ಮಹಿಳಾ ಪ್ರೀಮಿಯರ್ ಲೀಗ್ನ ಎಲ್ಲ ಪಂದ್ಯಗಳಿಗೆ ಮಹಾರಾಷ್ಟ್ರದ ಡಿವೈ ಪಾಟೀಲ್ ಸ್ಟೇಡಿಯಂ ಮತ್ತು ಬ್ರಬೋರ್ನ್ ಸ್ಟೇಡಿಯಂ ಆತಿಥ್ಯವಹಿಸಲಿದೆ. ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಲಿದೆ. ಮಾರ್ಚ್ 5ರಂದು ಟೂರ್ನಿಯ ಮೊದಲ ಡಬಲ್ ಹೆಡರ್ ಪಂದ್ಯ ನಡೆಯಲಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಕಾದಾಟ ನಡೆಸಲಿವೆ. ಅದೇ ದಿನ ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಯು.ಪಿ ವಾರಿಯರ್ಸ್ ತಂಡ ಗುಜರಾತ್ ಜಯಂಟ್ಸ್ ತಂಡದ ಸವಾಲು ಎದುರಿಸಲಿದೆ.
ಎರಡು ಕ್ರೀಡಾಂಗಣಗಳಲ್ಲಿ ತಲಾ 11 ಪಂದ್ಯಗಳು ಆಯೋಜನೆಯಾಗಲಿದೆ. ಲೀಗ್ ಹಂತದಲ್ಲಿ ಪ್ರತಿ ತಂಡಗಳು 8 ಪಂದ್ಯಗಳನ್ನು ಆಡಲಿದೆ. ಡಬಲ್ ಹೆಡ್ಡರ್ ದಿನ ಮೊದಲ ಪಂದ್ಯ ಮಧ್ಯಾಹ್ನ 3:30 ಹಾಗೂ ಸಂಜೆ 7:30ಕ್ಕೆ ಆರಂಭವಾಗಲಿದೆ. ಲೀಗ್ ಹಂತದಲ್ಲಿ ಅಗ್ರ ಮೂರು ಸ್ಥಾನ ಪಡೆಯುವ ತಂಡಗಳು ಪ್ಲೇ-ಆಫ್ಸ್ ಹಂತಕ್ಕೆ ಕಾಲಿಡಲಿವೆ. ಐಪಿಎಲ್ನಂತೆ ಲೀಗ್ ಹಂತದಲ್ಲಿ ಅಂಕಪಟ್ಟಿಯ ಅಗ್ರ ಸ್ಥಾನ ಪಡೆಯುವ ತಂಡ ನೇರವಾಗಿ ಫೈನಲ್ಗೆ ಅರ್ಹತೆ ಪಡೆಯಲಿದೆ. ಲೀಗ್ ಹಂತದಲ್ಲಿ 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಎಲಿಮಿನೇಟರ್ ಪಂದ್ಯದಲ್ಲಿ ಪೈಪೋಟಿ ನಡೆಸಲಿವೆ. ಅಂಕಪಟ್ಟಿಯ ಅಗ್ರಸ್ಥಾನಿ ಮತ್ತು ಎಲಿಮಿನೇಟರ್ ಪಂದ್ಯ ಗೆದ್ದ ತಂಡ ಫೈನಲ್ನಲ್ಲಿ ಟ್ರೋಫಿಗಾಗಿ ಹೋರಾಡಲಿದೆ.
ಭಾರತದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ 2023 ರ ಟಿವಿ ಪ್ರಸಾರದ ಹಕ್ಕುಗಳನ್ನು Sport18 ನೆಟ್ವರ್ಕ್ ಪಡೆದುಕೊಂಡಿದೆ. ಹೀಗಾಗಿ ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್ 18 ನಲ್ಲಿ ಮಾತ್ರ ಎಲ್ಲ ಪಂದ್ಯಗಳು ನೇರಪ್ರಸಾರವಾಗಲಿದೆ. ಡಬ್ಲ್ಯೂಪಿಎಲ್ 2023ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.
4 ಮಾರ್ಚ್- GG vs MI – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
5 ಮಾರ್ಚ್- RCB vs DC – ಬ್ರಬೋರ್ನ್ CCI – 3:30 PM
5 ಮಾರ್ಚ್ – UPW vs GG – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
5 ಮಾರ್ಚ್ – UPW vs GG – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
6 ಮಾರ್ಚ್- MI vs RCB – ಬ್ರಬೋರ್ನ್ CCI – 7:30 PM
7 ಮಾರ್ಚ್- DC vs UPW – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
8 ಮಾರ್ಚ್- GG vs RCB – ಬ್ರಬೋರ್ನ್ CCI – 7:30 PM
9 ಮಾರ್ಚ್- DC vs MI – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
10 ಮಾರ್ಚ್- RCB vs UPW – ಬ್ರಬೋರ್ನ್ CCI – 7:30 PM
11 ಮಾರ್ಚ್- GG vs DC – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
12 ಮಾರ್ಚ್- UPW vs MI – ಬ್ರಬೋರ್ನ್ CCI -7:30 PM
13 ಮಾರ್ಚ್- DC vs RCB – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
14 ಮಾರ್ಚ್- MI vs GG – ಬ್ರಬೋರ್ನ್ CCI – 7:30 PM
15 ಮಾರ್ಚ್- UPW vs RCB – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
16 ಮಾರ್ಚ್- DC vs GG – ಬ್ರಬೋರ್ನ್ CCI -7:30 PM
18 ಮಾರ್ಚ್- MI vs UPW – ಡಿವೈ ಪಾಟೀಲ್ ಕ್ರೀಡಾಂಗಣ – 3:30 PM
18 ಮಾರ್ಚ್- RCB vs GG – ಬ್ರಬೋರ್ನ್ CCI -7:30 PM
20 ಮಾರ್ಚ್- GG vs UPW – ಬ್ರಬೋರ್ನ್ CCI – 3:30 PM
20 ಮಾರ್ಚ್- MI vs DC – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
21 ಮಾರ್ಚ್- RCB vs MI – ಡಿವೈ ಪಾಟೀಲ್ ಕ್ರೀಡಾಂಗಣ – 3:30 PM
21 ಮಾರ್ಚ್- UPW vs DC – ಬ್ರಬೋರ್ನ್ CCI – 7:30 PM
24 ಮಾರ್ಚ್- ಎಲಿಮಿನೇಟರ್ – ಡಿವೈ ಪಾಟೀಲ್ ಕ್ರೀಡಾಂಗಣ – 7:30 PM
26 ಮಾರ್ಚ್- ಫೈನಲ್ – ಬ್ರಬೋರ್ನ್ CCI – 7:30 PM
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ