ಇಂಟರ್ನೆಟ್ ವೇಗ ಹೆಚ್ಚಿಸಲು ಮೋದಿ ಸರ್ಕಾರ 5Gಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ದೇಶದ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5G ಲಭ್ಯವಾಗುತ್ತಿದೆ. ಈ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ 5G ನೆಟ್ವರ್ಕ್ ಹೊಂದಿದ ಪ್ರದೇಶವಾಗಿದೆ.

ಈಗಿನ ಕಾಲಕ್ಕೆ ತಕ್ಕಂತೆ ಭಾರತವನ್ನು ‘ಡಿಜಿಟಲ್ ಇಂಡಿಯಾ’ (Digital India) ಆಗಿ ಅಭಿವೃದ್ಧಿಪಡಿಸುವುದಾಗಿ ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ (Narendra Modi) ಘೋಷಿಸಿದ್ದರು. ಅದರಂತೆ ಭಾರತ ಇಂದು ಸಂಪೂರ್ಣವಾಗಿ ‘ಡಿಜಿಟಲ್ ಇಂಡಿಯಾ’ ಆಗುತ್ತಿದೆ. ಡಿಜಿಟಲೀಕರಣದಿಂದ ಹಿಡಿದು ಹಣಕಾಸು ವಹಿವಾಟಿನವರೆಗೆ ವಿವಿಧ ಕ್ಷೇತ್ರಗಳಲ್ಲಿ ಆನ್ಲೈನ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇಂಟರ್ನೆಟ್ ವೇಗ ಹೆಚ್ಚಿಸಲು ಮೋದಿ ಸರ್ಕಾರ 5Gಗೆ ವಿಶೇಷ ಒತ್ತು ನೀಡಿದೆ. ಈಗಾಗಲೇ ದೇಶದ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಅಧಿಕ ಕಡೆ 5G ನೆಟ್ವರ್ಕ್ (5G Network) ಲಭ್ಯವಾಗುತ್ತಿದೆ. ಈ ಮೂಲಕ ಭಾರತವು ವಿಶ್ವದ ಎರಡನೇ ಅತಿದೊಡ್ಡ 5G ನೆಟ್ವರ್ಕ್ ಹೊಂದಿದ ಪ್ರದೇಶವಾಗಿದೆ.
ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ”5 ತಿಂಗಳಲ್ಲಿ 1 ಲಕ್ಷ 5 ಜಿ ನೆಟ್ವರ್ಕ್ ಅನ್ನು ರಚಿಸಲಾಗಿದೆ, 8 ತಿಂಗಳಲ್ಲಿ 2 ಲಕ್ಷ ನೆಟ್ವರ್ಕ್ ಮತ್ತು 10 ತಿಂಗಳಲ್ಲಿ 3 ಲಕ್ಷ ನೆಟ್ವರ್ಕ್ರಚಿಸಲಾಗಿದೆ ಎಂದು ಹೇಳಿದ್ದಾರೆ. ಪ್ರಸ್ತುತ 714 ಜಿಲ್ಲೆಗಳಲ್ಲಿ 3 ಲಕ್ಷಕ್ಕೂ ಹೆಚ್ಚು 5G ಸೈಟ್ಗಳನ್ನು ಸ್ಥಾಪಿಸಲಾಗಿದೆ,” ಎಂದು ಅಶ್ವಿನಿ ವೈಷ್ಣವ್ ಉಲ್ಲೇಖಿಸಿದ್ದಾರೆ.