Skip to content
  • Saturday, July 5, 2025
  • About us
  • Contact us
ಸಮಗ್ರ ಸುದ್ದಿ

ಸಮಗ್ರ ಸುದ್ದಿ

ನಿಖರತೆಗೆ ಮತ್ತೊಂದು ಹೆಸರು

  • Home
  • Chitradurga
  • National
  • States
  • Cities
  • Business
  • Entertainment
  • Health
  • Sports
  • Tech
  • General Konwledge
  • Horoscope
  • Home
  • Sports
  • IPL 2023: ಬರೋಬ್ಬರಿ 827 ರನ್ಸ್​: ಐಪಿಎಲ್​ನಲ್ಲಿ ಹೊಸ ಇತಿಹಾಸ ಸೃಷ್ಟಿ..!
Sports

IPL 2023: ಬರೋಬ್ಬರಿ 827 ರನ್ಸ್​: ಐಪಿಎಲ್​ನಲ್ಲಿ ಹೊಸ ಇತಿಹಾಸ ಸೃಷ್ಟಿ..!

May 1, 2023
samagrasuddi

IPL 2023: ಕಳೆದ 15 ಸೀಸನ್​ ಐಪಿಎಲ್​ನಲ್ಲಿ ಕಂಡರಿಯದ ಹಾಗೂ ಕೇಳರಿಯದ ವಿಶೇಷ ದಾಖಲೆಯೊಂದು ಭಾನುವಾರ ಸೃಷ್ಟಿಯಾಗಿದೆ. ಅದು ಅಂತಿಂಥ ದಾಖಲೆಯಲ್ಲ. ಬದಲಾಗಿ ಒಂದೇ ದಿನ 827 ರನ್​ಗಳ ಐತಿಹಾಸಿಕ ದಾಖಲೆ.ಒಂದು ತಂಡವು 200 ಅಥವಾ ಅದಕ್ಕಿಂತ ಹೆಚ್ಚಿನ ರನ್​ಗಳಿಸಿದರೆ ಪಂದ್ಯವು ಏಕಮುಖದತ್ತ ಸಾಗುವುದು ಸಾಮಾನ್ಯ. ಆದರೆ ಐಪಿಎಲ್​ನಲ್ಲಿ ಭಾನುವಾರ ನಡೆದ 41ನೇ ಹಾಗೂ 42ನೇ ಪಂದ್ಯಗಳು ಇದಕ್ಕೆ ತದ್ವಿರುದ್ಧವಾಗಿತ್ತು. ಎರಡೂ ಪಂದ್ಯಗಳು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು.ಐಪಿಎಲ್​ನ 41ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಇಲ್ಲಿ ಟಾಸ್ ಗೆದ್ದ ಸಿಎಸ್​ಕೆ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಡೆವೊನ್ ಕಾನ್ವೆ ಅವರ ಅಜೇಯ 92 ರನ್​ಗಳ ನೆರವಿನಿಂದ ಸಿಎಸ್​ಕೆ ತಂಡವು 4 ವಿಕೆಟ್ ನಷ್ಟಕ್ಕೆ 200 ರನ್ ಕಲೆಹಾಕಿತು.201 ರನ್​ಗಳ ಬೃಹತ್ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್ ಬ್ಯಾಟ್ಸ್​ಮನ್​ಗಳು ಕೂಡ ಭರ್ಜರಿ ಪ್ರದರ್ಶನ ನೀಡಿದ್ದರು. ಪರಿಣಾಮ ಪಂದ್ಯವು ಅಂತಿಮ ಓವರ್​ನತ್ತ ಸಾಗಿತು. ಕೊನೆಯ ಓವರ್​ನಲ್ಲಿ 9 ರನ್​ಗಳ ಟಾರ್ಗೆಟ್ ಪಡೆದ ಪಂಜಾಬ್ ಕಿಂಗ್ಸ್​ ಅತ್ಯುತ್ತಮ ಹೋರಾಟ ನಡೆಸಿದರು. ಪರಿಣಾಮ ಕೊನೆಯ ಎಸೆತಗಳಲ್ಲಿ 3 ರನ್​ಗಳ ಅವಶ್ಯಕತೆ, ಈ ಹಂತದಲ್ಲಿ ಪತಿರಾನ ಎಸೆತವನ್ನು ಲೆಗ್ ಸೈಡ್​ನತ್ತ ಬಾರಿಸಿ ಸಿಕಂದರ್ ರಾಝ 3 ರನ್ ಓಡಿದರು. ಇದರೊಂದಿಗೆ ಪಂಜಾಬ್ ಕಿಂಗ್ಸ್ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.ಅಂದರೆ ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಐಪಿಎಲ್​ನ 41ನೇ ಪಂದ್ಯದಲ್ಲಿ ಉಭಯ ತಂಡಗಳಿಂದ ಮೂಡಿಬಂದ ಒಟ್ಟು ಸ್ಕೋರ್ 401 ರನ್​ಗಳು.ಇನ್ನು ಐಪಿಎಲ್​ನ 42ನೇ ಪಂದ್ಯದಲ್ಲೂ ಇಂತಹದ್ದೇ ಕುತೂಹಲಕಾರಿ ಪೈಪೋಟಿಗೆ ಮುಂಬೈನ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು.ಆರ್​ಆರ್​ ಪರ ಕಣಕ್ಕಿಳಿದ ಯುವ ಆರಂಭಿಕ ದಾಂಡಿಗ ಯಶಸ್ವಿ ಜೈಸ್ವಾಲ್ ಕೇವಲ 53 ಎಸೆತಗಳಲ್ಲಿ ಶತಕ ಸಿಡಿಸಿದರು. ಅಲ್ಲದೆ 62 ಎಸೆತಗಳಲ್ಲಿ 124 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 7 ವಿಕೆಟ್ ನಷ್ಟಕ್ಕೆ 212 ಕ್ಕೆ ತಂದು ನಿಲ್ಲಿಸಿದರು.213 ರನ್​ಗಳ ಕಠಿಣ ಗುರಿ ಪಡೆದ ಮುಂಬೈ ಇಂಡಿಯನ್ಸ್ ಬ್ಯಾಟ್ಸ್​ಮನ್​ಗಳು ಸಾಂಘಿಕ ಪ್ರದರ್ಶನ ನೀಡಿದರು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ 29 ಎಸೆತಗಳಲ್ಲಿ 55 ರನ್​ ಬಾರಿಸಿ ಅಬ್ಬರಿಸಿದರು. ಪರಿಣಾಮ ಕೊನೆಯ ಓವರ್​ನಲ್ಲಿ 17 ರನ್​ಗಳ ಅವಶ್ಯಕತೆ. ಜೇಸನ್ ಹೋಲ್ಡರ್​ ಎಸೆದ ಅಂತಿಮ ಓವರ್​ನ ಮೊದಲ 3 ಎಸೆತಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸುವ ಮೂಲಕ  ಟಿಮ್ ಡೇವಿಡ್ ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್​ಗಳ ಜಯ ತಂದುಕೊಟ್ಟರು.ಇಲ್ಲಿ ಮುಂಬೈ ಇಂಡಿಯನ್ಸ್ (214) ಹಾಗೂ ರಾಜಸ್ಥಾನ್ ರಾಯಲ್ಸ್ (212) ನಡುವಣ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸ್ಕೋರ್ 426. ಅತ್ತ ಸಿಎಸ್​ಕೆ (200) ಹಾಗೂ ಪಂಜಾಬ್ ಕಿಂಗ್ಸ್ (201) ಕಲೆಹಾಕಿದ್ದು 401 ರನ್​ಗಳು. ನಾಲ್ಕು ತಂಡಗಳ ಒಟ್ಟಾರೆ ಸ್ಕೋರ್ 827 ರನ್​ಗಳು.
ಇದು ಐಪಿಎಲ್​ ಇತಿಹಾಸದಲ್ಲೇ ಒಂದು ದಿನದಲ್ಲಿ ಮೂಡಿಬಂದ ಅತ್ಯಧಿಕ ಸ್ಕೋರ್ ಆಗಿದೆ. ಅಂದರೆ ಕಳೆದ 15 ಸೀಸನ್​ ಐಪಿಎಲ್​ನಲ್ಲಿ ಒಂದೇ ದಿನ ನಾಲ್ಕು ತಂಡಗಳು 200 ರನ್​ ಕಲೆಹಾಕಿರಲಿಲ್ಲ. ಇದೀಗ ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಕಿಂಗ್ಸ್ ಒಟ್ಟು 827 ರನ್​ಗಳಿಸಿ ಐಪಿಎಲ್​ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.

source https://tv9kannada.com/photo-gallery/cricket-photos/ipl-2023-history-of-the-ipl-four-200-plus-totals-in-a-single-day-kannada-news-zp-au50-567594.html

Post navigation

IPL 2023: ಗಿಲ್​ರನ್ನು ತಂಡದಿಂದ ಕೈಬಿಟ್ಟಿದ್ದರ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಕೆಕೆಆರ್ ಸಿಇಒ
IPL 2023: ಸೂರ್ಯನ ಬಾಯಲ್ಲಿ ಇಂಥಾ ಮಾತಾ…! ಔಟಾಗಿದ್ದಕ್ಕೆ ನಾಲಿಗೆ ಹರಿಬಿಟ್ಟ ಮಿ.360; ವಿಡಿಯೋ

Leave a Reply Cancel reply

Your email address will not be published. Required fields are marked *

Recent Comments

  1. Kaveri Sonkamble on SBI ನೇಮಕಾತಿ; ಸರ್ಕಲ್​ ಬೇಸ್ಡ್​​ ಆಫೀಸರ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನMay 31, 2025

    Kaveri Sonkamble

  2. Vani m on SBI Recruitment 2025: SBI ಬ್ಯಾಂಕಿನಲ್ಲಿ 2964 ಹುದ್ದೆಗಳಿಗೆ ನೇಮಕಾತಿ; ಪದವೀಧರರು ಕೂಡಲೇ ಅರ್ಜಿ ಸಲ್ಲಿಸಿMay 13, 2025

    I am complete b. Com in experience of work

  3. Sushma Basayya Hiremath on ಅಗ್ನಿವೀರ್​ ನೇಮಕಾತಿ: ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.April 9, 2025

    Sushma Basayya Hiremath

  4. samagrasuddi on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Tq

  5. Darshan K M on ಮೈಸೂರು| ಶಾರದ ವಿಲಾಸ ಶಿಕ್ಷಣ ಮಹಾವಿದ್ಯಾಲಯ ಸಭಾಂಗಣದಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮ.March 24, 2025

    Meaning full program..✨❤️

CITIES

Cities

🏫 ಕರ್ನಾಟಕದ 4,134 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳಿಗೆ ಅವಕಾಶ

July 4, 2025
samagrasuddi

📅 ದಿನಾಂಕ: 4 ಜುಲೈ 2025✍️ ಸಮಗ್ರ ಸುದ್ದಿ ವಿಶೇಷ ✅ ಮಹತ್ವದ ನಿರ್ಧಾರ: ಕರ್ನಾಟಕ ಸರ್ಕಾರವು 2025–26ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ 4,134 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ತರಗತಿಗಳನ್ನು ಪ್ರಾರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳಿಗೆ ಇಂದಿನ ಸ್ಪರ್ಧಾತ್ಮಕ…

Cities

ಕರ್ನಾಟಕದ ಪ್ರಮುಖ ಐತಿಹಾಸಿಕ ತಾಣಗಳು

July 4, 2025
samagrasuddi
Cities

ದಾವಣಗೆರೆ ಜಿಲ್ಲೆಯ ಮಾರುತಿ ಹೆಚ್ ಗೆ 2025ರ ಇಂಟರ್ ನ್ಯಾಷನಲ್ ಐಕಾನ್ ಪ್ರಶಸ್ತಿ ಪ್ರದಾನ.

July 4, 2025
samagrasuddi
Cities

“ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯ ಮುನ್ಸೂಚನೆ – ರೈತರಿಗೆ ಮುನ್ನೆಚ್ಚರಿಕೆ ಅಗತ್ಯ!”

July 4, 2025
samagrasuddi
Cities Health

ಚಿಂತೆ ಬೇಡ, ಹೃದಯ ಸೇಫ್! — ಹಾಸನ ಜಿಲ್ಲೆಯಲ್ಲಿನ ಹೃದಯಾಘಾತ ಪ್ರಕರಣಗಳಿಗೆ ತಡೆಗಟ್ಟಲು ಸರ್ಕಾರದಿಂದ ಕ್ರಮ

July 2, 2025
samagrasuddi

You may Missed

Health

ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”

July 5, 2025
samagrasuddi
Health

“ಕರ್ನಾಟಕದಲ್ಲಿ COVID-19 ಪ್ರಕರಣಗಳಲ್ಲಿ ಮತ್ತೆ ಹೆಚ್ಚಳ – ಆರೋಗ್ಯ ಇಲಾಖೆ ಎಚ್ಚರಿಕೆ”

July 4, 2025
samagrasuddi
Health

🌿 ತುಳಸಿಯ ಸೌಂದರ್ಯ ಮತ್ತು ಆರೋಗ್ಯ ಮಹತ್ವ

July 4, 2025
samagrasuddi
Health

ಪ್ರತಿನಿತ್ಯ ಈ 3 ಹಣ್ಣುಗಳ ಸೇವನೆಯಿಂದ ಮುಖದ ಸೊಕ್ಕು ಮಾಯ, ಚರ್ಮದ ಹೊಳಪು ಪಳ ಪಳ! | “Facial Wrinkles”

July 3, 2025
samagrasuddi
July 2025
M T W T F S S
 123456
78910111213
14151617181920
21222324252627
28293031  
« Jun    
  • ನೀರಜ್ ಚೋಪ್ರಾ ಪ್ರಧಾನದ ಆಕರ್ಷಣೆ: ಬೆಂಗ್ಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಂದು ಎನ್ ಸಿ ಕ್ಲಾಸಿಕ್ ಸ್ಪರ್ಧೆ
  • 📝 ಎಸ್‌ಎಸ್‌ಎಲ್‌ಸಿ ಬ್ಲೂಪ್ರಿಂಟ್‌ನಲ್ಲಿ ಎಲ್ಲಾ ಮಾದರಿ ಅಂಕಗಳ ಪ್ರಶ್ನೆ
  • “WCL 2025”: ಯುವರಾಜ್ ಸಿಂಗ್ ನಾಯಕತ್ವದಲ್ಲಿ ಟೀಂ ಇಂಡಿಯಾ ಕಣಕ್ಕೆ; ಮೊದಲ ಎದುರಾಳಿ ಪಾಕಿಸ್ತಾನ.
  • ಭಾರತ – ಇಂಗ್ಲೆಂಡ್ 2ನೇ ಟೆಸ್ಟ್‌: ಆಕಾಶ್‌ – ಸಿರಾಜ್‌ ದಾಳಿಗೆ ಕುಸಿದ ಆಂಗ್ಲರು – ಇಬ್ಬರೂ ವೇಗಿಗಳು ಕಬಳಿಸಿದ ವಿಕೆಟ್ ಎಷ್ಟು?
  • ತಿಂಗಳುಗಟ್ಟಲೆ ಕ್ಯಾರೆಟ್ ತಾಜಾವಾಗಿರಲು ಈ ಸಲಹೆಯನ್ನು ಅನುಸರಿಸಿ! “carrot”
Copyright © 2025 ಸಮಗ್ರ ಸುದ್ದಿ
Contact us
Theme by: Theme Horse
Proudly Powered by: WordPress