ಚಿತ್ರದುರ್ಗ| ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶ್ರೀ ಪಾರ್ಶ್ವನಾಥ  ವಿದ್ಯಾಸಂಸ್ಥೆಗೆ ಶೇ. 98.11 ಸಾಧನೆ.

ಚಿತ್ರದುರ್ಗ, ಏ. 24:

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಶ್ರೀ ಪಾರ್ಶ್ವನಾಥ  ವಿದ್ಯಾಸಂಸ್ಥೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 98.11ರಷ್ಟು ಅತ್ಯುತ್ತಮ ಫಲಿತಾಂಶ ಸಾಧಿಸಿದೆ.

ಶಾಲೆಯ ವಿದ್ಯಾರ್ಥಿಗಳಾದ ಆರ್. ತಸ್ಮಿಯಾ ನಸೀಬ್ ಶೇ. 96.8 ಅಂಕ, ಮಲಿ ಮನೀಷಾ ಕುಮಾರಿ ಶೇ. 96.16 ಅಂಕ ಹಾಗೂ ಸೈಯದ್ ಅಮನ್ ಪಾಷ ಶೇ. 95.20 ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಇವರ ಸಾಧನೆ ವಿದ್ಯಾರ್ಥಿಗಳ ಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಸಹಕಾರದ ಪ್ರತಿಫಲವಾಗಿದೆ.

ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸಂತೋಷ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶಗಳತ್ತ ಹೆಜ್ಜೆ ಹಾಕಲು ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದ್ದಾರೆ.

Leave a Reply

Your email address will not be published. Required fields are marked *