ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 28 ಇಂದಿನ ಕಾಂಗ್ರೆಸ್ ಪಕ್ಷದ ನಾಯಕರುಗಳಿಗೆ ಯುವ ಕಾಂಗ್ರೆಸ್ ಭದ್ರ ಬುನಾದಿಯಾಗಿದೆ, ಮುಂಬರುವ ಪಂಚಾಯಿತಿ ಚುನಾವಣೆಗಳಲ್ಲಿ ಯುವ ಕಾಂಗ್ರೆಸ್‍ನವರು ಸ್ಪರ್ದೆ ಮಾಡುವುದರ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ನಿರ್ಧಾರ ಮಾಡಬೇಕಿದೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‍ನ ಅಧ್ಯಕ್ಷರಾದ ಹೆಚ್.ಎಸ್.ಮಂಜುನಾಥಗೌಡ ಕರೆ ನೀಡಿದರು.
ಚಿತ್ರದುರ್ಗ ನಗರದ ಉಮಾಪತಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಕಾಂಗ್ರೆಸ್‍ನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಅದ್ಯತೆಯನ್ನು ನೀಡಲಾಗುವುದು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ ಎಂದು ಮನೆಯಲ್ಲಿ ಇರುವುದಾರೆ ಅಂತಹರನ್ನು ತೆಗೆಯುವುದರ ಮೂಲಕ ಬೇರೆಯವರಿಗೆ ಕೆಲಸವನ್ನು ನೀಡಲಾಗುವುದು. ಗಟ್ಟಿತನದಿಂದ ಕೆಲಸವನ್ನು ಮಾಡಿದಾಗ ಮಾತ್ರ ರಾಜಕೀಯದಲ್ಲಿ ಮುಂದುವರೆಯಲು ಸಾಧ್ಯವಿದೆ ಎಂದರು.

ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ನೀಡಿದೆ ಇದನ್ನು ಬಹುತೇಕ ಜನತೆ ಪ್ರಯೋಜನ ಪಡೆಯುತ್ತಿದ್ದಾರೆ, ಚಿತ್ರದುರ್ಗ ಜಿಲ್ಲೆಯಲ್ಲಿ ಸಾರಿಗೆಯಲ್ಲಿ 4.36 ಕೋಟಿಯಷ್ಟು ಜನತೆ ಪ್ರಯಾಣವನ್ನು ಮಾಡಿದ್ದಾರೆ. ನಮ ಯುವ ಜನಾಂಗ ಪಂಚ ಗ್ಯಾರೆಂಟಿಯನ್ನು ಮನೆ,ಮನೆಗೆ ತಲುಪಿಸುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಇಂದು ಕೇಂದ್ರದಲ್ಲಿ ಅಧಿಕಾರವನ್ನು ನಡೆಸುತ್ತಿರುವ ಬಿಜೆಪಿ ಸರ್ಕಾರ ಸಂವಿಧಾನವನ್ನು ಬದಲಾಯಿಸುವ ಮಾತನ್ನು ಆಡುತ್ತಿದೆ, ಜಾತಿ, ಜಾತಿ ಧರ್ಮಗಳ ಮಧ್ಯೆ ಗಲಾಟೆಯನ್ನು ನಡೆಸುವುದರ ಮೂಲಕ ರಾಜಕಾರಣವನ್ನು ಮಾಡುತ್ತಿದೆ. ಇದರ ಬಗ್ಗೆ ಯುವ ಕಾಂಗ್ರೆಸ್ ಎಚ್ಚರದಿಂದ ಇರಬೇಕಿದೆ. ಜನತೆಗೆ ಸತ್ಯವನ್ನು ತಿಳಿಸುವಂತ ಕಾರ್ಯವನ್ನು ಮಾಡಬೇಕಿದೆ ಎಂದರು.
ಕಾಂಗ್ರೆಸ್ ಪಕ್ಷ ಯಾವುದೇ ಧರ್ಮ, ಜಾತಿಯನ್ನು ನೋಡದೆ ಸಾಮಾಜಿಕ ನ್ಯಾಯದ ಮೇಲೆ ಕೆಲಸವನ್ನು ಮಾಡುತ್ತಿದೆ, ಇಂದಿನ ಎಲ್ಲಾ ಕಾಂಗ್ರೆಸ್ ನಾಯಕರುಗಳು ನಮ್ಮ ಯುವ ಕಾಂಗ್ರೆಸ್‍ನ ಪ್ರಾಡಕ್ಟ್‍ಗಳಾಗಿವೆ. ಅವರೆಲ್ಲಾ ಯುವ ಕಾಂಗ್ರೆಸ್‍ನಲ್ಲಿ ಕೆಲಸವನ್ನು ಮಾಡುವುದರ ಮೂಲಕ ಇಂದು ನಾಯಕರಾಗಿದ್ದಾರೆ. ಇದೇ ರೀತಿ ಯುವ ಕಾಂಗ್ರೆಸ್‍ನಲ್ಲಿ ಇರುವವರೂ ಸಹಾ ಮುಂದೆ ಕಾಲ ಬಂದಾಗ ಅವರು ಸಹಾ ನಾಯಕರಾಗುತ್ತಾರೆ. ಯುವ ಕಾಂಗ್ರೆಸ್‍ನಲ್ಲಿ ಇರುವವರು ಧೈರ್ಯದಿಂದ ಇರಬೇಕಿದೆ. 2028ರ ಚುನಾವಣೆ ಯಲ್ಲಿ ಕಾಂಗ್ರೆಸ್ ಮತ್ತೇ ಅಧಿಕಾರಕ್ಕೆ ತರಲು ಇಂದಿನಿಂದಲೇ ಶ್ರಮವನ್ನು ಹಾಕಬೇಕಿದೆ. ಮುಂಭರುವ ತಾ.ಪಂ.ಜಿ.ಪಂ. ಚುನಾವಣೆಯಲ್ಲಿ ಯುವ ಕಾಂಗ್ರೆಸ್ ರವರು ಸ್ಪರ್ದೆಯನ್ನು ಮಾಡಬೇಕಿದೆ ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗಬಾರದು ಎಂದು ತಿಳಿಸಿದರು.
ಕರ್ನಾಟಕ ಯುವ ಕಾಂಗ್ರೆಸ್ ಉಸ್ತುವಾರಿಗಳಾದ ನಿಗಮ್ ಬಂಡಾರಿ ಮಾತನಾಡಿ, ಕೇಂದ್ರದಲ್ಲಿ ಅಧಿಕಾರವನ್ನು ಹಿಡಿಯುವ ಸಲುವಾಗಿ ಬಿಜೆಪಿ ವರ್ಷಕ್ಕೆ 2 ಕೋಟಿ ಉದ್ಯೋಗವನ್ನು ನೀಡುವುದಾಗಿ ಹೇಳಿತ್ತು ಆದರೆ ಇದುವರೆವಿಗೂ ಒಂದು ಕೆಲಸವನ್ನು ಸಹಾ ನೀಡಿಲ್ಲ, ಯುವ ಜನತೆ ಉದ್ಯೋಗಕ್ಕಾಗಿ ಅಲೆಯುತ್ತಿದ್ದಾರೆ. ಇದರ ಬಗ್ಗೆ ಮತದಾರರಿಗೆ ತಿಳಿಸುವಂತ ಕಾರ್ಯವನ್ನು ನಮ ಯುವ ಕಾಂಗ್ರೆಸ್ ಪದಾಧಿಕಾರಿಗಳು ಮಾಡಬೇಕಿದೆ. ರಾಜ್ಯ ಸರ್ಕಾರ ಪಂಚ ಗ್ಯಾರೆಂಟಿಗಳನ್ನು ನೀಡುವುದರ ಮೂಲಕ ಜನರಿಗೆ ಆಸರೆಯಾಗಿದೆ. ಇದರಿಂದ ಹಲವಾರು ಬಡ ಕುಟುಂಬಗಳು ಜೀವನವನ್ನು ನಡೆಸುತ್ತಿವೆ ಎಂದು ಕರೆ ನೀಡಿದರು.
ಜಿಲ್ಲಾ ಯುವ ಕಾಂಗ್ರೆಸ್‍ನ ಜಿಲ್ಲಾಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಕಾಂಗ್ರೆಸ್ ಪಕ್ಷಕ್ಕೆ ತನ್ನದೆ ಆದ ಕೊಡುಗೆಯನ್ನು ನೀಡಿದೆ ಇಲ್ಲಿಂದ ಮಾಜಿ ಮುಖ್ಯಮಂತ್ರಿ ರಾಜ್ಯ ಹಾಗೂ ರಾಷ್ಟ್ರ ಮಟ್ದ ನಾಯಕರನ್ನು ನೀಡಿದೆ, ಹಲವಾರು ನಾಯಕರನ್ನು ಹುಟ್ಟು ಹಾಕಿದೆ, 2028ರ ಚುನಾವಣೆಯಲ್ಲಿ ಜಿಲ್ಲೆಯ ಆರು ಕ್ಷೇತ್ರದಲ್ಲಿಯೂ ಸಹಾ ಕಾಂಗ್ರೆಸ್ ಪಕ್ಷದ ಗೆಲುವಿಗೆ ನೆರವಾಗಲಿದೆ. ನಮ್ಮ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ವಿಧಾನ ಸೌಧದಲ್ಲಿ ಹೋಗಿ ಬರಲು ಅವಕಾಶವನ್ನು ಕಲ್ಪಿಸಬೇಕಿದೆ. ಇದ್ದಲ್ಲದೆ ನಿಗಮ-ಮಂಡಳಿಗಳಿಗೆ ನೇಮಕ ಮಾಡುವಾಗ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪರಿಗಣಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಉಮಾಪತಿ, ಡಿಸಿಸಿ ಅಧ್ಯಕ್ಷರಾದ ತಾಜ್‍ಪೀರ್, ಗ್ಯಾರೆಂಟಿ ಪ್ರಾಧಿಕಾರ ಅಧ್ಯಕ್ಷರಾಧ ಶಿವಣ್ಣ ಉಪಾಧ್ಯಕ್ಷರಾದ ಮೈಲಾರಪ್ಪ, ಓಬಿಸಿ ಅಧ್ಯಕ್ಷ ಎನ್.ಡಿ.ಕುಮಾರ್, ನಜ್ಮಾ, ಬಾಹುಬಲಿ, ಸಂದೀಪ್, ಶ್ರೀಧರ್, ದೀಪಕ್, ದಾದಾಪೀರ್, ವೈಶಾಕ್ ಯಾದವ್, ಕುಮಾರ್, ಸಂದೀಪ್,ಆದರ್ಶ, ಅಭಿಲಾಷ್, ಗೀರೀಶ್, ಧನಂಜಯ, ವಿರೇಶ್ ಪವನ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಇದ್ಕಕೂ ಮುನ್ನಾ ಚಿತ್ರದುರ್ಗ ನಗರದ ಚಳ್ಳಕೆರೆ ಗೇಟ್‍ನಲ್ಲಿ ದ್ವಿಚಕ್ರ ವಾಹನಗಳ ಮೂಲಕ ಸ್ವಾಗತಿಸಿ, ನಂತರ ಮದಕರಿನಾಯಕ ಪ್ರತಿಮೆಗೆ ಪುಷ್ಪಾರ್ಚನೆ, ನಂತರ ಡಾ.ಬಿ.ಆರ್.ಅಂಬೇಡ್ಕರ್, ಓನಕೆ ಓಬವ್ವ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.