IPL 2023: ಹೀಗಾದ್ರೆ ರಾಜಸ್ಥಾನ್ ರಾಯಲ್ಸ್​ ಕೂಡ ಪ್ಲೇಆಫ್​ಗೆ ಪ್ರವೇಶಿಸಬಹುದು..!

IPL 2023: ಐಪಿಎಲ್​ನ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನುಳಿದಿರುವುದು ಕೇವಲ 4 ಪಂದ್ಯಗಳು ಮಾತ್ರ. ಈ ನಾಲ್ಕು ಪಂದ್ಯಗಳ ಫಲಿತಾಂಶದ ಬೆನ್ನಲ್ಲೇ ಈ ಬಾರಿ ಪ್ಲೇಆಫ್ ಆಡುವ 4 ತಂಡಗಳಾವುವು ಎಂಬುದು ನಿರ್ಧಾರವಾಗಲಿದೆ.ಇದುವರೆಗೆ ಒಟ್ಟು 66 ಪಂದ್ಯಗಳು ಮುಗಿದರೂ ಪ್ಲೇಆಫ್ ಪ್ರವೇಶಿಸಿರುವುದು ಗುಜರಾತ್ ಟೈಟಾನ್ಸ್ ಮಾತ್ರ. ಇನ್ನುಳಿದ 3 ಸ್ಥಾನಗಳಿಗಾಗಿ 6 ತಂಗಳ ನಡುವೆ ಪೈಪೋಟಿ ಇದೆ ಎಂಬುದು ವಿಶೇಷ. ಆದರೆ ಈ ಪೈಪೋಟಿಯಲ್ಲಿ ಇತರೆ ತಂಡಗಳ ಫಲಿತಾಂಶ ಬಹಳ ಮುಖ್ಯವಾಗಿ ಪರಿಣಮಿಸಿದೆ.ಅಂದರೆ ಸಿಎಸ್​ಕೆ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಮುಂದಿನ ಪಂದ್ಯಗಳನ್ನು ಗೆದ್ದುಕೊಂಡರೆ ಪ್ಲೇಆಫ್ ಪ್ರವೇಶಿಸುವುದು ಖಚಿತ. ಹಾಗೆಯೇ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ತಂಡಗಳು ಮುಂದಿನ ಪಂದ್ಯ ಗೆದ್ದರೆ, ಹೆಚ್ಚು ನೆಟ್ ರನ್ ರೇಟ್​ ಹೊಂದಿರುವ ತಂಡ ಅಗ್ರ-4 ರಲ್ಲಿ ಸ್ಥಾನ ಪಡೆಯಲಿದೆ.ಒಂದು ವೇಳೆ ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಗೆದ್ದರೆ ಹಾಗೂ ಆರ್​ಸಿಬಿಯನ್ನು ಗುಜರಾತ್ ಟೈಟಾನ್ಸ್ ಸೋಲಿಸಿದರೆ ರಾಜಸ್ಥಾನ್ ರಾಯಲ್ಸ್​ಗೆ ಪ್ಲೇಆಫ್ ಪ್ರವೇಶಿಸುವ ಅವಕಾಶ ದೊರೆಯಲಿದೆ.ಅಂದರೆ ಪ್ರಸ್ತುತ ಪಾಯಿಂಟ್ಸ್ ಟೇಬಲ್​ನಲ್ಲಿ 5ನೇ ಸ್ಥಾನದಲ್ಲಿರುವ ರಾಜಸ್ಥಾನ್ ರಾಯಲ್ಸ್​ಗೆ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ತಂಡಗಳ ಮುಂದಿನ ಪಂದ್ಯಗಳ ಫಲಿತಾಂಶ ಬಹಳ ಮುಖ್ಯ.
ಇಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್​ಗೆ ಸೋಲುಣಿಸಿದರೆ ರಾಜಸ್ಥಾನ್ ರಾಯಲ್ಸ್ ಆರ್​ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಪಂದ್ಯವನ್ನು ಎದುರು ನೋಡಲಿದೆ.ಏಕೆಂದರೆ ಮುಂದಿನ ಪಂದ್ಯದಲ್ಲಿ ಮುಂಬೈ ಸೋತರೆ, ರಾಜಸ್ಥಾನ್ ರಾಯಲ್ಸ್ ಪಾಲಿಗೆ ಗುಜರಾತ್ ಟೈಟಾನ್ಸ್ ಗೆಲ್ಲಬೇಕು. ಒಂದು ವೇಳೆ ಆರ್​ಸಿಬಿ ತಂಡದ ವಿರುದ್ಧ 6 ರನ್​ಗಳಿಂದ ಅಥವಾ 4 ಬಾಲ್​ಗಳು ಬಾಕಿಯಿರುವಂತೆ ಗುಜರಾತ್ ಟೈಟಾನ್ಸ್ ತಂಡ ಗೆದ್ದರೆ ರಾಜಸ್ಥಾನ್ ರಾಯಲ್ಸ್ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಲಿದೆ.ಇದೇ ಕಾರಣದಿಂದಾಗಿ ಇದೀಗ ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ತಂಡದ ಸೋಲನ್ನು ಎದುರು ನೋಡುತ್ತಿದೆ. ಹೀಗಾದಲ್ಲಿ ರಾಜಸ್ಥಾನ್ ರಾಯಲ್ಸ್  ಪ್ಲೇಆಫ್​ಗೆ ಅಚ್ಚರಿಯ ಎಂಟ್ರಿ ಕೊಡಲಿದೆ.

source https://tv9kannada.com/photo-gallery/cricket-photos/ipl-2023-rajasthan-royals-to-qualify-for-ipl-2023-playoffs-kannada-news-zp-583117.html

Leave a Reply

Your email address will not be published. Required fields are marked *