WTC Final 2023: ಭಾರತಕ್ಕೆ 444 ರನ್​ಗಳ ಗುರಿ: ಎಷ್ಟು ಓವರ್​ಗಳಲ್ಲಿ ಚೇಸ್ ಮಾಡಬೇಕು? ಇಲ್ಲಿದೆ ಮಾಹಿತಿ

WTC Final 2023: ಲಂಡನ್​ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್ ಪಂದ್ಯದ 2ನೇ ಇನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ತಂಡ ಡಿಕ್ಲೇರ್ ಘೋಷಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು.ಅದರಂತೆ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡವು ಟ್ರಾವಿಸ್ ಹೆಡ್ (163) ಹಾಗೂ ಸ್ಟೀವ್ ಸ್ಮಿತ್ (121) ಅವರ ಶತಕದ ನೆರವಿನಿಂದ 469 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಬೀಸಿದ ಟೀಮ್ ಇಂಡಿಯಾ ಅಜಿಂಕ್ಯ ರಹಾನೆ (89) ಹಾಗೂ ಶಾರ್ದೂಲ್ ಠಾಕೂರ್ (51) ಅವರ ಅರ್ಧಶತಕದ ನೆರವಿನಿಂದ 296 ರನ್​ಗಳಿಸಿ ಆಲೌಟ್ ಆಗಿತ್ತು.173 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದ ಆಸ್ಟ್ರೇಲಿಯಾ ಪರ ಅಲೆಕ್ಸ್ ಕ್ಯಾರಿ (66) ಅರ್ಧಶತಕ ಬಾರಿಸಿ ಮಿಂಚಿದ್ದರು. ಅಲ್ಲದೆ 8 ವಿಕೆಟ್ ನಷ್ಟಕ್ಕೆ 270 ರನ್​ಗಳಿಸಿ ಡಿಕ್ಲೇರ್ ಘೋಷಿಸಿದೆ.ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ಟೀಮ್ ಇಂಡಿಯಾಗೆ ಈ ಪಂದ್ಯದಲ್ಲಿ ಗೆಲ್ಲಲು ದ್ವಿತೀಯ ಇನಿಂಗ್ಸ್​ನಲ್ಲಿ 444 ರನ್​ಗಳ ಬೃಹತ್ ಗುರಿ ಬೆನ್ನತ್ತಬೇಕಿದೆ. ಸದ್ಯ 4ನೇ ದಿನದಾಟದ 2ನೇ ಸೆಷನ್ ನಡೆಯುತ್ತಿದ್ದು, ಇದಾದ ಬಳಿಕ 5ನೇ ದಿನದಾಟ ಬಾಕಿಯಿದೆ.ಅಂದರೆ 137 ಓವರ್​ಗಳು ಬಾಕಿಯಿದ್ದು, ಇದರೊಳಗೆ ಟೀಮ್ ಇಂಡಿಯಾ 444 ರನ್​ ಕಲೆಹಾಕಿದೆ. ಇಲ್ಲಿ ಟೀಮ್ ಇಂಡಿಯಾ ಪ್ರತಿ ಓವರ್​ಗೆ 3.24 ರ ಸರಾಸರಿಯಲ್ಲಿ ರನ್​ ಕಲೆಹಾಕಿದರೆ ಗೆಲ್ಲಬಹುದು. ಆದರೆ ಬಲಿಷ್ಠ ಬೌಲಿಂಗ್ ಲೈನಪ್ ಹೊಂದಿರುವ ಆಸೀಸ್ ವಿರುದ್ಧ ಭಾರತೀಯ ಬ್ಯಾಟ್ಸ್​ಮನ್ ಹೇಗೆ ಬ್ಯಾಟ್ ಬೀಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

source https://tv9kannada.com/photo-gallery/cricket-photos/wtc-final-2023-team-indias-target-444-with-137-overs-kannada-news-zp-598442.html

Leave a Reply

Your email address will not be published. Required fields are marked *