ಚಿತ್ರದುರ್ಗ : ಪಿಳ್ಳೇಕೆರೆನಹಳ್ಳಿ ಬಳಿ ರಸ್ತೆ ಅಪಘಾತ ; ಇಬ್ಬರ ಸ್ಥಿತಿ ಗಂಭೀರ

 

ಚಿತ್ರದುರ್ಗ, (ಡಿ.26) : ರಾಷ್ಟ್ರೀಯ ಹೆದ್ದಾರಿ 13 ಪಿಳ್ಳೆಕೆರೆನಹಳ್ಳಿ ಬಳಿಯ ಬಾಪೂಜಿ ಶಾಲೆಯ ಮುಂಭಾಗದಲ್ಲಿ ಕಾರು ಬೈಕ್ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇಂದು ಮಧ್ಯಾನ್ಹ ಎರಡು ಗಂಟೆ ಸುಮಾರಿಗೆ ನಡೆದ ರಸ್ತೆ ಅಪಘಾತದಲ್ಲಿ ಹೊಸಪೇಟೆ ಕಡೆಯಿಂದ ವೇಗವಾಗಿ ಬರುತ್ತಿದ್ದ ಕಾರು ಬಾಪೂಜಿ ಶಾಲೆಯ ಮುಂಭಾಗದ ತಿರುವಿನಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಡಿದ್ದಾರೆ.

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಗಾಯಗೊಂಡವರ ಮಾಹಿತಿ ಮತ್ತು ಇತರೆ
ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

The post ಚಿತ್ರದುರ್ಗ : ಪಿಳ್ಳೇಕೆರೆನಹಳ್ಳಿ ಬಳಿ ರಸ್ತೆ ಅಪಘಾತ ; ಇಬ್ಬರ ಸ್ಥಿತಿ ಗಂಭೀರ first appeared on Kannada News | suddione.

from ಚಿತ್ರದುರ್ಗ – Kannada News | suddione https://ift.tt/7hjsJaN
via IFTTT

Leave a Reply

Your email address will not be published. Required fields are marked *