IPL 2023 Points Table: ಮುಂಬೈ ವಿರುದ್ಧ ಗೆದ್ದು ಮೇಲೇರಿದ CSK: ಹೀಗಿದೆ ಹೊಸ ಪಾಯಿಂಟ್ಸ್ ಟೇಬಲ್

IPL 2023 Points Table: ಭರ್ಜರಿ ಪೈಪೋಟಿಯೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್​ 16 ಮುಂದುವರೆದಿದೆ. ಈಗಾಗಲೇ ಎಲ್ಲಾ ತಂಡಗಳು 2 ಪಂದ್ಯಗಳನ್ನು ಆಡಿದ್ದು, ಇನ್ನು ರಾಜಸ್ಥಾನ್ ರಾಯಲ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ 3 ಪಂದ್ಯಗಳು ಪೂರ್ಣಗೊಂಡಿದೆ.ಇತ್ತ 6 ತಂಡಗಳ 2 ಪಂದ್ಯಗಳು ಹಾಗೂ 4 ತಂಡಗಳ 3 ಪಂದ್ಯಗಳ ಮುಕ್ತಾಯದೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲೂ ಮಹತ್ವದ ಬದಲಾವಣೆಯಾಗಿದೆ. ಶನಿವಾರ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನೊಂದಿಗೆ ಸಿಎಸ್​ಕೆ ತಂಡವು ಪಾಯಿಂಟ್ಸ್​ ಟೇಬಲ್​ನಲ್ಲಿ ಟಾಪ್-5 ಗೆ ಎಂಟ್ರಿ ಕೊಟ್ಟರೆ, ಮುಂಬೈ ಇಂಡಿಯನ್ಸ್​ 8ನೇ ಸ್ಥಾನಕ್ಕೆ ಕುಸಿದಿದೆ. ಅದರಂತೆ ಶನಿವಾರದ ಅಂತ್ಯಕ್ಕೆ ಐಪಿಎಲ್​ ಪಾಯಿಂಟ್ಸ್​​ ಟೇಬಲ್​ನ ವಿವರ ಈ ಕೆಳಗಿನಂತಿದೆ...1- ರಾಜಸ್ಥಾನ್ ರಾಯಲ್ಸ್: 3 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ ತಂಡವು 2 ಗೆಲುವು ಹಾಗೂ 1 ಸೋಲಿನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಅಗ್ರಸ್ಥಾನ ಅಲಂಕರಿಸಿದೆ. ಆರ್​ಆರ್​ ತಂಡದ ನೆಟ್​ ರನ್​ ರೇಟ್ ನೆಟ್​​ 2.067. 2- ಲಕ್ನೋ ಸೂಪರ್ ಜೈಂಟ್ಸ್​: ಮೂರು ಪಂದ್ಯಗಳಲ್ಲಿ 1 ಸೋಲು ಹಾಗೂ 2 ಗೆಲುವು ದಾಖಲಿಸಿರುವ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವು 1.358 ನೆಟ್​ ರನ್​ ರೇಟ್​ನೊಂದಿಗೆ ದ್ವಿತೀಯ ಸ್ಥಾನ ಅಲಂಕರಿಸಿದೆ.3- ಗುಜರಾತ್ ಟೈಟಾನ್ಸ್: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡವು ಆಡಿರುವ 2 ಪಂದ್ಯಗಳನ್ನು ಗೆದ್ದುಕೊಂಡಿದ್ದು, 0.700 ನೆಟ್​ ರನ್​ ರೇಟ್​ನೊಂದಿಗೆ 3ನೇ ಸ್ಥಾನದಲ್ಲಿದೆ.4- ಚೆನ್ನೈ ಸೂಪರ್ ಕಿಂಗ್ಸ್​: ಮೂರು ಪಂದ್ಯಗಳನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್​ಕೆ ತಂಡವು 1 ಸೋಲು, 2 ಗೆಲುವಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ತಂಡದ ಪ್ರಸ್ತುತ ಪಾಯಿಂಟ್ಸ್ ಟೇಬಲ್​ ನೆಟ್​ ರನ್​ ರೇಟ್​ 0.356.5- ಪಂಜಾಬ್ ಕಿಂಗ್ಸ್​: ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡವು ಆಡಿರುವ 2 ಪಂದ್ಯಗಳಲ್ಲೂ ಜಯ ಸಾಧಿಸಿದ್ದು, 0.333 ನೆಟ್​ ರನ್​ ರೇಟ್ ಪಡೆದು 5ನೇ ಸ್ಥಾನ ಅಲಂಕರಿಸಿದೆ.6- ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ಆಡಿರುವ 2 ಪಂದ್ಯಗಳಲ್ಲಿ 1 ಸೋಲು, 1 ಗೆಲುವು ಕಂಡಿದೆ. ಇದೀಗ 2.056 ನೆಟ್​ ರನ್​ ರೇಟ್ ಹೊಂದಿರುವ ನಿತೀಶ್ ರಾಣಾ ಪಡೆಯು 6ನೇ ಸ್ಥಾನದಲ್ಲಿದೆ.7- ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡುಪ್ಲೆಸಿಸ್ ನೇತೃತ್ವದ ಆರ್​ಸಿಬಿ ತಂಡವು ಮೊದಲ ಪಂದ್ಯದಲ್ಲಿ ಗೆದ್ದರೆ, 2ನೇ ಪಂದ್ಯದಲ್ಲಿ ಸೋತಿತ್ತು. ಸದ್ಯ -1.256 ನೆಟ್​ ರನ್​ ರೇಟ್ ಹೊಂದಿರುವ ಆರ್​ಸಿಬಿ 7ನೇ ಸ್ಥಾನದಲ್ಲಿದೆ.8- ಮುಂಬೈ ಇಂಡಿಯನ್ಸ್: ಆಡಿರುವ 2 ಪಂದ್ಯಗಳಲ್ಲೂ ಸೋತಿರುವ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ -1.394 ನೆಟ್​ ರನ್​ ರೇಟ್​ನೊಂದಿಗೆ 8ನೇ ಸ್ಥಾನದಲ್ಲಿದೆ.9- ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿರುವ 3 ಪಂದ್ಯಗಳಲ್ಲೂ ಸೋಲನುಭವಿಸಿದೆ. ಇದಾಗ್ಯೂ -2.092 ನೆಟ್​ ರನ್​ ರೇಟ್ ಹೊಂದಿರುವ ಕಾರಣ 9ನೇ ಸ್ಥಾನದಲ್ಲಿದೆ.10- ಸನ್​ರೈಸರ್ಸ್ ಹೈದರಾಬಾದ್: ಆಡಿರುವ 2 ಪಂದ್ಯಗಳಲ್ಲೂ ಸೋತಿರುವ ಸನ್​ರೈಸರ್ಸ್ ಹೈದರಾಬಾದ್ ತಂಡವು -2.867 ನೆಟ್​ ರನ್ ರೇಟ್​ನೊಂದಿಗೆ ಪಾಯಿಂಟ್ಸ್​ ಟೇಬಲ್​ನಲ್ಲಿ ಕೊನೆಯ ಸ್ಥಾನದಲ್ಲಿದೆ.ಶನಿವಾರದವರೆಗೆ (ಏ.8) ಒಟ್ಟು 12 ಪಂದ್ಯಗಳು ಮುಗಿದಿದ್ದು, ಈ ಪಂದ್ಯಗಳ ಬಳಿಕ ಅಪ್​ಡೇಟ್ ಆಗಿರುವ ಪಾಯಿಂಟ್ಸ್​ ಟೇಬಲ್ ಅನ್ನು ಇಲ್ಲಿ ನೀಡಲಾಗಿದೆ.

source https://tv9kannada.com/photo-gallery/cricket-photos/ipl-2023-points-table-today-points-table-ipl-2023-kannada-news-zp-au50-552128.html

Leave a Reply

Your email address will not be published. Required fields are marked *