ಅಪ್ಪಿ ತಪ್ಪಿಯೂ ಟೀ ಜೊತೆ ಈ ತಿಂಡಿಗಳನ್ನು ತಿನ್ನಬೇಡಿ..! ಆರೋಗ್ಯಕ್ಕೆ ಒಳ್ಳೆಯದಲ್ಲ

Health: ಕೆಲವರಿಗೆ ಚಹಾದೊಂದಿಗೆ ಆಹಾರಗಳನ್ನು ಸೇವಿಸುವ ಅಭ್ಯಾಸ ಇರುತ್ತದೆ. ಆದ್ರೆ, ಎಲ್ಲಾ ಆಹಾರಗಳು ಚಹಾದೊಂದಿದೆ ಸೇವಿಸಲು ಸೂಕ್ತವಲ್ಲ, ಈ ಸುದ್ದಿಯಲ್ಲಿ ನೀವು ಯಾವ ಆಹಾರ ಪದಾರ್ಥಗಳನ್ನು ಚಹಾದೊಂದೆ ತಿನ್ನಬಾರದು ಎಂದು ತಿಳಿಸಲಾಗಿದೆ. ನೋಡಿ.

 ಚಹಾ ಸೇವನೆಯಿಂದ ಉಲ್ಲಾಸ ಮರುಳುತ್ತದೆ. ಟೆನ್ಶನ್ ಕ್ಲೀಯರ್‌ ಆಗುತ್ತದೆ ಅಂತ ಹೇಳಲಾಗುತ್ತದೆ. ಆದರೂ, ಚಹಾದೊಂದಿಗೆ ತಿನ್ನುವ ಕೆಲವು ಆಹಾರಗಳು ಕೆಲವೊಮ್ಮೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಚಹಾದೊಂದಿಗೆ ಸೇವಿಸಬಾರದ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ ಒಮ್ಮೆ ಗಮನಿಸಿ.

ಚಹಾ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಒಂದು ಟೈಮ್‌ ಊಟವನ್ನಾದ್ರೂ ಬಿಡ್ತಾರೆ ಆದ್ರೆ, ನಮ್ಮ ಜನ ಟೀ ಕುಡಿಯುವುದನ್ನು ಬಿಡುವುದಿಲ್ಲ. ಕೆಲವೊಂದಿಷ್ಟು ಮಂದಿಗೆ ಟೀ ಜೊತೆ ಎನಾದ್ರು ಸ್ನ್ಯಾಕ್ಸ್ ತಿನ್ನುವ ಅಭ್ಯಾಸ ಇರುತ್ತದೆ. ಹಾಗಂತ, ಟೀ ಜೊತೆ ಸಿಕ್ಕ ಸಿಕ್ಕ ತಿಂಡಿಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಿದ್ರೆ, ಯಾವ ವಸ್ತುಗಳನ್ನು ಚಹಾ ಕುಡಿಯುವಾಗ ತಿನ್ನಬಾರದು ಅಂತೀರಾ.. ಮುಂದೆ ಓದಿ..

ಇದನ್ನೂ ಓದಿ:

  • ನಿಂಬೆ : ನಿಂಬೆಯಲ್ಲಿ ವಿಟಮಿನ್ ಸಿ ಹೇರಳವಾಗಿರುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಆದರೂ, ಟೀ ಜೊತೆ ನಿಂಬೆಯನ್ನು ಸೇವಿಸಬೇಡಿ. ತೂಕ ಇಳಿಸಿಕೊಳ್ಳಲು ಲೆಮನ್ ಟೀ ಕುಡಿಯುವವರಿದ್ದಾರೆ. ಆದ್ರೆ, ಚಹಾ ಮತ್ತು ನಿಂಬೆ ಸಂಯೋಜನೆಯು ಆಮ್ಲೀಯತೆಯನ್ನು ಉಂಟುಮಾಡಬಹುದು. 
  • ತಣ್ಣನೆಯ ಆಹಾರ : ಚಹಾದ ಜೊತೆಗೆ ಐಸ್ ಕ್ರೀಂನಂತಹ ತಂಪು ಪದಾರ್ಥಗಳನ್ನು ಸೇವಿಸಬೇಡಿ. ವಿಭಿನ್ನ ತಾಪಮಾನದ ಆಹಾರವನ್ನು ಒಟ್ಟಿಗೆ ತಿನ್ನುವುದು ಅಜೀರ್ಣಕ್ಕೆ ಕಾರಣವಾಗಬಹುದು. 
  • ಕಬ್ಬಿಣದಂಶವಿರುವ ಆಹಾರಗಳು: ಸಿರಿಧಾನ್ಯಗಳು ಮತ್ತು ಬೇಳೆಕಾಳುಗಳನ್ನು ಬಿಸಿ ಚಹಾದೊಂದಿಗೆ ಸೇವಿಸಬಾರದು. ಚಹಾದಲ್ಲಿರುವ ಟ್ಯಾನಿನ್‌ಗಳು ಮತ್ತು ಆಕ್ಸಲೇಟ್‌ಗಳು ಆಹಾರದ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ.
  • ಬೀಜಗಳು : ಇವುಗಳು ಅನೇಕ ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದ್ದರೂ ಸಹ ಚಹಾದೊಂದಿಗೆ ಬೀಜಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಗೋಡಂಬಿ, ಹುರಿದ ಕಡಲೆಕಾಯಿ, ಪಿಸ್ತಾ ಇತ್ಯಾದಿಗಳನ್ನು ಚಹಾದೊಂದಿಗೆ ತಿನ್ನಬೇಡಿ. ಏಕೆಂದರೆ ಇವುಗಳಲ್ಲಿ ಕಬ್ಬಿಣಾಂಶವಿರುತ್ತದೆ. 

Source: https://zeenews.india.com/kannada/health/which-food-not-good-to-eat-while-drinking-tea-131027

Leave a Reply

Your email address will not be published. Required fields are marked *