ಮನಸ್ಸು ಮತ್ತು ದೇಹ ಸದೃಢವಾಗಿ ಇರಬೇಕಾದರೆ ಯೋಗ ಮುಖ್ಯ: ಶಾಸಕ. ಕೆ. ಸಿ ವೀರೇಂದ್ರ ಪಪ್ಪಿ.

 ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 20 ಮನಸ್ಸು ಮತ್ತು ದೇಹ ಸದೃಢವಾಗಿ ಇರಬೇಕಾದರೆ ಯೋಗ ಅತ್ಯಂತ ಮುಖ್ಯ, ಹಾಗಾಗಿ ಯೋಗವನ್ನು ಜೀವನದ ಉದ್ದಕ್ಕೂ ರೂಡಿಸಿಕೊಳ್ಳಿ ಎಂದು ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ತಿಳಿಸಿದರು.

ನಗರದ ಮದಕರಿ ಸರ್ಕಲ್ ಬಳಿ ಇರುವ ಸಾರ್ವಜನಿಕ ಪಾರ್ಕ್‍ನಲ್ಲಿ ಶುಕ್ರವಾರ ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆ ಸಂಘಟನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,  ಪರಿಸರ ಮಾನವನ್ನ ಜೀವನಕ್ಕೆ ಅತೀ ಮುಖ್ಯ, ನಮ್ಮ ಸುತ್ತಮುತ್ತಲಿನ ಉತ್ತಮ ಪರಿಸರವನ್ನು ರಕ್ಷಿಸಬೇಕಿದೆಂದು ಹೇಳಿದರು.

ಮನುಷ್ಯನಿಗೆ ಊಟ, ನಿದ್ರೆ, ಯೋಗ ಇವುಗಳು ಎಷ್ಟು ಮುಖ್ಯವೋ ದೇಹದ ಸಮತೋಲನ ಕಾಪಾಡುವುದು ಅಷ್ಟೇ ಮುಖ್ಯ ಹಾಗಾಗಿ ಪ್ರತಿಯೊಬ್ಬರೂ ಕ್ರೀಡಾತ್ಮಕ ಚಟುವಟಿಕೆಗಳಲ್ಲಿ ಭಾಗವಹಿಸಿ ದೇಹವನ್ನು ಹೊಂದಿಸಿಕೊಳ್ಳಬೇಕು ಎಂದರು.

ಲೇಖಕ ಆನಂದ್ ಕುಮಾರ್ ಮಾತಾಡಿ ಗಾಳಿ,ಬೆಳಕು,ನೀರು ಮಾನವನ ಕುಲಕ್ಕೆ ಅತೀ ಮುಖ್ಯ ಇವುಗಳ ಶುದ್ಧೀಕರಣ ನಮ್ಮ ಕೈಯಲ್ಲಿ ಇದೆ ಹಾಗಾಗಿ ಪರಿಸರವನ್ನು ನಿರ್ಮಿಸಬೇಕಿದೆ ಮನೆ ಸುತ್ತ ಮುತ್ತಲಿನ ಮತ್ತು ಹಾಗೂ ಹೊಲಗಳ ಬದುವಿನಲ್ಲಿ ಮರಗಳನ್ನು ನೆಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುರುಘಾ ಮಠ  ಬಸವಕುಮಾರ್ ಶ್ರೀಗಳು, ಶ್ರಮಜೀವಿ ಕಟ್ಟಡ ಮತ್ತು ಕೂಲಿ ಕಾರ್ಮಿಕರ ಸೇವಾ ಪಡೆ ಸಂಘಟನೆ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ್ ಪಾರ್ಥ, ಟಿಪ್ಪು ಸುಲ್ತಾನ್ ಸಂಘಟನೆಯ ರಾಜ್ಯಾಧ್ಯಕ್ಷ ಖಾಸಿಂ ಅಲಿ, ಜಯಣ್ಣ, ನವೀನ್, ಕುಮಾರ್, ರಂಗಸ್ವಾಮಿ ಹಾಗೂ ಇತರರು ಇದ್ದರು.

Leave a Reply

Your email address will not be published. Required fields are marked *