
ಲಂಡನ್ (ಎಎಫ್‌ಪಿ): ವೇಗದ ಬೌಲರ್ ಕಗಿಸೊ ರಬಾಡ (51ಕ್ಕೆ5) ಅವರ ಐದು ವಿಕೆಟ್ ಗೊಂಚಲಿನ ನೆರವಿನಿಂದ ದಕ್ಷಿಣ ಆಫ್ರಿಕಾ, ಬುಧವಾರ ಲಾರ್ಡ್ಸ್‌ನಲ್ಲಿ ಆರಂಭವಾದ ವಿಶ್ವ ಟೆಸ್ಟ್ ಕ್ರಿಕೆಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 212 ರನ್‌ಗಳಿಗೆ ಉರುಳಿಸಿತು.
ಆದರೆ ಆಸ್ಟ್ರೇಲಿಯಾದ ಅನುಭವಿ ವೇಗದ ಬೌಲರ್‌ಗಳು ತಿರುಗೇಟು ನೀಡಿದ್ದು ಮೊದಲ ದಿನದಾಟ ಮುಗಿದಾಗ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 4 ವಿಕೆಟ್ 43 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ. ಮಿಚೆಲ್ ಸ್ಟಾರ್ಕ್ 10 ರನ್ನಿಗೆ 2 ವಿಕೆಟ್ ಪಡೆದಿದ್ದಾರೆ. ದಿನದಾಟದಲ್ಲಿ 14 ವಿಕೆಟ್‌ಗಳು ಉರುಳಿದವು.
ಲಾರ್ಡ್ಸ್ ಕ್ರೀಡಾಂಗಣದಲ್ಲಿ ರಬಾಡ ಎರಡನೇ ಬಾರಿ ಐದು ವಿಕೆಟ್ ಪಡೆದರು. ಟೀ ವಿರಾಮದ ವೇಳೆಗೆ 5 ವಿಕೆಟ್‌ಗೆ 190 ರನ್ ಗಳಿಸಿದ್ದ ಆಸ್ಟ್ರೇಲಿಯಾ ನಂತರ ಆ ಮೊತ್ತಕ್ಕೆ 22 ರನ್ ಸೇರಿಸಲಷ್ಟೇ ಶಕ್ತವಾಯಿತು.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿದ ತೆಂಬಾ ಬವುಮಾ ನಿರ್ಧಾರ ಸಮರ್ಥಿಸುವಂತೆ ರಬಾಡ ಅವರು ಇನಿಂಗ್ಸ್‌ನ ಏಳನೇ ಓವರಿನಲ್ಲೇ ಉಸ್ಮಾನ್ ಖ್ವಾಜಾ ಮತ್ತು ಕ್ಯಾಮರಾನ್ ಗ್ರೀನ್ ಅವರ ವಿಕೆಟ್‌ಗಳನ್ನು ಪಡೆದು ಅವರು ಆರಂಭದಲ್ಲೇ ಆಸ್ಟ್ರೇಲಿಯಾಕ್ಕೆ ಪೆಟ್ಟು ನೀಡಿದ್ದರು.
ಅವರಿಗೆ ಬೆಂಬಲ ನೀಡಿದ ಮಾರ್ಕೊ ಯಾನ್ಸೆನ್ ಅವರು ಮಾರ್ನಸ್ ಲಾಬುಶೇನ್ ಮತ್ತು ಅಪಾಯಕಾರಿ ಆಟಗಾರ ಟ್ರಾವಿಸ್ ಹೆಡ್ ಅವರ ವಿಕೆಟ್‌ಗಳನ್ನು ಪಡೆದರು. ಆಗ ಮೊತ್ತ 4 ವಿಕೆಟ್‌ಗೆ 67 ರನ್ ಆಗಿತ್ತು.
ಆದರೆ ಉತ್ತಮ ಲಯದಲ್ಲಿರುವ ಅನುಭವಿ ಸ್ಟೀವ್ ಸ್ಮಿತ್ (66, 10×4) ಅರ್ಧ ಶತಕ ಬಾರಿಸಿ ಆಸರೆಯಾದರು. ತಂಡದ ಪರ ಅತ್ಯಧಿಕ ಮೊತ್ತ ಗಳಿಸಿದ ಬ್ಯೂ ವೆಬ್‌ಸ್ಟರ್ (72, 92ಎ) ಜೊತೆ ಐದನೇ ವಿಕೆಟ್‌ಗೆ 69 ರನ್ ಸೇರಿಸಿದ್ದರಿಂದ ಕಾಂಗರೂ ಪಡೆ ಚೇತರಿಸಿಕೊಂಡಿತು. ಈ ಹಂತದಲ್ಲಿ ಮರ್ಕರಂ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿ ಯಾನ್ಸೆನ್ ಹಿಡಿದ ಉತ್ತಮ ಕ್ಯಾಚಿಗೆ ಸ್ಮಿತ್ ನಿರ್ಗಮಿಸಬೇಕಾಯಿತು.
ಟೀ ವಿರಾಮದ ನಂತರ, ರಬಾಡ ಒಂದೇ ಓವರಿನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಮತ್ತು ಆಕ್ರಮಣಕಾರಿಯಾಗಿದ್ದ ವೆಬ್‌ಸ್ಟರ್ ವಿಕೆಟ್‌ಗಳನ್ನು ಪಡೆದು ಮಿಂಚಿದರು. ನಂತರ ಮಿಚೆಲ್ ಸ್ಟಾರ್ಕ್ ಅವರ ವಿಕೆಟ್ ಕೂಡ ಪಡೆದು ಇನಿಂಗ್ಸ್‌ಗೆ ತೆರೆಯೆಳೆದರು.
ರಬಾಡ ಈ ಹಾದಿಯಲ್ಲಿ ಅಲನ್ ಡೊನಾಲ್ಡ್ (330 ವಿಕೆಟ್) ಅವರನ್ನು ಹಿಂದೆಹಾಕಿ ದಕ್ಷಿಣ ಆಫ್ರಿಕಾದ ಸಾರ್ವಕಾಲಿಕ ವಿಕೆಟ್ ಗಳಿಕೆದಾರರಲ್ಲಿ ನಾಲ್ಕನೇ ಸ್ಥಾನ ಪಡೆದರು. ರಬಾಡ 332 ವಿಕೆಟ್‌ಗಳನ್ನು ಪಡೆದಂತಾಗಿದೆ.

ಸ್ಟೀವ್ ಸ್ಮಿತ್
ಸ್ಕೋರ್ ಕಾರ್ಡ್
ಆಸ್ಟ್ರೇಲಿಯಾ 1ನೇ ಇನಿಂಗ್ಸ್:
212 (56.4 ಓವರುಗಳಲ್ಲಿ)
ಖ್ವಾಜಾ ಸಿ ಬೆಡ್ಡಿಂಗಮ್ ಬಿ ರಬಾಡ 0 (20ಎ)
ಲಾಬುಶೇನ್ ಸಿ ವೇರಿಯನ್ ಬಿ ಯಾನ್ಸೆನ್ 17 (56ಎ, 4×1)
ಗ್ರೀನ್ ಸಿ ಮರ್ಕರಂ ಬಿ ರಬಾಡ 4
(3ಎ, 4×1)
ಸ್ಮಿತ್ ಸಿ ಯಾನ್ಸೆನ್ ಬಿ ಮರ್ಕರಂ 66 (112ಎ, 4×10)
ಹೆಡ್ ಸಿ ವೇರಿಯನ್ ಬಿ ಯಾನ್ಸೆನ್ 11 (13ಎ, 4×1)
ವೆಬ್‌ಸ್ಟರ್ ಬಿ ಬೆಡಿಂಗಮ್ ಬಿ ರಬಾಡ 72 (92ಎ, 4×11)
ಕ್ಯಾರಿ ಬಿ ಮಹಾರಾಜ್ 23 (31ಎ, 4×4)
ಕಮಿನ್ಸ್ ಬಿ ರಬಾಡ 1 (6ಎ)
ಸ್ಟಾರ್ಕ್ ಬಿ ರಬಾಡ 1 (12ಎ)
ಲಯನ್ ಬಿ ಯಾನ್ಸೆನ್ 0 (4ಎ)
ಹ್ಯಾಜಲ್‌ವುಡ್ ಔಟಾಗದೇ 0 (1ಎ)
ಇತರೆ 17 (ಲೆಗ್‌ಬೈ 7, ನೋಬಾಲ್ 10)
ವಿಕೆಟ್ ಪತನ: 1-12 (ಉಸ್ಮಾನ್ ಖ್ವಾಜಾ 6.3), 2-16 (ಕ್ಯಾಮರಾನ್ ಗ್ರೀನ್, 6.6), 3-46 (ಮಾರ್ನಸ್ ಲಾಬುಷೇನ್, 17.6), 4-67 (ಟ್ರಾವಿಸ್ ಹೆಡ್, 23.2), 5-146 (ಸ್ಟೀವ್ ಸ್ಮಿತ್, 41.6), 6-192 (ಅಲೆಕ್ಸ್ ಕ್ಯಾರಿ, 51.1), 7-199 (ಪ್ಯಾಟ್ ಕಮಿನ್ಸ್, 52.4), 8-210 (ಬ್ಯೂ ವೆಬ್‌ಸ್ಟರ್, 54.4), 9-211 (ನೇಥನ್ ಲಯನ್, 55.5), 10-212 (ಮಿಚೆಲ್ ಸ್ಟಾರ್ಕ್, 56.4).
ಬೌಲಿಂಗ್: ಕಗಿಸೊ ರಬಾಡ 15.4-5-51-5; ಮಾರ್ಕೊ ಯಾನ್ಸೆನ್ 14-5-49-3; ಲುಂಗಿ ಗಿಡಿ 8-0-45-0; ವಿಯಾನ್ ಮುಲ್ಡರ್ 11-3-36-0; ಕೇಶವ್ ಮಹಾರಾಜ್ 6-0-19-1; ಏಡನ್ ಮರ್ಕರಂ 2-0-5-1
ದಕ್ಷಿಣ ಆಫ್ರಿಕಾ 1ನೇ ಇನಿಂಗ್ಸ್:
4 ವಿಕೆಟ್‌ಗೆ 43 (22 ಓವರುಗಳಲ್ಲಿ)
ಮರ್ಕರಂ ಬಿ ಸ್ಟಾರ್ಕ್ 0 (6ಎ)
ರಿಕೆಲ್ಟನ್ ಸಿ ಖ್ವಾಜಾ ಬಿ ಸ್ಟಾರ್ಕ್ 16 (23ಎ, 4×3)
ಮುಲ್ಡರ್ ಬಿ ಕಮಿನ್ಸ್ 6 (44ಎ)
ಬವುಮಾ ಔಟಾಗದೇ 3 (44ಎ)
ಸ್ಟಬ್ಸ್ ಬಿ ಹ್ಯಾಜಲ್‌ವುಡ್ 2 (13ಎ)
ಬೆಡ್ಡಿಂಗಮ್ ಔಟಾಗದೇ 8 (9ಎ, 4×2)
ಇತರೆ 8 (ಲೆಗ್‌ಬೈ 8)
ವಿಕೆಟ್ ಪತನ: 1-0 (ಮರ್ಕರಂ, 0.6), 2-19 (ರಿಯಾನ್ ರಿಕೆಲ್ಟನ್, 8.4), 3-25 (ವಿಯಾನ್ ಮುಲ್ಡರ್, 15.2), 4-30 (ಟ್ರಿಸ್ಟನ್ ಸ್ಟಬ್ಸ್, 20.2)
ಬೌಲಿಂಗ್: ಮಿಚೆಲ್ ಸ್ಟಾರ್ಕ್
7-3-10-2; ಜೋಶ್ ಹ್ಯಾಜಲ್‌ವುಡ್ 7-3-10-1; ಕಮಿನ್ಸ್ 7-3-14-1; ಲಯನ್ 1-0-1-0.