ಚಿತ್ರದುರ್ಗ : ನಗರದಲ್ಲಿ ಡಿಸೆಂಬರ್ 25 ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ,(ಡಿ.24) : ಚಿತ್ರದುರ್ಗ ನಗರ ಉಪವಿಭಾಗದ ವ್ಯಾಪ್ತಿಯ ಘಟಕ-1  ರ ವ್ಯಾಪ್ತಿಯಲ್ಲಿ ಬರುವ ತುರುವನೂರು ರಸ್ತೆ ಅಗಲೀಕರಣ ಕಾಮಗಾರಿಯು ಚಾಲನೆಯಲ್ಲಿರುವ ಕಾರಣ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬ ಮತ್ತು ಪರಿವರ್ತಕಗಳನ್ನು ಸ್ಥಳಾಂತರಿಸುವ ಕಾಮಗಾರಿ ಇರುವುದರಿಂದ ಇದೇ

ಡಿಸೆಂಬರ್ 25 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಚಿತ್ರದುರ್ಗ ನಗರ ಕೆಳಗೋಟೆ ಮಾರ್ಗದ ಬಿ.ಡಿ.ರಸ್ತೆ, ಡಿ.ಸಿ.ಆಫೀಸ್ ಸುತ್ತಮುತ್ತ, ಬಸವೇಶ್ವರ ಟಾಕೀಸ್ ಸುತ್ತಮುತ್ತ, ಆಕಾಶವಾಣಿ ಸುತ್ತಮುತ್ತ, ವಾಸವಿ ಲ್ಯಾಬ್ ಸುತ್ತಮುತ್ತ, ಚಿಕ್ಕಪೇಟೆ, ದೊಡ್ಡಪೇಟೆ, ಲಕ್ಷ್ಮೀ ಬಜಾರ್, ಬಿ.ಎಲ್.ಗೌಡ ಲೇ ಔಟ್, ಆರ್.ಟಿ.ಓ ಕಚೇರಿ ಸುತ್ತಮುತ್ತ, ತುರುವನೂರು ರಸ್ತೆ, ಧರ್ಮಶಾಲಾ ರಸ್ತೆ, ತಿಪ್ಪಜ್ಜಿ ಸರ್ಕಲ್, ಎಸ್ ಬಿ ಎಂ ಬ್ಯಾಂಕ್, ಗಾಂಧಿ ಸರ್ಕಲ್, ಕೆಳಗೋಟೆ ಮುನ್ಸಿಪಲ್ ಕಾಲೋನಿ, ಖಾಜಿ ಮೊಹಲ್ಲ, ಪೊಲೀಸ್ ಬಾರ್ ಲೈನ್ ಸುತ್ತಮುತ್ತಲಿನ ಪ್ರದೇಶಗಳಿಗೆ ಹಾಗೂ ಗೋನೂರು, ಬೆಳಗಟ್ಟ ಮಾರ್ಗದ ವ್ಯಾಪ್ತಿಯ ಪ್ರದೇಶಗಳಿಗೆ ಮತ್ತು ಬ್ಯಾಂಕ್ ಕಾಲೋನಿ ಮಾರ್ಗದ ಪ್ರದೇಶಗಳಾದ ಬ್ಯಾಂಕ್ ಕಾಲೋನಿ, ಸಾಯಿಸಿಟಿ 1,2 & 3, ಮಲ್ಲಯ್ಯ ಬಡಾವಣೆ, ಬಸವೇಶ್ವರ ಆಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶಗಳು, ವೆಂಕಟೇಶ್ವರ ಬಡಾವಣೆ ಮತ್ತು ಮದಕರಿಪುರ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ್ ಕೋರಿದ್ದಾರೆ.

The post ಚಿತ್ರದುರ್ಗ : ನಗರದಲ್ಲಿ ಡಿಸೆಂಬರ್ 25 ರಂದು ವಿದ್ಯುತ್ ವ್ಯತ್ಯಯ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/v0cVxA9
via IFTTT

Leave a Reply

Your email address will not be published. Required fields are marked *