IPL 2023: ಐಪಿಎಲ್ 5 ತಂಡಗಳ ಹೊಸ ಜೆರ್ಸಿ ಅನಾವರಣ

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಗಾಗಿ 5 ತಂಡಗಳು ತಮ್ಮ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದೆ. ಎಲ್ಲಾ ತಂಡಗಳು ಈ ಬಾರಿ ಕೂಡ ತಮ್ಮ ಟ್ರೇಡ್ ಮಾರ್ಕ್​ ಬಣ್ಣಗಳನ್ನು ಉಳಿಸಿಕೊಂಡಿದ್ದು, ಇದಾಗ್ಯೂ ಜೆರ್ಸಿ ವಿನ್ಯಾಸಗಳಲ್ಲಿ ಕೆಲ ಬದಲಾವಣೆಗಳನ್ನು ಮಾಡಿದೆ.ಮುಂಬೈ ಇಂಡಿಯನ್ಸ್ ತನ್ನ ಹೊಸ ಬ್ಲೂ ಜೆರ್ಸಿಯ ಮೇಲ್ಮೈ ವಿನ್ಯಾಸದೊಳಗೆ, ಮುಂಬೈ ನಗರ, ಇತಿಹಾಸ-ಪರಂಪರೆ, ಟ್ಯಾಕ್ಸಿ, ಗೇಟ್ ವೇ ಆಫ್ ಇಂಡಿಯಾದ ಚಿತ್ರಣಗಳನ್ನು ಬಳಸಿರುವುದು ವಿಶೇಷ.ಕಳೆದ ಸೀಸನ್​ನಲ್ಲಿ ಸಂಪೂರ್ಣ ಆರೆಂಜ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿದಿದ್ದ ಎಸ್​ಆರ್​ಹೆಚ್ ತಂಡವು ಈ ಸಲ, ಆರೆಂಜ್ ಹಾಗೂ ಬ್ಲ್ಯಾಕ್​ ಬಣ್ಣಗಳಲ್ಲಿ ಕಿಟ್​ ಅನ್ನು ರೂಪಿಸಿದೆ. ಇಲ್ಲಿ ತಂಡದ ಜೆರ್ಸಿಯು ಆರೆಂಜ್ ಬಣ್ಣದಲ್ಲಿದ್ದರೆ, ಪ್ಯಾಂಟ್​ಗೆ ಕಪ್ಪು ಬಣ್ಣ ನೀಡಲಾಗಿದೆ. ಹಾಗೆಯೇ ಭುಜದ ಮೇಲೆ ಕಪ್ಪು ಪಟ್ಟಿಗಳನ್ನು ನೀಡಲಾಗಿರುವುದು ವಿಶೇಷ.ಈ ಬಾರಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ತನ್ನ ಜೆರ್ಸಿಯ ಬಣ್ಣವನ್ನೇ ಬದಲಿಸಿದೆ. ಕಳೆದ ಬಾರಿಯಿದ್ದ ಆಕ್ವಾ ಮೆರೈನ್ ಬ್ಲೂ ಜೆರ್ಸಿಯ ಬದಲಿಗೆ ಈ ಬಾರಿ ಕಡು ನೀಲಿ ಬಣ್ಣದ ಸಮವಸ್ತ್ರದಲ್ಲಿ ಲಕ್ನೋ ಕಣಕ್ಕಿಳಿಯಲಿದೆ. ಇನ್ನು ಹೊಸ ಜೆರ್ಸಿಗೆ ಕಡು ನೀಲಿ ಜೊತೆ ಕೆಂಪು ಬಣ್ಣದ ಪಟ್ಟಿಗಳನ್ನು ನೀಡಲಾಗಿರುವುದು ವಿಶೇಷ.ಗುಜರಾತ್ ಟೈಟಾನ್ಸ್ ತಂಡವು ಕಳೆದ ಬಾರಿಯ ಜೆರ್ಸಿಯನ್ನು ಮರುವಿನ್ಯಾಸಗೊಳಿಸಿದೆ. ಇಲ್ಲಿ ತಂಡದ ಲೋಗೋದ ಮೇಲೆ ಚಾಂಪಿಯನ್​ ಪಟ್ಟಕ್ಕೇರಿರುವುದನ್ನು ಪ್ರತಿನಿಧಿಸುವಂತೆ ಸ್ಟಾರ್ ನೀಡಲಾಗಿದೆ. ಹಾಗೆಯೇ ಜೆರ್ಸಿಯ ಕಾಲರ್​ ವಿನ್ಯಾಸ ಬದಲಿಸಲಾಗಿದ್ದು, ಇದರ ಹೊರತಾಗಿ ತಂಡದ ಸಮವಸ್ತ್ರದಲ್ಲಿ ಮಹತ್ವದ ಬದಲಾವಣೆಯನ್ನು ಮಾಡಲಾಗಿಲ್ಲ.ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೂಡ ಬ್ಲೂ-ರೆಡ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಕಳೆದ ಬಾರಿ ಎಡಬದಿಗೆ ನೀಡಲಾಗಿದ್ದ ಶೇಡ್​ ಅನ್ನು ಈ ಬಾರಿ ತೋಳ್ಭಾಗದಲ್ಲಿ ನೀಡಿರುವುದು ವಿಶೇಷ. ಅಲ್ಲದೆ ಮುಂಭಾಗವು ನೀಲಿ ಬಣ್ಣದಲ್ಲಿದ್ದರೆ, ಹಿಂಭಾಗವನ್ನು ಕೆಂಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ.ಸದ್ಯ 5 ತಂಡಗಳು ಮಾತ್ರ ಹೊಸ ಜೆರ್ಸಿಯನ್ನು ಅನಾವರಣಗೊಳಿಸಿದ್ದು. ಇನ್ನು ಐದು ತಂಡಗಳು ತಮ್ಮ ಕಿಟ್​ಗಳನ್ನು ಬಿಡುಗಡೆ ಮಾಡಬೇಕಿದೆ. ಆರ್​ಸಿಬಿ ತಂಡವು ಮಾರ್ಚ್ 25 ಅಥವಾ 26 ರಂದು ತನ್ನ ನೂತನ ಜೆರ್ಸಿಯನ್ನು ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ.

source https://tv9kannada.com/photo-gallery/cricket-photos/ipl-2023-all-teams-new-jersey-ahead-of-ipl-zp-au50-539247.html

Leave a Reply

Your email address will not be published. Required fields are marked *