WTC Final 2023: ಬಲಿಷ್ಠ ಪ್ಲೇಯಿಂಗ್ ಇಲೆವೆನ್​ನ ಕಣಕ್ಕಿಳಿಸಿದ ಟೀಮ್ ಇಂಡಿಯಾ

WTC Final 2023: ಲಂಡನ್​ನ ಕೆನ್ನಿಂಗ್ಟನ್ ಓವಲ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದಾರೆ.ಉಭಯ ತಂಡಗಳು ಇದುವರೆಗೆ 106 ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ವೇಳೆ ಟೀಮ್ ಇಂಡಿಯಾ ಗೆದ್ದಿರುವುದು ಕೇವಲ 32 ಪಂದ್ಯಗಳಲ್ಲಿ ಮಾತ್ರ. ಇನ್ನು ಆಸ್ಟ್ರೇಲಿಯಾ ತಂಡವು 44 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಹಾಗೆಯೇ 29 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡರೆ, 1 ಪಂದ್ಯವು ರದ್ದಾಗಿತ್ತು.ವಿಶೇಷ ಎಂದರೆ ಉಭಯ ತಂಡಗಳು ಇದೇ ಮೊದಲ ಬಾರಿಗೆ ತಟಸ್ಥ ಸ್ಥಳದಲ್ಲಿ ಮುಖಾಮುಖಿಯಾಗುತ್ತಿದೆ. ಹೀಗಾಗಿ ಓವಲ್ ಮೈದಾನದಲ್ಲಿ ರಣರೋಚಕ ಹೋರಾಟವನ್ನು ನಿರೀಕ್ಷಿಸಬಹುದು.ಇನ್ನು ಈ ನಿರ್ಣಾಯಕ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ಅನ್ನು ಕಣಕ್ಕಿಳಿಸಿದೆ. ಅದರಂತೆ ಭಾರತ ತಂಡದ ಆಡುವ ಬಳಗ ಈ ಕೆಳಗಿನಂತಿದೆ...ಶುಭ್​ಮನ್ ಗಿಲ್ಚೇತೇಶ್ವರ ಪೂಜಾರವಿರಾಟ್ ಕೊಹ್ಲಿ ಅಜಿಂಕ್ಯ ರಹಾನೆರವೀಂದ್ರ ಜಡೇಜಾಕೆಎಸ್​ ಭರತ್ (ವಿಕೆಟ್ ಕೀಪರ್)ಮೊಹಮ್ಮದ್ ಸಿರಾಜ್ಉಮೇಶ್ ಯಾದವ್ಮೊಹಮ್ಮದ್ ಶಮಿಶಾರ್ದೂಲ್ ಠಾಕೂರ್

source https://tv9kannada.com/photo-gallery/cricket-photos/wtc-final-2023-team-india-playing-xi-kannada-news-zp-595961.html

Leave a Reply

Your email address will not be published. Required fields are marked *