ಪ್ರಧಾನಿ ರೇಸ್ ನಲ್ಲಿ: ರಿಷಿ ಸುನಾಕ್ ಗೆ ಹಿನ್ನಡೆ.

ಲಂಡನ್: ಬೋರಿಸ್ ಜಾನ್ಸನ್ ತೊರೆದು ಬ್ರಿಟನ್ ಪ್ರಧಾನಿ ಸ್ಥಾನ ತುಂಬ ರೇಸ್ನಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಹಾಗೂ ಮಾಜಿ ವಿತ್ತ ಸಚಿವ ರಿಷಿ ಸುನಾಕ್ ಅವರಿಗೆ ಹಿನ್ನಡೆ ಉಂಟಾಗಿದೆ. ಅವರ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಪ್ ಟ್ರುಸ್ ಅವರು ಕಳೆದ ಆರು ವಾರಗಳಿಂದ ನಡೆದ ಪ್ರಚಾರ ಸಭೆಗಳು, ಸಂವಾದದಲ್ಲಿ ಜನರು ಹಾಗೂ ಪಕ್ಷದ ಸಂಸದರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಎಂದು ಯೂಗವ್ ಡಾಟ್ ಪೋಲ್ ಸಮೀಕ್ಷೆಯಿಂದ ತಿಳಿದು ಬಂದಿದೆ.
ರಿಷಿ ಹಾಗೂ ಟ್ರುಸ್ ನಡುವೆ ಯಾರು ಗೆದ್ದಿದ್ದಾರೆ ಎಂಬ ಕುರಿತು ಸೆಪ್ಟೆಂಬರ್ 5, ಸೋಮವಾರದಂದು ಅಧಿಕೃತ ಘೋಷಣೆ ಹೊರ ಬೀಳಲಿದೆ. ಅದಕ್ಕೂ ಮುನ್ನ ಸಮೀಕ್ಷೆ ಪ್ರಕಾರ ಜುಲೈ 20-21ರ ನಡುವಿನ ಮೊದಲ ಸುತ್ತಿನ ಪ್ರಚಾರದಲ್ಲೇ ಟ್ರುಸ್ ಅವರು ರಿಷಿಗಿಂತ ಶೇ 62 ರಷ್ಟು ಮುನ್ನಡೆ ಸಾಧಿಸಿದ್ದರು.

Leave a Reply

Your email address will not be published. Required fields are marked *