ಪಠಾಣ್ ಗೆಲುವಿನ ಬೆನ್ನಲ್ಲೇ ಶಾರುಖ್ ಖಾನ್ ಗೆ ಸಿನಿಮಾ ಮಾಡುವುದಕ್ಕೆ ಮುಂದಾಯ್ತಾ ಹೊಂಬಾಳೆ..?

ಸತತ ಸೋಲುಗಳನ್ನೇ ನೋಡಿದ್ದ ಬಾಲಿವುಡ್ ಮಂದಿಗೆ ಮರು ಜೀವ ನೀಡಿದ್ದು, ಪಠಾಣ್ ಸಿನಿಮಾ. ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ಸಿನಿಮಾ ಸದ್ಯ ನಿರೀಕ್ಷೆಗೂ ಮೀರಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದೆ. ಈ ಬೆನ್ನಲ್ಲೇ ಸ್ಯಾಂಡಲ್ವುಡ್ ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಶಾರುಖ್ ಖಾನ್ ಗೆ ಹೊಂಬಾಳೆ ಬ್ಯಾನರ್ ಸಿನಿಮಾ ಮಾಡಲಿದೆ ಎಂಬ ಮಾತು ಕೇಳಿ ಬಂದಿದೆ.

ಹೊಂಬಾಳೆ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತೆ ಎಂದರೆ ಅದು ಕಣ್ಣಿಗೆ ಹಬ್ಬವೇ ಸರಿ. ಸಿನಿಮಾ ಮನಸ್ಸಿನಲ್ಲಿ ಉಳಿಯುವುದು ಪಕ್ಕ. ಕನ್ನಡ ಇಂಡಸ್ಟ್ರಿ ಮಾತ್ರವಲ್ಲ ಹೊಂಬಾಳೆ ಅಂತ ಸುತ್ತ ಮುತ್ತ ಇರುವ ಇಂಡಸ್ಟ್ರಿಯವರು ತಿರುಗಿ ನೋಡುವಂತ ಹೆಸರು ಮಾಡಿದೆ. ಇದೀಗ ಶಾರುಕ್ ಖಾನ್ ಗೆ ಸಿನಿಮಾ ಮಾಡಲು ಹೊರಟಿದೆ ಎಂಬ ವಿಚಾರ ಸದ್ದು ಮಾಡುತ್ತಿದ್ದಂತೆ ಅದಕ್ಕೆ ಹೊಂಬಾಳೆಯಿಂದಾನೇ ಉತ್ತರ ಸಿಕ್ಕಿದೆ.

ಈ ಬಗ್ಗೆ ಮಾತನಾಡಿರುವ ವಿಜಯ್ ಕಿರಗಂದೂರು, “ಕೆಲವು ತಿಂಗಳಿನಿಂದ ಶಾರುಖ್ ಖಾನ್ ಗೆ ಸಿನಿಮಾ ಮಾಡುತ್ತೇವೆ ಎಂಬ ವದಂತಿ ಹಬ್ಬಿದೆ. ಸದ್ಯಕ್ಕೆ ಅಂತಹ ಯಾವುದೇ ಯೋಜನೆ ಇಲ್ಲ. ನಾವೂ ಶಾರುಖ್ ಖಾನ್ ಅಥವಾ ಅವರ ತಂಡದೊಂದಿಗೆ ಮಾತನಾಡಿಲ್ಲ. ಒಳ್ಳೆಯ ಕಥೆಯಿಲ್ಲದೆ ಹಿಂದಿ ಸಿನಿಮಾ ಮಾಡುವ ಯೋಜನೆಯಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

The post ಪಠಾಣ್ ಗೆಲುವಿನ ಬೆನ್ನಲ್ಲೇ ಶಾರುಖ್ ಖಾನ್ ಗೆ ಸಿನಿಮಾ ಮಾಡುವುದಕ್ಕೆ ಮುಂದಾಯ್ತಾ ಹೊಂಬಾಳೆ..? first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/PypKBg2
via IFTTT

Leave a Reply

Your email address will not be published. Required fields are marked *