ಮಧುಮೇಹಕ್ಕೆ ‘ಬೀನ್ಸ್’ ಸೂಪರ್‌ಫುಡ್..! ಹೇಗೆ ಗೊತ್ತಾ.. ತಪ್ಪದೇ ತಿಳಿಯಿರಿ

Beans Health tips : ಆಹಾರದಲ್ಲಿ ಸೇರಿಸಬಹುದಾದ, ಸುಲಭವಾಗಿ ಲಭ್ಯವಿರುವ ತರಕಾರಿಗಳಲ್ಲಿ ಬೀನ್ಸ್ ಕೂಡ ಒಂದು. ಇದು ಮಧುಮೇಹಕ್ಕೆ ಸೂಪರ್‌ಫುಡ್ ಆಗಿದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಬೀನ್ಸ್‌ನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ನಕಡಿಮೆಯಾಗಿರುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆಯಂತೆ.

Health tips : ಮಧುಮೇಹವು ಜನರ ಪ್ರಮುಖ ಆರೋಗ್ಯ ಸಮಸ್ಯೆಯಲ್ಲಿ ಒಂದು. ಸಕ್ಕರೆ ಖಾಯಿಲೆ ಜೊತೆ ಜೀವನಪರ್ಯಂತ ಹೋರಾಡಬೇಕಾಗುತ್ತದೆ. ಅಲ್ಲದೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕಾಗುತ್ತದೆ. ದೀರ್ಘಕಾಲದ ಅಧಿಕ ಸಕ್ಕರೆ ರೋಗವು ಆರೋಗ್ಯದ ಮೇಲೆ ಮಾರಣಾಂತಿಕ ಪರಿಣಾಮಗಳನ್ನು ಬೀರಬಹುದು. ಜೀವನಶೈಲಿ ಮತ್ತು ಆಹಾರ ಸೇವನೆಯ ಬದಲಾವಣೆಯಿಂದ ಮಧುಮೇಹವನ್ನು ನಿರ್ವಹಿಸಬಹುದು. ಮಧುಮೇಹ ರೋಗಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಹೆಚ್ಚಿನ ಫೈಬರ್ ಆಹಾರಗಳು, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ಗಳನ್ನು ಸೇವಿಸಬೇಕು. 

ಮಧುಮೇಹವನ್ನು ನಿಯಂತ್ರಿಸುವ ಸೂಪರ್‌ಫುಡ್‌ಗಳಲ್ಲಿ ಬೀನ್ಸ್‌ ಕೂಡ ಒಂದು. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​ಪ್ರಕಾರ, ಬೀನ್ಸ್‌ನಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ನ ಅಂಶ ಕಡಿಮೆಯಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಅಲ್ಲದೆ, ಬೀನ್ಸ್ ಪ್ರೋಟೀನ್ ಮತ್ತು ಫೈಬರ್ನಿಂದ ತುಂಬಿದ್ದು, ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. 

ಮಧುಮೇಹಿಗಳಿಗೆ ಬೀನ್ಸ್ ತಿನ್ನುವುದರಿಂದ ಅನೇಕ ಪ್ರಯೋಜನಗಳು : ಜರ್ನಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಪಿಂಟೋ ಬೀನ್ಸ್, ಕಪ್ಪು ಬೀನ್ಸ್ ಅಥವಾ ಕೆಂಪು ಕಿಡ್ನಿ ಬೀನ್ಸ್ ಅನ್ನು ಸೇವಿಸಿದ ಟೈಪ್ -2 ಮಧುಮೇಹಿಗಳ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಅಥವಾ ರಕ್ತದಲ್ಲಿನ ಹಾನಿಕಾರಕ ಸಕ್ಕರೆಯ ಸ್ಪೈಕ್‌ಗಳು ಕಂಡು ಬಂದಿಲ್ಲ ಎಂದು ತಿಳಿದು ಬಂದಿದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಬೀನ್ಸ್ ಹೇಗೆ ಸಹಾಯ ಮಾಡುತ್ತದೆ? : ಬೀನ್ಸ್‌ನಲ್ಲಿ ಅಧಿಕ ಪ್ರೊಟೀನ್‌ ಅಂಶ ಇರುತ್ತದೆ. ಇದು ಬಹಳಷ್ಟು ಫೈಬರ್‌ ಹೊಂದಿರುತ್ತದೆ. ತಿನ್ನಲು ಆರೋಗ್ಯಕರವಾಗಿರುತ್ತದೆ. ಆಲೂಗಡ್ಡೆ ಮತ್ತು ಅಕ್ಕಿಗಿಂತ ಹೆಚ್ಚಿನ ಪ್ರೊಟಿನ್‌ ಹೊಂದಿವೆ. ಇದು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. 

ದಿನಕ್ಕೆ ಎಷ್ಟು ಬೀನ್ಸ್ ಸೇವಿಸಬೇಕು? : ಬೀನ್ಸ್ ಅನ್ನು ಅನ್ನ ಅಥವಾ ರೊಟ್ಟಿಯೊಂದಿಗೆ ಸೇವನೆ ಮಾಡಬಹುದು ಅಂತ ವೈದ್ಯರು ಹೇಳುತ್ತಾರೆ. ಬೀನ್ಸ್ ಅನ್ನು ನೇರವಾಗಿಯೂ ತಿನ್ನಬಹುದು. ಸಲಾಡ್‌ಗಳು, ಸೂಪ್‌ಗಳನ್ನು ಮಾಡಬಹುದು. ಕೆಲವು ವೈದ್ಯರು ಬೀನ್ಸ್ ಅನ್ನು ಬೆಳ್ಳುಳ್ಳಿ ಮತ್ತು ಶುಂಠಿಯೊಂದಿಗೆ ಸೇರಿಸಿ ತಿನ್ನಲು ಸಲಹೆ ನೀಡುತ್ತಾರೆ.

Source: https://zeenews.india.com/kannada/health/beans-for-diabetic-patients-and-beans-health-benefits-136236

Leave a Reply

Your email address will not be published. Required fields are marked *