ಪ್ರಸನ್ನ ಗಣಪತಿ ಮಹೋತ್ಸವದಲ್ಲಿ ಹಾಸ್ಯದ ರಸದೌತಣ: ರಿಚರ್ಡ್ ಲೂಯಿಸ್ ತಂಡದಿಂದ ನಗೆ ಹಬ್ಬ.

ಚಿತ್ರದುರ್ಗ ಸೆ. 21

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ನಗರದ ಆನೆ ಬಾಗಿಲ ಬಳಿ ಇರುವ ಶ್ರೀ ಅಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೆ, 14 ರಿಂದ ನಡೆಯುತ್ತಿರುವ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿವತಿಯ 69ನೇ ವರ್ಷದ ಶ್ರೀ ಪ್ರಸನ್ನ ಗಣಪತಿಯ ಪೂಜಾ ಮಹೋತ್ಸವದ ಅಂಗವಾಗಿ ಸೆ.20ರ ಭಾನುವಾರ ಸಂಜೆ ರಿಚರ್ಡ ಲೂಯಿಸ್ ತಂಡದಿಂದ ನಗೆ ಹಬ್ಬ ಕಾರ್ಯಕ್ರಮವನ್ನು ನಡೆಸಲಾಯಿತು.

ಕರತಾಡನ, ನಿರಂತರ ನಗು ಮತ್ತು ಚಪ್ಪಾಳೆಗಳ ಮೂಲಕ ನೆರೆದಿದ್ದ ನೂರಾರು ಪ್ರೇಕ್ಷಕರು ಹಾಸ್ಯದ ಹೊಳೆಯಲ್ಲಿ ತೇಲಾಡಿದರು. ಹಾಸ್ಯ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ವಿಶಿಷ್ಟ ಶೈಲಿಯ ಭಾಷಣ, ನಗೆ ಚಟಾಕಿ ಮತ್ತು ಚುಟುಕುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ದೈನಂದಿನ ಜೀವನದ ಘಟನೆಗಳು, ಗಂಡ-ಹೆಂಡತಿಯರ ನಡುವಿನ ತಮಾಷೆಯ ಪ್ರಸಂಗಗಳು ಹಾಗೂ ಇಂದಿನ ರಾಜಕೀಯ ಮತ್ತು ಸಾಮಾಜಿಕ ವಿದ್ಯಮಾನಗಳನ್ನು ಹಾಸ್ಯಭರಿತವಾಗಿ ವಿಮರ್ಶಿಸಿದ್ದು ಎಲ್ಲರ ಗಮನ ಸೆಳೆಯಿತು. ಕಲಾವಿದರ ಟೈಮಿಂಗ್ ಮತ್ತು ಪಂಚ್ ಡೈಲಾಗ್‍ಗಳಿಗೆ ಸಭಾಂಗಣವೇ ನಗೆಗಡಲಲ್ಲಿ ಮುಳುಗಿತ್ತು.

ಈ ಸಂದರ್ಭದಲ್ಲಿ ಮೈಸೂರು ಆನಂದರವರು 1970 ರಿಂದ ಹಿಡಿದ 2026ರವರೆಗಿನ ಚಲನಚಿತ್ರದ ಹಾಡುಗಳು ಯಾವ ರೀತಿಯಲ್ಲಿ ಇದ್ದವು ಎಂಬುದನ್ನು ಸಂಗೀತ ಹಾಗೂ ನೃತ್ಯದ ಮೂಲಕ ಸಭಿಕರ ಮುಂದೆ ಪ್ರದರ್ಶನ ಮಾಡಿದರು ಇದಕ್ಕೆ ನೆರದಿದ್ದ ಸಭೀಕರನ್ನು ನಗೆಗಡಲಿನಲ್ಲಿ ಮುಳುಗಿಸಿತು. ಇದಾದ ನಂತರ ಕ್ರಿಕೇಟ್ ಕಾಮೆಂಟರಿಯನ್ನು ಯಾರ ಯಾರ ಕೈಯಲ್ಲಿ ಹೇಳಿಸಿದರೆ ಅವರು ಯಾವ ರೀತಿ ಹೇಳುತ್ತಾರೆ ಎಂಬುದನ್ನು ಸಹಾ ಪ್ರದರ್ಶನ ಪಡಿಸಿದರು. ಮೈಸೂರಿನ ಭಾಷೆಯಲ್ಲಿ ಹರಿಕಥೆಯನ್ನು ಹೇಳುವಂತ ಕೀರ್ತನಕಾರರ ಭಾಷೆಯಲ್ಲಿ ಜಾನಪದ ನುಡಿಯಲ್ಲಿ ದೇಶದ ಆಂಗ್ಲ ಭಾಷೆಯಲ್ಲಿ ವಿದೇಶಿಗರ ಆಂಗ್ಲ ಭಾಷೆಯಲ್ಲಿ ಸೇರಿದಂತೆ ವಿವಿಧ ರೀತಿಯ ಭಾಷೆಗಳಲ್ಲಿ ಹೇಳುವುದರ ಮೂಲಕ ನೆರದಿದ್ದ ಸಭೀಕರನ್ನು ನಗಿಸಿದರು.

ರಿಚರ್ಡ ಲೂಯಿಸ್‍ರವರು ನಮ್ಮ ಮಾತೃ ಭಾಷೆಯ ಅಭೀಮಾನ ಯಾವ ರೀತಿಯಲ್ಲಿ ಇರಬೇಕು ಮನೆಯಲ್ಲಿ ನಮ್ಮ ಮಾತೃಭಾಷೆಯನ್ನು ಮಾತನಾಡಬೇಕು ಹೊರಗಡೆಯಲ್ಲಿ ಬೇರೆ ಭಾಷೆಯನ್ನು ಮಾತನಾಡಿದರು ನಡೆಯುತ್ತದೆ, ಈ ಹಿನ್ನಲೆಯಲ್ಲಿ ಮೊದಲು ನಮ್ಮ ಮಾತೃಭಾಷೆಗೆ ಮಾನ್ಯತೆಯನ್ನು ನೀಡುವುದರ ಮೂಲಕ ನಮ್ಮ ಭಾಷೆಯನ್ನು ಬೆಳಸಬೇಕಿದೆ ಎಂದು ತಿಳಿಸಿ, ತಾವು ತೆಲುಗು ಭಾಷೆಯನ್ನು ಕಲಿತ ಬಗ್ಗೆ ಸಭೀಕರಿಗೆ ಹಾಸ್ಯದ ರೀತಿಯಲ್ಲಿ ವರ್ಣಿಸಿದರು.

ಕಿಲೋಸ್ಕರ್ ಸತ್ಯರವರು ತಮ್ಮ ಜನ ಮೆಚ್ಚಿದ ಭಾಗ್ಯದ ಲಕ್ಷ್ಮೀ ಬಾರಮ್ಮ ಹಾಡನ್ನು ಮುಸ್ಲಿಂರ ಭಾಷೆಯಲ್ಲಿ ಹಾಡುವುದರ ಮೂಲಕ ಜನ ಮನ್ನಣೆಯನ್ನು ಗಳಿಸಿದರು. ಸಮಾರಂಭದಲ್ಲಿ ಭಾಗವಹಿಸಿದ್ದ ಕರ್ನಾಟಕ ಆರ್ಯವೈಶ್ಯ ಸಮುದಾಯದ ಅಭೀವೃದ್ದಿ ನಿಗಮದ ಅಧ್ಯಕ್ಷರಾದ ಕೆ.ವಿ. ರಾಂ ಪ್ರಸಾದ್‍ರವರು ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ನಗು ಎಂಬುದು ಸಂಜೀವಿನಿ ಯಾಗಿದೆ. ಇಂತಹ ನಗೆ ಹಬ್ಬಗಳು ಮನುಷ್ಯನ ಮಾನಸಿಕ ಒತ್ತಡವನ್ನು ದೂರ ಮಾಡಿ, ನೆಮ್ಮದಿ ನೀಡುತ್ತವೆ” ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಕೊನೆಯಲ್ಲಿ ಹಾಸ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಕಲಾವಿದರೊಬ್ಬರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬ ಪ್ರೇಕ್ಷಕರೂ ಮುಖದಲ್ಲಿ ಮಂದಹಾಸ ಹೊತ್ತು ನೆಮ್ಮದಿಯಿಂದ ಮನೆಗೆ ಮರಳಿದರು.

ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಜೆ.ಗೋಪಾಲರಾವ್ ಜಾಧª ಅಧ್ಯಕ್ಷರಾದ ಎಲ್.ಎನ್.ರಾಜಕುಮಾರ್, ಉಪಾಧ್ಯಕ್ಷರಾದ ಎ.ಎಸ್.ನಾರಾಯಣರಾವ್, ಕೆ.ವಿ.ಆನಂದ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ನಾಗರಾಜ್ ಬೇದ್ರೇ, ಖಂಜಾಚಿ ಸಿ.ಶ್ಯಾಂ ಪ್ರಸಾದ್ ಸ್ಥಪತಿ, ಸಹ ಕಾರ್ಯದರ್ಶಿ ಡಿ.ಆರ್.ಮಂಜುನಾಥ್, ಸಹ ಕಾರ್ಯದರ್ಶಿ ಎನ್.ವಿ.ರಮೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಜೆ.ಎನ್.ಶಂಭು, ನಿರ್ದೇಶಕರುಗಳಾದ ಜಿ.ಟಿ.ಗೋಪಾಲಕೃಷ್ಣ ಜಾಧವ್, ಗಜೇಂದ್ರ, ಸಿದ್ದಲಿಂಗೇಶ್ ಜಿ.ಕೆ. ಟಿ.ಯಶವಂತಕುಮಾರ್, ಕಾರ್ತಿಕ್ ಕಠಾರೆ, ವಿದ್ಯಾನಂದ ಲಾಡ್, ಕೃಷ್ಣಜಿರಾವ್ ಮೋರೆ, ಉತ್ಸವ ಸಮಿತಿ ಸದಸ್ಯರಾದ ಎ.ಟಿ.ರಮೇಶ್ ಹಾಗೂ ನಾಗವೀವೇಕ್ ಭಾಗವಹಿಸಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Whats App Channel: https://whatsapp.com/channel/0029VbDbOsBD8SE2H0L3d40j

Leave a Reply

Your email address will not be published. Required fields are marked *