IPL 2023: 0,0,0,0,0: ಸೊನ್ನೆ ಸುತ್ತುವುದರಲ್ಲೂ ದಾಖಲೆ ಬರೆದ ಜೋಸ್ ಬಟ್ಲರ್..!

ಧರ್ಮಶಾಲಾದಲ್ಲಿ ನಡೆಯುತ್ತಿರುವ ಐಪಿಎಲ್​ನ ಮಹತ್ವದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 188 ರನ್​ಗಳ ಕಠಿಣ ಸವಾಲು ನೀಡಿದೆ.ಆದರೆ ಈ ರನ್ ಚೇಸ್‌ ಆರಂಭಿಸಿರುವ ರಾಜಸ್ಥಾನಕ್ಕೆ ಕಳಪೆ ಆರಂಭ ದೊರೆತಿದೆ. ತಂಡದ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡಿದ್ದಾರೆ. ಇದರೊಂದಿಗೆ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದ್ದಾರೆ.ಕಳೆದ ಆವೃತ್ತಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ಬಟ್ಲರ್ ಅವರ ಬ್ಯಾಟ್ ಈ ಆವೃತ್ತಿಯಲ್ಲಿ ಮಂಕಾಗಿದೆ. ಇಂದಿನ ಪಂದ್ಯವನ್ನು ಸೇರಿದಂತೆ ಬಟ್ಲರ್, ಈ ಆವೃತ್ತಿಯಲ್ಲಿ ದಾಖಲೆಯ ಐದನೇ ಬಾರಿಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.ಈ ಮೂಲಕ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಬಾರಿ ಶೂನ್ಯಕ್ಕೆ ಔಟಾದ ಕಳಪೆ ದಾಖಲೆಯನ್ನು ಬಟ್ಲರ್ ಬರೆದುಕೊಂಡಿದ್ದಾರೆ. ಹಾಗಿದ್ದರೆ ಒಂದು ಆವೃತ್ತಿಯಲ್ಲಿ ಯಾವ ಆಟಗಾರ ಹೆಚ್ಚು ಭಾರಿ ಶೂನ್ಯ ಸುತ್ತಿದ್ದಾನೆ ಎಂಬುದನ್ನು ನೋಡುವುದಾದರೆ..ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್) - 2023 - 5 ಹರ್ಷಲ್ ಗಿಬ್ಸ್ ( ಡೆಕ್ಕನ್ ಚೇಂಜರ್ಸ್) - 2009 - 4 ಮಿಥುನ್ ಮನ್ಹಾಸ್ (ಪುಣೆ ವಾರಿಯರ್ಸ್ ಇಂಡಿಯಾ) - 2011 - 4 ಮನೀಶ್ ಪಾಂಡೆ (ಪುಣೆ ವಾರಿಯರ್ಸ್ ಇಂಡಿಯಾ) - 2012 - 4 ಶಿಖರ್ ಧವನ್ (ದೆಹಲಿ ಕ್ಯಾಪಿಟಲ್ಸ್) - 2020 - 4 ಇಯಾನ್ ಮಾರ್ಗನ್ (ಕೋಲ್ಕತ್ತಾ ನೈಟ್ ರೈಡರ್ಸ್) - 2021 - 4 ನಿಕೋಲಸ್ ಪೂರನ್ (ಪಂಜಾಬ್ ಕಿಂಗ್ಸ್) - 2021 - 4

source https://tv9kannada.com/photo-gallery/cricket-photos/ipl-2023-jos-buttler-records-most-ducks-in-a-season-psr-582721.html

Leave a Reply

Your email address will not be published. Required fields are marked *