CBI ನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ : 2 ವರ್ಷಗಳ ಕಾಲ ಸೇವೆ

 

 

ಬೆಂಗಳೂರು: ಕರ್ನಾಟಕದ ಡಿಜಿ-ಐಜಿಪಿ ಪ್ರವೀಣ್ ಸೂದ್ ಸದ್ಯ ಸಿಬಿಐ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಹಾಲಿ ಸಿಬಿಐ ನಿರ್ದೇಶಕರಾಗಿರುವ ಸುಭೋದ್ ಕುಮಾರ್ ಜೈಸ್ವಾಲ್ ಇದೇ ತಿಂಗಳು ಅಂದ್ರೆ ಮೇ 25ಕ್ಕೆ ನಿವೃತ್ತಿ ಹೊಂದಲಿದ್ದಾರೆ. ಅವರ ಸ್ಥಾನಕ್ಕೆ ಪ್ರವೀಣ್ ಸೂದ್ ಅವರನ್ನು ನೇಮಕ ಮಾಡಲಾಗಿದೆ.

 

ಕೊನೆ ಕ್ಷಣದವರೆಗೂ ಪ್ರವೀಣ್ ಸೂದ್ ಅವರ ಹೆಸರು ರೇಸ್ ನಲ್ಲಿತ್ತು. ಕೊನೆಗೆ ಅವರ ಹೆಸರೇ ಫೈನಲ್ ಆಗಿದೆ. ಮುಂದಿನ ಎರಡು ವರ್ಷಗಳ ಕಾಲ ನಿರ್ದೇಶಕರಾಗಿ ಮುಂದುವರೆಯುತ್ತಾರೆ. ಸಿಬಿಐಗೆ ಆಯ್ಕೆಯಾದ ಕರ್ನಾಟಕದ ಮೂರನೇ ಕೇಡರ್ ಇವರಾಗಿದ್ದಾರೆ.

ಸಿಬಿಐ ನಿರ್ದೇಶಕ ಸ್ಥಾನಕ್ಕೆ, ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭೆಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ ಸೇರಿ ಆಯ್ಕೆ ಮಾಡಿದ್ದಾರೆ. 2020 ಮೇ 1ರಂದು ಪ್ರವೀಣ್ ಸೂದ್, ಕರ್ನಾಟಕದ ಡಿಜಿ ಮತ್ತು ಐಜಿಪಿಯಾಗಿ ಆಯ್ಕೆಯಾಗಿದ್ದರು.

The post CBI ನಿರ್ದೇಶಕರಾಗಿ ಪ್ರವೀಣ್ ಸೂದ್ ನೇಮಕ : 2 ವರ್ಷಗಳ ಕಾಲ ಸೇವೆ first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/W4T7Qp3
via IFTTT

Leave a Reply

Your email address will not be published. Required fields are marked *