ಬರ ಪರಿಹಾರದ ಅನುದಾನದ ಕುರಿತು ಶ್ವೇತಪತ್ರ ಹೊರಡಿಸಿ: ರಾಜ್ಯ ಸರ್ಕಾರಕ್ಕೆ ಗೋವಿಂದ ಕಾರಜೋಳ ಸವಾಲು.

ಚಿತ್ರದುರ್ಗ ನ. 28

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಸ್ವಾತಂತ್ರ್ಯದ ನಂತರ ಯಾವ ಯಾವ ಸರ್ಕಾರಗಳು ಬರಗಾಲದ ವೇಳೆ ಎಷ್ಟು ಹಣ ನೀಡಿವೆ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ 12 ವರ್ಷಗಳ ಆಡಳಿತದಲ್ಲಿ ಎಷ್ಟು ಹಣ ನೀಡಲಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಸಂಸದರಾದ ಗೋವಿಂದ ಕಾರಜೋಳ ಸವಾಲು ಹಾಕಿದ್ದಾರೆ.

ಹಿರಿಯೂರಿನಲ್ಲಿ ನಡೆದ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು ಹಿಂದಿನ ಸರ್ಕಾರದ ಅವಧಿಯಲ್ಲಿ ಬರ ಬಂದಾಗ ಉದ್ಯೋಗ, ಗೋಶಾಲೆ, ಮೇವು, ಕುಡಿಯುವ ನೀರು ಮತ್ತು ಬರ ಪರಿಹಾರವನ್ನು ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯ ಎರಡು ಪಟ್ಟು ಪ್ರಮಾಣದಲ್ಲಿ ನೀಡಲಾಗಿತ್ತು ಅದರ ಲೆಕ್ಕ ಸರ್ಕಾರದಲ್ಲಿದೆ ಬರ ಅಥವಾ ನೆರೆ ಬಂದಾಗ ರಾಜ್ಯ ಸರ್ಕಾರ ಮುಂಚೆ ಹಣವನ್ನು ನೀಡಿ ಅದರ ವರದಿಯನ್ನು ಕೇಂದ್ರಕ್ಕೆ ಕಳಿಸಿ ಮರುಪಾವತಿ ಪಡೆಯಬೇಕಾಗುತ್ತದೆ; ಕೇಂದ್ರ ಸರ್ಕಾರ ಇಡೀ ದೇಶದ ಸಮಸ್ಯೆಗಳಿಗೆ ಏಕಕಾಲದಲ್ಲಿ ಹಣವನ್ನು ಬಿಡುಗಡೆ ಮಾಡುತ್ತದೆ ಎಂದು ವಿವರಿಸಿದರು.

ದಲಿತರ 52 ಸಾವಿರ ಕೋಟಿ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಆ ಹಣವನ್ನು ನಿಗಮಗಳ ಮೂಲಕ ದಲಿತರ ಶಿಕ್ಷಣ, ಉದ್ಯೋಗ, ಭೂ ಒಡೆತನ ಮತ್ತು ನೀರಾವರಿಗೆ ಬಳಸಬೇಕೇ ಹೊರತು ಖಾತರಿ ಯೋಜನೆಗಳಿಗೆ ಮತ ಪಡೆಯಲು ಬಳಸುವುದು ಅನ್ಯಾಯವಾಗುತ್ತದೆ ಹಿಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅವಧಿಯಲ್ಲಿ ನೀಡಿದ್ದ ಮೀಸಲಾತಿ ಹೆಚ್ಚಳ ಆದೇಶವನ್ನು ನ್ಯಾಯಾಲಯದ ಮೂಲಕ ರದ್ದುಪಡಿಸುವಂತೆ ಮಾಡಿದ ಸರ್ಕಾರದ ಧೋರಣೆಯನ್ನು ಖಂಡಿಸಿ ಒಳ ಮೀಸಲಾತಿ ಹೆಸರಿನಲ್ಲಿಯೂ ದಲಿತರಿಗೆ ಹಾಗೂ 101 ಪರಿಶಿಷ್ಟ ಜಾತಿಗಳಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿದರು.

ಬರ ಪರಿಹಾರವಾಗಿ ಘೋಷಿಸಲಾದ 5,000 ರೂಪಾಯಿ ಇನ್ನೂ ರೈತರಿಗೆ ತಲುಪಿಲ್ಲ ಜೊತೆಗೆ ವಿದ್ಯುತ್, ಹಾಲು ಮತ್ತು ಮೊಸರಿನ ದರ ಹೆಚ್ಚಳವನ್ನೂ ವಿರೋಧಿಸಲಾಯಿತು. ಸ್ವಾತಂತ್ರ್ಯದ ನಂತರ ಯಾವ ಯಾವ ಸರ್ಕಾರಗಳು ಬರಗಾಲದ ವೇಳೆ ಎಷ್ಟು ಹಣ ನೀಡಿವೆ ಮತ್ತು ನರೇಂದ್ರ ಮೋದಿ ನೇತೃತ್ವದ ಸರ್ಕಾರದ 12 ವರ್ಷಗಳ ಆಡಳಿತದಲ್ಲಿ ಎಷ್ಟು ಹಣ ನೀಡಲಾಗಿದೆ ಎಂಬುದರ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಲಾಯಿತು. ನಕಲಿ ಜಾತಿ ಪ್ರಮಾಣಪತ್ರ ಪಡೆದು ಶಾಸಕರಾಗಿರುವ ಕೊತ್ತೂರು ಮಂಜುನಾಥ್ ಅವರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತಿರಸ್ಕಾರ ಮತ್ತು ಖಂಡನೆ ವ್ಯಕ್ತಪಡಿಸಿ ಆದೇಶ ನೀಡಿದೆ ಅವರನ್ನು ಕೂಡಲೇ ಕಾನೂನು ಪ್ರಕಾರ ಬಂಧಿಸಿ ಅನರ್ಹಗೊಳಿಸಬೇಕು ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರೆಂಬ ಕಾರಣಕ್ಕೆ ನೀಡಲಾಗುತ್ತಿರುವ ರಕ್ಷಣೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ, ಈ ವಿಚಾರವಾಗಿ ಖರ್ಗೆ ಮತ್ತು ಪ್ರಿಯಾಂಕಾ ಖರ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಲಾಯಿತು.

ಕ್ಷೇತ್ರ ಪುನರ್ವಿಂಗಡಣೆಯಿಂದ ದಕ್ಷಿಣ ಭಾರತಕ್ಕಾಗಲಿ, ಉತ್ತರ ಭಾರತಕ್ಕಾಗಲಿ ಅಥವಾ ಯಾವುದೇ ರಾಜ್ಯಕ್ಕಾಗಲಿ ಅನ್ಯಾಯವಾಗುವುದಿಲ್ಲ ಈಗಿರುವ ಸದಸ್ಯರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಹೆಚ್ಚಳ ಮಾಡುವುದು ಸಾಮಾನ್ಯ ನಿಯಮವಾಗಿದ್ದು, ಅದು ಎಲ್ಲ ರಾಜ್ಯಗಳಿಗೂ ಅನ್ವಯಿಸುತ್ತದೆ ಉಪಚುನಾವಣೆಗೆ ಕಾರ್ಯಕರ್ತರು ಸಿದ್ಧರಿದ್ದು, ಚುನಾವಣೆ ಘೋಷಣೆಯಾದರೆ ಗೆಲ್ಲುವ ವಿಶ್ವಾಸವಿದೆ. ಅಭ್ಯರ್ಥಿ ಮತ್ತು ಚಿಹ್ನೆಯ ಅಂತಿಮ ನಿರ್ಣಯವನ್ನು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಹಾಗೂ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರು ಚರ್ಚಿಸಿ ಕೈಗೊಳ್ಳಲಿದ್ದು, ಎನ್‍ಡಿಎ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು ಮುಖ್ಯಮಂತ್ರಿ ಅಭ್ಯರ್ಥಿ ಕುರಿತ ಪ್ರಶ್ನೆಗೆ, ಚುನಾವಣೆಯಲ್ಲಿ ಗೆದ್ದು ಬಹುಮತ ಪಡೆದ ಬಳಿಕ ಶಾಸಕರು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತದೆ ಎಂದು ಉತ್ತರಿಸಲಾಯಿತು.

ಚುನಾವಣಾ ಪ್ರಚಾರದ ವೇಳೆ ಪ್ರಿಯಾಂಕಾ ಗಾಂಧಿ ಅವರನ್ನು ಕರೆತಂದು ಅಧಿಕಾರಕ್ಕೆ ಬಂದರೆ 15,000 ರೂಪಾಯಿ ನೀಡುವುದಾಗಿ ಭರವಸೆ ನೀಡಿ, ಮೂರುವರೆ ವರ್ಷ ಕಳೆದರೂ ನೀಡಿಲ್ಲ ಹತ್ತು ದಿನಗಳಿಂದ ಚಳಿ, ಬಿಸಿಲು, ಮಳೆಯಲ್ಲಿ ಫ್ರೀಡಂ ಪಾರ್ಕ್‍ನಲ್ಲಿ ಮಕ್ಕಳೊಂದಿಗೆ ಉಪವಾಸ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೂಡಲೇ 15,000 ರೂಪಾಯಿ ನೀಡಬೇಕೆಂದು ಒತ್ತಾಯಿಸಿ ಹಿಂದಿನ ಸರ್ಕಾರದ ಅವಧಿಯಲ್ಲಿ ಬರ ಬಂದಾಗ ಉದ್ಯೋಗ, ಗೋಶಾಲೆ, ಮೇವು, ಕುಡಿಯುವ ನೀರು ಮತ್ತು ಬರ ಪರಿಹಾರವನ್ನು ರಾಷ್ಟ್ರೀಯ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿಯ ಮಾರ್ಗಸೂಚಿಯ ಎರಡು ಪಟ್ಟು ಪ್ರಮಾಣದಲ್ಲಿ ನೀಡಲಾಗಿತ್ತು ಹಾಗೂ ಅದರ ಲೆಕ್ಕ ಸರ್ಕಾರದಲ್ಲಿದೆ ಎಂದು ತಿಳಿಸಲಾಯಿತು

ನಮ್ಮ ಸಮಗ್ರ ಸುದ್ದಿಗಳಿಗಾಗಿ ಕೆಳಗಿನ Social Media ಪುಟಗಳಿಗೆ Follow / Subscribe ಮಾಡಿ.

🟢 WhatsApp Group

Join WhatsApp Group

🔵 Facebook Page

Follow Facebook Page

⚫ Twitter / X

Follow on X (Twitter)

🟣 Threads

Follow on Threads

🟠 Instagram

Follow on Instagram

🔵 Telegram

Join Telegram Channel

🟢 WhatsApp Channel

Follow WhatsApp Channel

📰 ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

📢 ಸುದ್ದಿ • ಮಾಹಿತಿ • ಶಿಕ್ಷಣ • ಉದ್ಯೋಗ • ಕರ್ನಾಟಕ • ದೇಶ • ಜಗತ್ತು

Leave a Reply

Your email address will not be published. Required fields are marked *