IPL 2023: ಒಂದೆಜ್ಜೆ ಮುಂದಿಟ್ಟರೆ ವಿಶ್ವ ದಾಖಲೆ; ಬ್ರಾವೋ ರೆಕಾರ್ಡ್​ ಸರಿಗಟ್ಟಿದ ಯುಜ್ವೇಂದ್ರ ಚಹಲ್!

ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೊನೆಯ ಎಸೆತದಲ್ಲಿ ಸೊಲನುಭವಿಸಿತ್ತಾದರೂ ತಂಡದ ಸ್ಟಾರ್ ಸ್ಪಿನ್ನರ್, ಸ್ಪಿನ್ ಮಾಂತ್ರಿಕ ಯುಜ್ವೇಂದ್ರ ಚಹಾಲ್ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.ಹೈದರಾಬಾದ್ ವಿರುದ್ಧದ ಈ ಪಂದ್ಯದಲ್ಲಿ ಪ್ರಮುಖ 4 ವಿಕೆಟ್ ಉರುಳಿಸಿದ ಚಹಲ್ ವಿಶ್ವದ ಶ್ರೀಮಂತ ಟಿ20 ಲೀಗ್‌ನಲ್ಲಿ ಡ್ವೇನ್ ಬ್ರಾವೋ ಅವರ ಐತಿಹಾಸಿಕ ಸಾಧನೆಯನ್ನು ಸರಿಗಟ್ಟಿದ್ದಾರೆ.ಚಹಲ್ ಐಪಿಎಲ್ ಇತಿಹಾಸದಲ್ಲಿ ಜಂಟಿಯಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. ಇದುವರೆಗೆ ಐಪಿಎಲ್​​ನಲ್ಲಿ 142 ಪಂದ್ಯಗಳನ್ನಾಡಿರುವ ಚಹಲ್ 183 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ ಮಾಜಿ ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಡ್ವೇನ್ ಬ್ರಾವೋ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬ್ರಾವೋ ಕೂಡ ಐಪಿಎಲ್​​ನಲ್ಲಿ 183 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇನ್ನು ಐಪಿಎಲ್​​ನಲ್ಲಿ ಅತಿ ಹೆಚ್ಚು ವಿಕೆಟ್ ಉರುಳಿಸಿರುವ ಟಾಪ್ 5 ಬೌಲರ್​ಗಳನ್ನು ನೋಡುವುದಾದರೆ..ಸದ್ಯ ಮುಂಬೈ ಪರ ಆಡುತ್ತಿರುವ ಪಿಯೂಷ್ ಚಾವ್ಲಾ 175 ಪಂದ್ಯಗಳಿಂದ 174 ವಿಕೆಟ್ ಉರುಳಿಸಿ 3ನೇ ಸ್ಥಾನದಲ್ಲಿದ್ದಾರೆ.ಟೀಂ ಇಂಡಿಯಾದ ಮಾಜಿ ಅನುಭವಿ ಸ್ಪಿನ್ನರ್ ಅಮಿತ್ ಮಿತ್ರಾ ಕೂಡ ಮತ್ತೆ ಐಪಿಎಲ್​ಗೆ ಎಂಟ್ರಿಕೊಟ್ಟಿದ್ದು, ಸದ್ಯ 160 ಪಂದ್ಯಗಳಿಂದ 172 ವಿಕೆಟ್ ಉರುಳಿಸಿದ್ದಾರೆ.ರಾಜಸ್ಥಾನ್ ರಾಯಲ್ಸ್ ತಂಡದ ಮತ್ತೊಬ್ಬ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 195 ಪಂದ್ಯಗಳಿಂದ 171 ವಿಕೆಟ್ ಪಡೆದಿದ್ದಾರೆ.

source https://tv9kannada.com/photo-gallery/cricket-photos/ipl-2023-yuzvendra-chahal-scripts-history-equals-dwayne-bravos-massive-feat-psr-573092.html

Leave a Reply

Your email address will not be published. Required fields are marked *