ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ: ಬಿಹಾರದ ಪಾಟಲಿಪುತ್ರ ಕ್ರೀಡಾ ಸಂಕೀರ್ಣದಲ್ಲಿ ಮುಂಬರುವ ನವೆಂಬರ್ 1 ರಿಂದ 4ರವರೆಗೆ ನಡೆಯಲಿರುವ 52ನೇ ಜೂನಿಯರ್ ಬಾಲಕರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸುವ ಚಿತ್ರದುರ್ಗ ಜಿಲ್ಲೆಯ ತಂಡದ ಆಯ್ಕೆ ಪ್ರಕ್ರಿಯೆಯು ಅಕ್ಟೋಬರ್ 12ರಂದು ನಡೆಯಲಿದೆ ಎಂದು ಚಿತ್ರದುರ್ಗ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಪಿ.ಸಿ. ಮುರುಗೇಶ್ ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಯ ವಿವರಗಳು:
- ದಿನಾಂಕ: ಅಕ್ಟೋಬರ್ 12, 2026
- ಸಮಯ: ಮಧ್ಯಾಹ್ನ 3:00 ಗಂಟೆಗೆ
- ಸ್ಥಳ: ಹಳೇ ಮಾಧ್ಯಮಿಕ ಶಾಲಾ ಆವರಣ, ಚಿತ್ರದುರ್ಗ
ಆಟಗಾರರಿಗೆ ಇರಬೇಕಾದ ಅರ್ಹತೆಗಳು:
- ವಯೋಮಿತಿ: ಆಟಗಾರರು ನವೆಂಬರ್ 4, 2006 ರ ನಂತರ ಜನಿಸಿರಬೇಕು ಮತ್ತು 20 ವರ್ಷದ ಒಳಗಿನವರಾಗಿರಬೇಕು.
- ದೇಹದ ತೂಕ: ಆಟಗಾರರ ತೂಕವು 75 ಕೆ.ಜಿ ಯೊಳಗೆ ಇರಬೇಕು.
- ವಾಸಸ್ಥಳ: ಆಟಗಾರರು ಕಡ್ಡಾಯವಾಗಿ ಚಿತ್ರದುರ್ಗ ಜಿಲ್ಲೆಯವರಾಗಿರಬೇಕು.
ತರಬೇಕಾದ ದಾಖಲೆಗಳು:
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಟಗಾರರು ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಆಟಗಾರರ ಕ್ಲಬ್‍ನ ಲೆಟರ್‌ಹೆಡ್ ಹಾಗೂ 2 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಕಡ್ಡಾಯವಾಗಿ ಜೊತೆಯಲ್ಲಿ ತರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಘಟಕರಾದ ಪಿ.ಸಿ. ಮುರುಗೇಶ್ (ಮೊಬೈಲ್: 9482013306) ಅಥವಾ ದಾದಾಪೀರ್ (ಮೊಬೈಲ್: 9480778282) ಅವರನ್ನು ಸಂಪರ್ಕಿಸಬಹುದಾಗಿದೆ.