Health Tips:ಚಕ್ರಮೊಗ್ಗು: ನೈಸರ್ಗಿಕ ಆರೋಗ್ಯಕ್ಕಾಗಿ ಒಂದು ಮಸಾಲೆಯ ಮಹತ್ವ

Health-ಅಡುಗೆ ಮನೆಯ ಕಪಾಟುಗಳಲ್ಲಿ ನಾನಾ ರೀತಿಯ ಮಸಾಲೆಗಳು ಕಣ್ಮುಂದೆ ಬರುತ್ತವೆ ,ಚಕ್ಕೆ, ಲವಂಗ, ಮೊಗ್ಗು, ಏಲಕ್ಕಿ, ಕಾಳುಮೆಣಸು, ದಾಲ್ಚಿನಿ ಇತ್ಯಾದಿ. ಚಕ್ರಮೊಗ್ಗು (Star Anise), ಅದರ ವೈಶಿಷ್ಟ್ಯವಾದ ನಕ್ಷತ್ರಾಕಾರದ ರೂಪ ಮತ್ತು ಪರಿಮಳದಿಂದ, ಅಡುಗೆಗಳಲ್ಲಿ ಒಂದು ಅಮೂಲ್ಯವಾದ ಮಸಾಲೆ.ಅದೇ ಚಕ್ರಮೊಗ್ಗು ಅಥವಾ ಸ್ಟಾರ್ ಹೂವು (Star Anise) ಎಂದು ಕರೆಯಲ್ಪಡುವುದು.ಚಕ್ರಮೊಗ್ಗು ಆಹಾರಕ್ಕೆ ಮಾತ್ರವಲ್ಲ, ಆರೋಗ್ಯಕ್ಕೂ ಸಹಾಯಮಾಡುವ ಪ್ರಮುಖ ಮಸಾಲೆ.

ಸಿಹಿಯಾದ ಲೈಕೋರೈಸ್ ಪರಿಮಳವಿರುವ ಈ ಮಸಾಲೆ, ಖಾರವಾದ ಭಕ್ಷ್ಯಗಳಿಗೂ ವಿಶಿಷ್ಟ ರುಚಿ ನೀಡುತ್ತದೆ. ಸಾರು, ಪಲ್ಯ, ಬಿರಿಯಾನಿ ಮತ್ತು ಪಲಾವ್ ಸೇರಿದಂತೆ ಅನೇಕ ಭಕ್ಷ್ಯಗಳಲ್ಲಿ ಇದನ್ನು ಬಳಸುತ್ತಾರೆ. ಇದರಿಂದ ಆಹಾರಕ್ಕೆ ಉತ್ತಮ ಪರಿಮಳವೂ ಬರುತ್ತದೆ.ಚಕ್ರಮೊಗ್ಗು ಮೂಲತಃ ನೈಋತ್ಯ ಚೀನಾ ಹಾಗೂ ವಿಯೆಟ್ನಾಂನ ಮ್ಯಾಗ್ನೋಲಿಯಾ ಕುಟುಂಬದ ನಿತ್ಯಹರಿದ್ವರ್ಣ ಮರಗಳಿಂದ ಸಿಗುತ್ತದೆ. ಆದರೆ ಇತ್ತೀಚೆಗೆ ಭಾರತದಲ್ಲಿಯೂ ಈ ಮಸಾಲೆಯನ್ನು ಬೆಳೆಸಲಾಗುತ್ತಿದೆ. ಆಹಾರ ತಯಾರಿಕೆಗೆ ಮಾತ್ರವಲ್ಲದೆ, ಆಯುರ್ವೇದ ಹಾಗೂ ಪರಂಪರागत ಔಷಧ ತಯಾರಿಕೆಯಲ್ಲಿ ಕೂಡ ಇದರ ಬಳಕೆ ಕಂಡುಬರುತ್ತದೆ.
ಚಕ್ರಮೊಗ್ಗಿನ ಪ್ರಯೋಜನಗಳು:
ಉತ್ಕರ್ಷಣ ನಿರೋಧಕ
ಈ ಮಸಾಲೆಯು ಆಹಾರದ ರುಚಿಯನ್ನು ಮಾತ್ರವಲ್ಲ, ಅದರ ಪೌಷ್ಟಿಕ ಮೌಲ್ಯವನ್ನೂ ಹೆಚ್ಚಿಸುತ್ತದೆ. ಚಕ್ರಮೊಗ್ಗಿನಲ್ಲಿ ಇರುವ ಸಾರಭೂತ ತೈಲ (Star Anise Oil – SAO) ಆಹಾರ ಮತ್ತು ಔಷಧೀಯ ಬಳಕೆಗೆ ಅತ್ಯಂತ ಮುಖ್ಯವಾದ ಅಂಶವಾಗಿದೆ.2020ರಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಈ ತೈಲವು ಟ್ರಾನ್ಸ್-ಅನೆಥೋಲ್ (trans-Anethole) ಎಂಬ ಪ್ರಮುಖ ಸಂಯುಕ್ತದಿಂದ ಸಮೃದ್ಧವಾಗಿದ್ದು, ಇದು ಶಕ್ತಿಶಾಲಿ ಆಂಟಿಮೈಕ್ರೊಬಿಯಲ್ ಚಟುವಟಿಕೆಗಳನ್ನು ಹೊಂದಿದೆ. SAO ರೋಗಕಾರಕ ಬ್ಯಾಕ್ಟೀರಿಯಾಗಳಾದ ಇಷೆರಿಶಿಯಾ ಕೊಲೈ (E. coli) ಮತ್ತು ಸ್ಟಾಫಿಲೋಕೊಕ್ಕಸ್ ಔರೆಸ್ (S. aureus) ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬಲ್ಲದು. ಇದರ ಪರಿಣಾಮವಾಗಿ, ಚಕ್ರಮೊಗ್ಗು ಒಂದು ನೈಸರ್ಗಿಕ ಸೋಂಕು ನಿರೋಧಕ ಮಸಾಲೆ ಎಂದು ಪರಿಗಣಿಸಬಹುದು.ಬ್ಯಾಕ್ಟೀರಿಯಾದ ಸೋಂಕುಗಳನ್ನು ಒಳಗೊಂಡಂತೆ ನಿರಂತರ ಸೋಂಕುಗಳನ್ನು ಗುಣಪಡಿಸುವಲ್ಲಿಈ ಮಸಾಲೆ ಪರಿಣಾಮಕಾರಿ ಎಂದು ಕಂಡು ಬಂದಿದೆ
ಹಾರ್ಮೋನುಗಳ ಸಮತೋಲನವನ್ನು ಕಾಪಾಡುತ್ತದೆ:
ಚಕ್ರಮೊಗ್ಗುಗಳು ಅಥವಾ ಸ್ಟಾರ್ ಸೋಂಪು ಅನೆಥೋಲ್ ಅನ್ನು ಹೊಂದಿರುತ್ತದೆ, ಇದು ನಮ್ಮ ದೇಹದಲ್ಲಿ ಋತುಚಕ್ರದ ಸೆಳೆತವನ್ನು ನಿಯಂತ್ರಿಸಲು ಮತ್ತು ಇತರ ಹಾರ್ಮೋನುಗಳ ಬದಲಾವಣೆಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.ಚಕ್ರಮೊಗ್ಗಿನಲ್ಲಿರುವ ಕೆಲ ರಾಸಾಯನಿಕಗಳು ಹಾರ್ಮೋನುಗಳನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ. ಇದರ ಕ್ರಿಯೆಯ ವಿಧಾನ ದೇಹದಲ್ಲಿನ ಈಟ್ರೊಜೆನ್‌ನಂತೆಯೇ ಇರುವುದರಿಂದ ಇದು ಹಾರ್ಮೋನ್ ಅಸಮತೋಲನದಿಂದ ಉಂಟಾಗುವ ಹೆಚ್ಚಿನ ರೋಗಲಕ್ಷಣಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ
ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ:
ಚಕ್ರಮೊಗ್ಗುಅಥವಾ ಸ್ಟಾರ್ ಸೋಂಪು, ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ, ಹೊಟ್ಟೆ ಉಬ್ಬರ ಮತ್ತು ಅಜೀರ್ಣವನ್ನು ಕಡಿಮೆ ಮಾಡುವುದಕ್ಕೆ ಸಹಾಯವಿದೆ. ಚಕ್ರಮೊಗ್ಗು ತನ್ನ ಅತ್ಯುತ್ತಮ ಜೀರ್ಣಕಾರಿ ಗುಣಲಕ್ಷಣಗಳಿಗಾಗಿ ಖ್ಯಾತವಾಗಿದೆ. ಇದು ಹೊಟ್ಟೆಯುಬ್ಬರವನ್ನು ತಗ್ಗಿಸಲು ಮತ್ತು ಜೀರ್ಣಕೋಶದ ಅಸ್ವಸ್ಥತೆಯನ್ನು ನಿಯಂತ್ರಣ ಮಾಡುವವರಿಗೆ ಉತ್ತಮ ಗಿಡಮೂಲಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ನೈಸರ್ಗಿಕ ಸಂಯುಕ್ತಗಳು ಜೀರ್ಣಕ್ರಿಯೆಯನ್ನು ಸುಲಭಗೊಳಿಸಲು ಮತ್ತು ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ತ್ವಚೆಗಾಗಿ ಉಪಯೋಗ:
ಚಕ್ರಮೊಗ್ಗ ತೈಲವನ್ನು ಚೆನ್ನಾಗಿ ತೊಳೆದು, ತುಪ್ಪ ಅಥವಾ ತೆಂಗಿಣೆ ಎಣ್ಣೆಯೊಂದಿಗೆ ಬೆರೆಸಿ ಲೇಪಿಸಿದರೆ ಚರ್ಮದ ಸೋಂಕು,ತೊಂದರೆಗಳಿಗೆ ಪರಿಹಾರ.ಇದು ವಿಟಮಿನ್ ಸಿ ಸಮೃದ್ಧವೂ ಹೌದು. ಹೀಗಾಗಿ ಆರೋಗ್ಯಕರ ಚರ್ಮವನ್ನು ಒಳಗಿನಿಂದ ಉತ್ತೇಜಿಸಲು ಇದು ನೆರವಾಗುತ್ತದೆ. ಇದು ತ್ವಚೆಯ ನಯವಾದ ಮತ್ತು ರಕ್ಷಣಾತ್ಮಕ ಪದರಗಳನ್ನು ಉತ್ತೇಜಿಸಲು, ಕಾಲಜನ್ ಉತ್ಪಾದನೆಯನ್ನು ಬೆಂಬಲಿಸುವುದಕ್ಕೂ ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *