Sania Mirza: ಬಿಗ್ ಬಾಸ್ ವಿನ್ನರ್ ಎಂಸಿ ಸ್ಟಾನ್​ಗೆ ಲಕ್ಷ ಮೌಲ್ಯದ ಶೂ ಗಿಫ್ಟ್ ಕೊಟ್ಟ ಸಾನಿಯಾ ಮಿರ್ಜಾ

Sania Mirza: ಬಿಗ್ ಬಾಸ್ ವಿನ್ನರ್ ಎಂಸಿ ಸ್ಟಾನ್​ಗೆ ಲಕ್ಷ ಮೌಲ್ಯದ ಶೂ ಗಿಫ್ಟ್ ಕೊಟ್ಟ ಸಾನಿಯಾ ಮಿರ್ಜಾ
mc Stan

ರ್ಯಾಪರ್, ‘ಹಿಂದಿ ಬಿಗ್ ಬಾಸ್ ಸೀಸನ್ 16’ರ (Bigg Boss Hindi) ವಿನ್ನರ್ ಎಂಸಿ ಸ್ಟಾನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ದುಬಾರಿ ಬೆಲೆಯ ಬಟ್ಟೆ ಹಾಗೂ ಶೂ ತೊಟ್ಟು ಅವರು ಕಾಣಿಸಿಕೊಳ್ಳುತ್ತಾರೆ. ಅನೇಕ ಸಂದರ್ಶನಗಳಲ್ಲಿ ಅವರ ಉಡುಗೆ ಹಾಗೂ ಶೂ ಬೆಲೆಯನ್ನು ಕೇಳಲಾಗಿತ್ತು. ಇದಕ್ಕೆ ಅವರು ಯಾವುದೇ ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದರು. ಈಗ ಇವರ ಕಲೆಕ್ಷನ್​ಗೆ ಹೊಸ ಶೂ ಸೇರ್ಪಡೆ ಆಗಿದೆ. ಇದನ್ನು ಕೊಟ್ಟಿದ್ದು ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ಅನ್ನೋದು ವಿಶೇಷ. ಈ ಬಗ್ಗೆ ಎಂಸಿ ಸ್ಟಾನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಎಂಸಿ ಸ್ಟಾನ್ ರ್ಯಾಪ್ ಮೂಲಕ ಹೆಚ್ಚು ಗುರುತಿಸಿಕೊಂಡಿದ್ದಾರೆ. ಲೈವ್ ಒಂದರಲ್ಲಿ ಮಾತನಾಡುತ್ತಾ ಅವರ ಶೂ ಬಗ್ಗೆ ಪ್ರಶ್ನೆ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದರು. ‘ಇದು 80 ಸಾವಿರ ರೂಪಾಯಿಯ ಶೂ. ಇದರಲ್ಲಿ ನಿಮ್ಮ ಮನೆ ನಡೆಯುತ್ತೆ’ ಎಂದು ಹೇಳಿದ್ದ ವಿಡಿಯೋ ವೈರಲ್ ಆಗಿತ್ತು. ಅವರು ಕತ್ತಿಗೆ ಹಾಕುವ ಚಿನ್ನದ ಸರವೂ ಎಲ್ಲರ ಗಮನ ಸೆಳೆದಿತ್ತು. ಈಗ ಅವರು ಮತ್ತೆ ಸುದ್ದಿಯಲ್ಲಿದ್ದಾರೆ.

ಎಂಸಿ ಸ್ಟಾನ್ ಹಾಗೂ ಸಾನಿಯಾ ಮಿರ್ಜಾ ಅನೇಕ ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾಗಿ ಪಾರ್ಟಿ ಮಾಡಿದ್ದಾರೆ. ಅವರಿಗೆ ಸಾನಿಯಾ ಅಕ್ಕ ಇದ್ದಂತೆ. ತಮ್ಮನಿಗೆ ಸಾನಿಯಾ ಪ್ರೀತಿಯಿಂದ ಶೂ ಹಾಗೂ ಗ್ಲಾಸ್ ನೀಡಿದ್ದಾರೆ. ಇದರ ಬೆಲೆ 1.21 ಲಕ್ಷ ರೂಪಾಯಿ. ಫೋಟೋ ಶೇರ್ ಮಾಡಿಕೊಂಡಿರುವ ಸ್ಟಾನ್, ಸಾನಿಯಾಗೆ ಧನ್ಯವಾದ ಹೇಳಿದ್ದಾರೆ.  ‘ಧನ್ಯವಾದಗಳು ಸಾನಿಯಾ’ ಎಂದು ಬರೆದುಕೊಂಡಿರುವ ಸ್ಟಾನ್, ‘ಇದರಲ್ಲಿ ನಿಮ್ಮ ಮನೆ ನಡೆಯುತ್ತದೆ’ ಎಂದು ಕ್ಯಾಪ್ಶನ್ ನೀಡಿದ್ದಾರೆ.

ಇದನ್ನೂ ಓದಿ: 134ನೇ ದಿನಕ್ಕೆ ಪೂರ್ಣಗೊಂಡ ‘ಹಿಂದಿ ಬಿಗ್ ಬಾಸ್​’; ಸ್ಟಾರ್​ಗಳನ್ನು ಹಿಂದಿಕ್ಕಿ ವಿನ್ ಆದ ಎಂಸಿ ಸ್ಟಾನ್

ಬಿಗ್ ಬಾಸ್ ಗೆದ್ದ ನಂತರ ಸ್ಟಾನ್ ಅವರು ‘ಹಸ್ತಿ ಕಾ ಬಸ್ತಿ’ ಟೂರ್ ಘೋಷಣೆ ಮಾಡಿದರು. ದೇಶದ ವಿವಿಧ ಕಡೆಗಳಲ್ಲಿ ತೆರಳಿ ಅವರು ಕಾರ್ಯಕ್ರಮ ನೀಡುತ್ತಿದ್ದಾರೆ. ಈ ಪ್ರವಾಸ ಮಾರ್ಚ್​ 3ಕ್ಕೆ ಇದು ಆರಂಭ ಆಗಿದ್ದು, ಮೇ 7ಕ್ಕೆ ಪೂರ್ಣಗೊಳ್ಳಲಿದೆ. ಈಗಾಗಲೇ ಪುಣೆ, ಮುಂಬೈ, ಬೆಂಗಳೂರು, ಹೈದರಾಬಾದ್ ಮೊದಲಾದ ಕಡೆಗಳಲ್ಲಿ ಅವರು ಕಾರ್ಯಕ್ರಮ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

source https://tv9kannada.com/entertainment/bollywood/sania-mirza-gifted-worth-lakh-rs-shoes-and-glasses-to-mc-stan-rmd-au34-556359.html

Leave a Reply

Your email address will not be published. Required fields are marked *