WTC Final 2023: ಟೀಮ್ ಇಂಡಿಯಾ ಪ್ಲೇಯಿಂಗ್ 11 ಹೆಸರಿಸಿದ ಟಾಮ್ ಮೂಡಿ

WTC Final 2023: ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ಪಂದ್ಯಕ್ಕಾಗಿ ದಿನಗಣನೆ ಶುರುವಾಗಿದೆ. ಜೂನ್ 7 ರಿಂದ ಇಂಗ್ಲೆಂಡ್ ಓವಲ್​ನ​ ಮೈದಾನದಲ್ಲಿ ಶುರುವಾಗಲಿರುವ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಲಿದೆ.ಉಭಯ ತಂಡಗಳು ಬಲಿಷ್ಠವಾಗಿರುವ ಕಾರಣ ಈ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದೇ ಈಗ ಕುತೂಹಲ. ಅದರಲ್ಲೂ ಟೀಮ್ ಇಂಡಿಯಾದಿಂದ ಸ್ಟಾರ್ ಆಟಗಾರರು ಹೊರಗುಳಿದಿರುವ ಕಾರಣ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಕಂಡು ಬರುವುದು ಖಚಿತ.ಏಕೆಂದರೆ ಈ ಪಂದ್ಯಕ್ಕೆ ಭಾರತ ತಂಡದ ಸ್ಟಾರ್ ಆಟಗಾರರಾದ ಜಸ್​ಪ್ರೀತ್ ಬುಮ್ರಾ, ಕೆಎಲ್ ರಾಹುಲ್, ರಿಷಭ್ ಪಂತ್ ಅಲಭ್ಯರಾಗಿದ್ದಾರೆ. ಹೀಗಾಗಿ ಇವರ ಸ್ಥಾನದಲ್ಲಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿದೆ. ಈ ಕುತೂಹಲಕ್ಕೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಟಾಮ್ ಮೂಡಿ.ಚಾನೆಲ್​ ಚರ್ಚೆಯೊಂದರಲ್ಲಿ ಮಾತನಾಡಿದ ಟಾಮ್ ಮೂಡಿ, ಭಾರತ ತಂಡವು ಮಧ್ಯಮ ಕ್ರಮಾಂಕವನ್ನು ಮತ್ತಷ್ಟು ಬಲಪಡಿಸಬೇಕು. ಹೀಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಸ್ಪಿನ್ ಆಲ್​ರೌಂಡರ್​ ಅಶ್ವಿನ್​ಗಿಂತ ಅಜಿಂಕ್ಯ ರಹಾನೆಗೆ ಚಾನ್ಸ್ ನೀಡುವುದು ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.ಹಾಗೆಯೇ ವಿಕೆಟ್ ಕೀಪರ್ ಆಗಿ ಯುವ ದಾಂಡಿಗ ಇಶಾನ್ ಕಿಶನ್​ಗಿಂತಲೂ ಕೆಎಸ್ ಭರತ್ ಅವರನ್ನು ಆಯ್ಕೆ ಮಾಡುವುದು ಸೂಕ್ತ ಎಂದಿದ್ದಾರೆ. ಏಕೆಂದರೆ ತಂಡದಲ್ಲಿ ಜಡೇಜಾ, ಶಾರ್ದೂಲ್​ರಂತಹ ಆಲ್​ರೌಂಡರ್​ಗಳಿದ್ದಾರೆ. ಹೀಗಾಗಿ ಭರತ್​ಗೆ ಚಾನ್ಸ್​ ನೀಡುವುದು ಉತ್ತಮ ಎಂದಿದ್ದಾರೆ. ಅದರಂತೆ ಟಾಮ್ ಮೂಡಿ ಆಯ್ಕೆ ಮಾಡಿದ ಟೀಮ್ ಇಂಡಿಯಾ ಆಡುವ ಬಳಗ ಈ ಕೆಳಗಿನಂತಿದೆ...ರೋಹಿತ್ ಶರ್ಮಾ (ನಾಯಕ)ಶುಭಮನ್ ಗಿಲ್ಚೇತೇಶ್ವರ ಪೂಜಾರವಿರಾಟ್ ಕೊಹ್ಲಿಅಜಿಂಕ್ಯ ರಹಾನೆಕೆಎಸ್ ಭರತ್ (ವಿಕೆಟ್ ಕೀಪರ್)ರವೀಂದ್ರ ಜಡೇಜಾಶಾರ್ದೂಲ್ ಠಾಕೂರ್ಮೊಹಮ್ಮದ್ ಶಮಿಮೊಹಮ್ಮದ್ ಸಿರಾಜ್ಉಮೇಶ್ ಯಾದವ್

source https://tv9kannada.com/photo-gallery/cricket-photos/wtc-final-2023-tom-moodys-india-playing-xi-for-wtc-final-kannada-news-zp-593454.html

Leave a Reply

Your email address will not be published. Required fields are marked *