Health: ಸ್ಥಳೀಯ ಪರಿಹಾರಗಳೊಂದಿಗೆ ಭಾರತದಲ್ಲಿ ಸ್ಟ್ರೋಕ್ ಸವಾಲುಗಳನ್ನು ಪರಿಹರಿಸುವ ನವೀನ ತಂತ್ರಜ್ಞಾನಗಳನ್ನು ಸಂಯೋಜಿಸಲು Medtronicನ ಬದ್ಧತೆಯನ್ನು ಪಾಲುದಾರಿಕೆಯು ಒತ್ತಿಹೇಳುತ್ತದೆ. Qure ನ ಸಮಗ್ರ ಸೊಲ್ಯೂಷನ್‌ಗಳ ಸೆಟ್, qER ಮತ್ತು Qure ಅಪ್ಲಿಕೇಶನ್, ರೋಗಿಗಳಿಗೆ ಸ್ಟ್ರೋಕ್ ಕೇರ್ ಮಾರ್ಗವನ್ನು ಸುಗಮಗೊಳಿಸುವಲ್ಲಿ ವೈದ್ಯರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.

- ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI)
- AI ಬಳಸಿಕೊಂಡು ಸುಧಾರಿತ ಸ್ಟ್ರೋಕ್ ನಿರ್ವಹಣೆ
Medtronic ಪಿಎಲ್‌ಸಿ (NYSE:MDT) ಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಇಂಡಿಯಾ Medtronic ಪ್ರೈವೇಟ್ ಲಿಮಿಟೆಡ್ ಇಂದು ಭಾರತದಲ್ಲಿ ಸುಧಾರಿತ ಸ್ಟ್ರೋಕ್ ನಿರ್ವಹಣೆಗಾಗಿ ಕೃತಕ ಬುದ್ಧಿಮತ್ತೆಯನ್ನು (AI) ಸಂಯೋಜಿಸಲು Qure.ai ನೊಂದಿಗೆ ಪಾಲುದಾರಿಕೆಯನ್ನು ಪ್ರಕಟಿಸಿದೆ. ಈ ಪಾಲುದಾರಿಕೆಯು ನರವಿಜ್ಞಾನದಲ್ಲಿ Medtronicನ ನಾಯಕತ್ವ ಮತ್ತು Qure ಇದರ AI ಸಕ್ರಿಯಗೊಳಿಸಿದ ನಾವೀನ್ಯತೆಗಳೊಂದಿಗೆ ಸಂಯೋಜನೆ ಹೊಂದಿದೆ. ಸಹಯೋಗವು ಸಮಗ್ರ ಸ್ಟ್ರೋಕ್ ಕೇಂದ್ರಗಳು ಮತ್ತು ಪ್ರಾಥಮಿಕ ಸ್ಟ್ರೋಕ್ ಕೇಂದ್ರಗಳಿಗೆ AI ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ತಂತ್ರಜ್ಞಾನದ ಮೂಲಕ ಸಂಪರ್ಕಗೊಂಡಿರುವ ಹಬ್ ಮತ್ತು ಸ್ಪೋಕ್ ನೆಟ್ವರ್ಕ್ ಅನ್ನು ಸ್ಥಾಪಿಸಲಿದೆ. ಈ ನೆಟ್‌ವರ್ಕ್ ಸ್ಟ್ರೋಕ್ ರೋಗಿಗಳನ್ನು ವೇಗವಾಗಿ ಗುರುತಿಸಲು, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಟ್ರೀಜಿಂಗ್ ಮಾಡಲು ಸಹಾಯ ಮಾಡುತ್ತದೆ, ಹೀಗಾಗಿ ರೋಗಿಗಳ ಉತ್ತಮ ಫಲಿತಾಂಶಗಳನ್ನು ಸುಗಮಗೊಳಿಸುತ್ತದೆ.
ಪಾರ್ಶ್ವವಾಯು ವೈದ್ಯಕೀಯ ತುರ್ತುಸ್ಥಿತಿಯಾಗಿದ್ದು, ಈ ಸಮಯದಲ್ಲಿ ಮೆದುಳಿಗೆ ರಕ್ತದ ಹರಿವು ನಿರ್ಬಂಧಿಸಲ್ಪಡುತ್ತದೆ. ಅನೇಕ ಸಂದರ್ಭಗಳಲ್ಲಿ, ರೋಗಲಕ್ಷಣದ ಅರಿವು ಮತ್ತು ರಚನಾತ್ಮಕ ರೋಗಿಯ ಮಾರ್ಗಗಳ ಕೊರತೆಯಿಂದಾಗಿ ಪಾರ್ಶ್ವವಾಯು ರೋಗಿಗಳು ಸಮಯಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕೆಲವು ಸಂದರ್ಭಗಳಲ್ಲಿ, CT ಸ್ಕ್ಯಾನ್‌ಗಳನ್ನು ಸರಿಯಾಗಿ ನಿರ್ಣಯ ಮಾಡಲು, ನಿರ್ದಿಷ್ಟವಾದ ವೈದ್ಯರ ತರಬೇತಿಯ ಕೊರತೆಯು ರೋಗಿಗಳನ್ನು ಪಾರ್ಶ್ವವಾಯು ಸಿದ್ಧ ಕೇಂದ್ರಕ್ಕೆ ಕಳುಹಿಸುವುದನ್ನು ವಿಳಂಬಗೊಳಿಸುತ್ತದೆ ಮತ್ತು ಪಾರ್ಶ್ವವಾಯು ರೋಗಿಗಳ ಮರಣ ಮತ್ತು ಅನಾರೋಗ್ಯವನ್ನು ಹೆಚ್ಚಿಸುತ್ತದೆ.
Qure ನ ಸಮಗ್ರ ಪರಿಹಾರಗಳ ಸೆಟ್, qER ಮತ್ತು Qure ಅಪ್ಲಿಕೇಶನ್ ಇದು ರೋಗಿಗಳಿಗೆ ಪಾರ್ಶ್ವವಾಯು ಆರೈಕೆ ಮಾರ್ಗವನ್ನು ಸುಗಮಗೊಳಿಸುವಲ್ಲಿ ವೈದ್ಯರಿಗೆ ಸಹಾಯ ಮಾಡಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. qER ಇತರ ಪ್ರಮುಖ ನಿಯತಾಂಕಗಳೊಂದಿಗೆ ಹೆಡ್ CT ಸ್ಕ್ಯಾನ್‌ಗಳ ತ್ವರಿತ ಓದುವಿಕೆ ಮತ್ತು ವ್ಯಾಖ್ಯಾನವನ್ನು ಒದಗಿಸುತ್ತದೆ. ಎಲ್ಲಾ ಮಾಹಿತಿಯನ್ನು Qure ಅಪ್ಲಿಕೇಶನ್‌ನಲ್ಲಿ ದಾಖಲಿಸಲಾಗುತ್ತದೆ, ಇದು ಸಂವಹನಕ್ಕಾಗಿ ವೇದಿಕೆಯಾಗಿದೆ ಮತ್ತು ವಿವಿಧ ಆಸ್ಪತ್ರೆಗಳಿಂದ ವಿವಿಧ ಕ್ಷೇತ್ರೀಯ ತಂಡಗಳನ್ನು ಒಟ್ಟುಗೂಡಿಸುತ್ತದೆ. ಸಾರ್ವಜನಿಕ ದಾಖಲೆಗಳ ಪ್ರಕಾರ1 qER ಅನ್ನು ಬಳಸಿಕೊಂಡು ಹೆಡ್ CT ಅನ್ನು ಓದುವ ಮತ್ತು ರೋಗನಿರ್ಣಯ ಮಾಡುವ ಸಮಯವು ~ 65 ನಿಮಿಷಗಳಿಂದ ~ 2 ನಿಮಿಷಗಳವರೆಗೆ ಕಡಿಮೆಯಾಗಿದೆ.
“Medtronic, ಭವಿಷ್ಯವನ್ನು ದೃಷ್ಟಿಯಲ್ಲಿರಿಸಿಕೊಂಡು ಕೆಲಸ ಮಾಡುತ್ತಿದೆ, ಅಲ್ಲಿ ಸ್ಟ್ರೋಕ್ ಅನ್ನು ತ್ವರಿತವಾಗಿ ರೋಗನಿರ್ಣಯ ಮಾಡಬಹುದು ಮತ್ತು ರೋಗಿಯ ಜೀವವನ್ನು ಸಮರ್ಥವಾಗಿ ಉಳಿಸಲು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು. AI ಅನ್ನು ಪರಿಚಯಿಸುವುದರಿಂದ ಇದು ನೈಜ ಸಮಯದಲ್ಲಿ ಆರೋಗ್ಯ ತಂತ್ರಜ್ಞಾನವನ್ನು ವೈಯಕ್ತೀಕರಿಸುತ್ತದೆ. ಕ್ಷಿಪ್ರ ನಿರ್ಧಾರ ಕೈಗೊಳ್ಳುವ ಮೂಲಕ, ಎರಡು ಆಸ್ಪತ್ರೆಗಳ ನಡುವೆ ಡೇಟಾ ಹಂಚಿಕೆಯನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಮತ್ತು ದಕ್ಷತೆಯನ್ನು ಸುಧಾರಿಸುವ ಮೂಲಕ ಪಾರ್ಶ್ವವಾಯು ರೋಗನಿರ್ಣಯ ಮತ್ತು ಚಿಕಿತ್ಸೆಯಲ್ಲಿ ಶಸ್ತ್ರಚಿಕಿತ್ಸಕರನ್ನು ಬೆಂಬಲಿಸಲು Qure.ai ನೊಂದಿಗೆ ಸಹಕರಿಸಲು ನಾವು ಪುಳಕಿತಗೊಂಡಿದ್ದೇವೆ. ”ಎಂದು Medtronic ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮೈಕೆಲ್ ಬ್ಲಾಕ್‌ವೆಲ್ ಅಭಿಪ್ರಾಯಪಟ್ಟರು.
ಪಾಲುದಾರಿಕೆಯ ಕುರಿತು, Qure.ai ಇದರ ಸಹ-ಸಂಸ್ಥಾಪಕ ಮತ್ತು CEO ಆಗಿರುವ ಪ್ರಶಾಂತ್ ವಾರಿಯರ್ ಅವರು ಪ್ರತಿಕ್ರಿಯಿಸುತ್ತಾ, “ಮೆಡ್ಟ್ರಾನಿಕ್ ಇಂಡಿಯಾದೊಂದಿಗೆ ಕೈಜೋಡಿಸುವ ಮೂಲಕ, ನಾವು ಸ್ಟ್ರೋಕ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಪತ್ತೆಹಚ್ಚಲು ಮತ್ತು ನಿರ್ವಹಿಸಲು Qure.ai ನ AI-ಚಾಲಿತ ನ್ಯೂರೋ-ಕ್ರಿಟಿಕಲ್ ಪರಿಹಾರಗಳ ಸೂಟ್ ಅನ್ನು ಸಂಯೋಜಿಸುತ್ತೇವೆ. ನಮ್ಮ ಅತ್ಯಾಧುನಿಕ ತಂತ್ರಜ್ಞಾನವು ವೈದ್ಯಕೀಯ ಚಿತ್ರಗಳನ್ನು ವಿಶ್ಲೇಷಿಸಲು ಸುಧಾರಿತ ಅಲ್ಗಾರಿದಮ್‌ಗಳನ್ನು ಬಳಸುತ್ತದೆ, ಇದರಿಂದ ಆರೋಗ್ಯ ಪೂರೈಕೆದಾರರು ಸುಧಾರಿತ ರೋಗನಿರ್ಣಯದ ನಿಖರತೆ ಮತ್ತು ವೇಗದೊಂದಿಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ನಮ್ಮ ಸಹಯೋಗವು ಆಸ್ಪತ್ರೆಗಳಲ್ಲಿ ಕಾರ್ಯಾಚರಣೆಯ ದಕ್ಷತೆಯನ್ನು ಹೆಚ್ಚಿಸುತ್ತದೆ, ಹಬ್-ಸ್ಪೋಕ್ ಮಾರ್ಗಗಳನ್ನು ಉತ್ತಮಗೊಳಿಸುತ್ತದೆ. Medtronic ಜೊತೆಗಿನ ಪಾಲುದಾರಿಕೆಯು ರೋಗಿಗಳ ಆರೈಕೆಯನ್ನು ಹೆಚ್ಚಿಸಲು ಮತ್ತು ಎಲ್ಲರಿಗೂ ಸಮಾನವಾದ ಆರೋಗ್ಯವನ್ನು ಒದಗಿಸಲು AI ಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ನಮ್ಮ ಬದ್ಧತೆಯ ಮತ್ತೊಂದು ಪ್ರಮುಖ ಸ್ತಂಭವಾಗಿದೆ.” ಎಂದು ಹೇಳಿದರು.
ಭಾರತದಲ್ಲಿ, ಪ್ರತಿ ವರ್ಷ ಸುಮಾರು 1.8 ಮಿಲಿಯನ್ ರೋಗಿಗಳು ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ. ಸ್ಟ್ರೋಕ್ ಚಿಕಿತ್ಸೆಯಲ್ಲಿ ಸರಿಯಾದ ಸಮಯವು ಅತ್ಯಮೂಲ್ಯವಾಗಿದೆ. ರೋಗಿಗಳಿಗೆ 4.5 ಗಂಟೆಗಳ ಸುವರ್ಣ ಅವಧಿಯೊಳಗೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ, ರೋಗಲಕ್ಷಣಗಳು ಪ್ರಾರಂಭವಾದ 24 ಗಂಟೆಗಳವರೆಗೆ ಚಿಕಿತ್ಸೆ ನೀಡಬಹುದು. AI ಪರಿಕರಗಳನ್ನು ಬಳಸಿಕೊಂಡು ರೋಗನಿರ್ಣಯದಿಂದ ಚಿಕಿತ್ಸೆಯವರೆಗೆ ಈ ರೋಗಿಗಳಿಗೆ ಸಹಾಯ ಒದಗಿಸುವುದು ಸ್ಟ್ರೋಕ್ ಆರೈಕೆಯ ನಿರ್ವಹಣೆಯಲ್ಲಿ ವಿಳಂಬ ಮತ್ತು ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಈ ಕಾಲಘಟ್ಟದಲ್ಲಿ ಪ್ರತಿ ನಿಮಿಷವೂ ಮುಖ್ಯವಾಗಿರಲಿದೆ. ಇದು ಪ್ರಾಥಮಿಕ ಮತ್ತು ಮಾಧ್ಯಮಿಕ ಆರೋಗ್ಯ ಸೌಲಭ್ಯಗಳಲ್ಲಿ, ವಿಶೇಷವಾಗಿ ಹಬ್ ಮತ್ತು ಸ್ಪೋಕ್ ನೆಟ್‌ವರ್ಕ್‌ನಲ್ಲಿ ಪಾರ್ಶ್ವವಾಯು ರೋಗಿಗಳಿಗೆ ಪರಿಣಾಮಕಾರಿ ಉಲ್ಲೇಖ ಮತ್ತು ಚಿಕಿತ್ಸೆಗೆ ಕಾರಣವಾಗುತ್ತದೆ.